/newsfirstlive-kannada/media/post_attachments/wp-content/uploads/2025/03/Ranya-roa-Gold-Case-3.jpg)
ಬೆಂಗಳೂರು: ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟಿ ರನ್ಯಾ ಲಾಕ್ ಆಗಿದ್ದಾರೆ. ಕೇಸ್ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಹೊಸದೊಂದು ತಲೆ ನೋವು ಶುರುವಾಗಿದೆ.
ಅದು ಏನೆಂದರೆ ತನಿಖೆ ವೇಳೆ ಕೇಳುವ ಪ್ರಶ್ನೆಗಳಿಗೆ ರನ್ಯಾ ಸರಿಯಾಗಿ ಉತ್ತರ ನೀಡುತ್ತಿಲ್ಲವಂತೆ. ಅದಕ್ಕೂ ಉಪಾಯ ಮಾಡಿರುವ ಪೊಲೀಸರು, ಟೆಕ್ನಿಕಲ್ ಆಗಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ನಟಿಯ ಮೊಬೈಲ್ ವಶಕ್ಕೆ ಪಡೆದು ಕಾಲ್ ಡಿಟೈಲ್ಸ್ ತಗೆದು ತನಿಖೆ ಮಾಡಲು ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ: ಪ್ರತಿ ಬಾರಿಯೂ ಒಂದೇ ಜಾಕೆಟ್.. ನಟಿ ರನ್ಯಾ ರಾವ್ ಬಟ್ಟೆ ಮೇಲೆ ಅನುಮಾನ; ಏನಿದು ಮೆಗಾ ಟಿಸ್ಟ್?
ಟೆಕ್ನಿಕಲ್ ತನಿಖೆಯಿಂದ ರನ್ಯಾ ಜೊತೆ ನಿರಂತರ ಸಂಪರ್ಕದಲ್ಲಿದ್ದವರಿಗೆ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ. ಕಾಲ್ ಡಿಟೈಲ್ಸ್ನಿಂದ ಚಿನ್ನದ ಮೂಲ ಹಾಗೂ ಚಿನ್ನ ತಲುಪಿಸುವ ವಿಳಾಸದ ಬಗ್ಗೆ ಮಾಹಿತಿ ಸಿಗಬಹುದು ಅನ್ನೋದು ಅಧಿಕಾರಿಗಳ ಲೆಕ್ಕಚಾರ. ಆ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಲು ತನಿಖಾಧಿಕಾರಿಗಳ ತಂಡ ಮುಂದಾಗಿದೆ.
ಪ್ರಶ್ನೆಗಳು ಏನೇನು?
ವಿದೇಶದಿಂದ ರಾಜರೋಷವಾಗಿ ಚಿನ್ನ ತರೋದಕ್ಕೆ ಹೇಗೆ ಸಾಧ್ಯ? ಈ ಹಿಂದೆ ಇದೇ ರೀತಿ ತಂದಿದ್ರೆ ಏರ್ ಪೋರ್ಟ್ನಿಂದ ಆಕೆ ಸುಲಭವಾಗಿ ಹೊರ ಬಂದಿದ್ದು ಹೇಗೆ? ರನ್ಯಾಳ ಹಿಂದೆ ದೊಡ್ಡ ಸಿಂಡಿಕೇಟ್ ಕೆಲಸ ಮಾಡುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ. ರನ್ಯಾ ಪ್ರಕರಣದಿಂದಾಗಿ ಕೆಲವು ಗಣ್ಯರಿಗೂ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಗುಡ್ನ್ಯೂಸ್.. ಸುನಿತಾ ವಿಲಿಯಮ್ಸ್ ಭೂಮಿಗೆ ಬರುವ ಬಗ್ಗೆ ಅಪ್ಡೇಟ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ