newsfirstkannada.com

ದರ್ಶನ್ ಮಾತ್ರವಲ್ಲ.. ಅಭಿಮಾನಿಗಳಿಗೂ ಇದೆ ಹಬ್ಬ.. ಬಾಲ ಕಟ್ ಮಾಡಲು ಲಿಸ್ಟ್ ರೆಡಿ..!

Share :

Published June 19, 2024 at 12:58pm

    ದರ್ಶನ್ ಹೆಸರಲ್ಲಿ ಬಾಲ ಬಿಚ್ಚುತ್ತಿರೋರ ಲಿಸ್ಟ್ ರೆಡಿ

    ಸೋಶಿಯಲ್ ಮೀಡಿಯಾದಲ್ಲಿ ಹದ್ದಿನ ಕಣ್ಣು

    RR ನಗರ, ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಂದ ಪ್ಲಾನ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಜೈಲಿಗೆ ಹೋಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ನಾಳೆ ಪೊಲೀಸ್ ಕಸ್ಟಡಿ ಅಂತ್ಯವಾಗುತ್ತಿದ್ದು, ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಇದೆ. ಇತ್ತ ನ್ಯಾಯಾಂಗ ಬಂಧನಕ್ಕೆ ಹೋಗ್ತಿದ್ದಂತೆ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ರೌಡಿ ಶೀಟ್ ತೆರೆಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲ, ದರ್ಶನ್ ಅಭಿಮಾನಿಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ನಟ ದರ್ಶನ್​ಗೆ ಕಾದಿದೆ ಮತ್ತೊಂದು ಬಿಗ್ ಶಾಕ್.. ಜೈಲು ಸೇರ್ತಿದ್ದಂತೆ ಪೊಲೀಸರಿಂದ ಪಕ್ಕಾ ಪ್ಲಾನ್..!

ದರ್ಶನ್ ಅಂಡ್ ಗ್ಯಾಂಗ್​ ಅನ್ನು ಜೈಲಿಗೆ ಕಳುಹಿಸಿ ಫ್ಯಾನ್ಸ್​​ ಬಾಲ ಕಟ್ ಮಾಡಲು ನಿರ್ಧರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನೆಗೆಟೀವ್ ಕಾಮೆಂಟ್ ಹಾಗೂ ದರ್ಶನ್ ಪರ ವಹಿಸಿಕೊಂಡು ಬಾಯಿಗೆ ಬಂದಂತೆ ಪೋಸ್ಟ್ ಹಾಕ್ತಿರೋರಿಗೆ ಬಿಸಿ ಮುಟ್ಟಿಸಲು ಪೊಲೀಸರು ಪ್ಲಾನ್ ಮಾಡಿದ್ದಾರಂತೆ.

ಯಾರ್ಯಾರು ಕೆಟ್ಟದಾಗಿ‌ ಕಾಮೆಂಟ್ಸ್ ಹಾಕ್ತಿದ್ದಾರೆ ಅಂತವರು, ರೌಡಿಗಳು ನಾವು.. ಕೊಲೆ ಮಾಡೋದೇ.. ನಿಮಗೆಲ್ಲಾ ಮುಂದೈತೆ ಅಂತಾ ಆವಾಜ್ ಹಾಕಿದವರ ಲಿಸ್ಟ್​ ರೆಡಿ ಮಾಡ್ಕೊಂಡಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಮೆಂಟ್ ಹಾಕ್ತಿರೋ ಡಿಬಾಸ್​ ಅಭಿಮಾನಿಗಳ ಲಿಸ್ಟ್ ಮಾಡಿಕೊಳ್ತಿದ್ದಾರೆ. ಎಂದು ತಿಳಿದುಬಂದಿದೆ. ಅಸಭ್ಯ ಹಾಗೂ ಧಮ್ಕಿ ಹಾಕ್ತಿರೊ ಫ್ಯಾನ್ಸ್ ಗಳ ವಿರುದ್ಧ ಕೇಸ್ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಸೂಪರ್ 8ರಲ್ಲಿ ಮೂವರು ಫಿಕ್ಸ್​.. ಭಾರತದ ಗೆಲುವಿಗೆ ಬೇಕೇಬೇಕು ಈ ಸ್ಪಿನ್ ಟ್ವಿನ್ಸ್ ಜೋಡಿ.. ರೋಹಿತ್ ಆಯ್ಕೆ ಏನು?

ಪ್ರತೀ ಜಿಲ್ಲೆಯಲ್ಲೂ ಫ್ಯಾನ್ಸ್ ಹೆಸರಲ್ಲಿ ದರ್ಶನ್ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ಪ್ರತಿ ಜಿಲ್ಲೆಯಲ್ಲೂ ದರ್ಶನ್​ ಅವರ ಗ್ಯಾಂಗ್ ಆಕ್ಟೀವ್ ಆಗಿದೆ. ಆರೋಪಿಗಳ ವಿಚಾರಣೆಯಲ್ಲಿ ದರ್ಶನ್ ನಿಜಬಣ್ಣ ಹೊರಬಂದಿದ್ದು, ಅಸಲಿಗೆ ಕಾನೂನು ಅನ್ನೋದು ಲೆಕ್ಕಕ್ಕೇ ಇಲ್ವಾ ಎನ್ನುವಂತಾಗಿದೆ. ಹೀಗಾಗಿ ನಾಳೆ ದರ್ಶನ್ ಅಂಡ್ ಗ್ಯಾಂಗ್​ನ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಕೋರ್ಟ್​ಗೆ ಅವರನ್ನು ಒಪ್ಪಿಸಿದ ನಂತರ, ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ. ಜೈಲು ಸೇರುತ್ತಿದ್ದಂತೆಯೇ ದರ್ಶನ್ ಮೇಲೆ ರೌಡಿ ಶೀಟ್ ತೆರೆಯಲು ಮುಂದಾಗಿದ್ದಾರೆ.

ಇದನ್ನೂ ಓದಿ:ರೇಣುಕಾಸ್ವಾಮಿ ಸತ್ತ ಮೇಲೂ ಕಾಡದ ಪಶ್ಚಾತಾಪ.. ಕೊಲೆ ಮಾಡಿದ ಬೆನ್ನಲ್ಲೇ ನಡೆದ ಎಣ್ಣೆ ಪಾರ್ಟಿಗಳು ಎಷ್ಟು ಗೊತ್ತಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಮಾತ್ರವಲ್ಲ.. ಅಭಿಮಾನಿಗಳಿಗೂ ಇದೆ ಹಬ್ಬ.. ಬಾಲ ಕಟ್ ಮಾಡಲು ಲಿಸ್ಟ್ ರೆಡಿ..!

https://newsfirstlive.com/wp-content/uploads/2024/06/DARSHAN-39.jpg

Load More