ಅಲ್ಲು ಅರ್ಜುನ್ ಜೊತೆ ಪೊಲೀಸರು ಅನುಚಿತ ವರ್ತನೆ ಆರೋಪ; ಅಷ್ಟಕ್ಕೂ ಮನೆಯಲ್ಲಿ ಆಗಿದ್ದೇನು..?

author-image
Ganesh
Updated On
ಜೈಲಿಂದ ಮನೆಗೆ ಬರ್ತಿದ್ದಂತೆ ಅಲ್ಲು ಅರ್ಜುನ್ ಭಾವುಕ; ಓಡಿ ಬಂದು ತಬ್ಬಿಕೊಂಡ ಪತ್ನಿ.. ಘಟನೆ ಬಗ್ಗೆ ಬೇಸರ..!
Advertisment
  • ಸಂಧ್ಯಾ ಥಿಯೇಟರ್ ಕಾಲ್ತುಳಿತ ಕೇಸ್​ಗೆ ಪೊಲೀಸರು ಸ್ಪಷ್ಟನೆ
  • ಡಿಸೆಂಬರ್ 4 ರಂದು ಹೈದರಾಬಾದ್​ನಲ್ಲಿ ನಡೆದಿದ್ದ ಪ್ರಕರಣ
  • ನಿನ್ನೆ ಅಲ್ಲು ಅರ್ಜನ್​ನನ್ನು ಬಂಧಿಸಿದ್ದ ಹೈದರಾಬಾದ್ ಪೊಲೀಸರು

ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಜೈಲು ಸೇರಿದ್ದ ಅಲ್ಲು ಅರ್ಜುನ್, ಇಂದು ಬೆಳಗ್ಗೆ ಜೈಲಿನಿಂದ ರಿಲೀಸ್ ಆಗಿದ್ದಾರೆ. ನಿನ್ನೆ ಬಂಧನದ ವೇಳೆ ಪೊಲೀಸರು ಅಲ್ಲು ಅರ್ಜುನ್ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳು ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಸಂಧ್ಯಾ ಥಿಯೇಟರ್​​ನಲ್ಲಿ ನಡೆದ ಘಟನೆ ಬಗ್ಗೆಯೂ ಮತ್ತೊಮ್ಮೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ದೊಡ್ಡ ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಕೇಳುವುದು ಕಡ್ಡಾಯ. ಸಂಘಟಕರು ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಅನುಮತಿ ಪಡೆಯಬೇಕು. ಈ ಘಟನೆಯಲ್ಲಿ ಸಂಧ್ಯಾ ಥಿಯೇಟರ್ ಆಡಳಿತ ಮಂಡಳಿ ಪತ್ರ ನೀಡಿ ಅಲ್ಲಿಂದ ತೆರಳಿತ್ತು.

ಇದನ್ನೂ ಓದಿ:ಪುಷ್ಪ- 2 ಮೂವಿ ನೋಡುವಾಗ ಕಿವಿ ಕಚ್ಚಿದ ಮಾಲೀಕ.. FIR ದಾಖಲು, ಅಸಲಿ ಕಾರಣವೇನು?

publive-image

ಹೀರೋ ಆಗಮನದ ಬಗ್ಗೆ ಯಾವುದೇ ಮಾಹಿತಿ ನೀಡದಿದ್ದರೂ, ಪೂರ್ವಭಾವಿ ಕ್ರಮವಾಗಿ ನಾವು ವ್ಯವಸ್ಥೆ ಮಾಡಿದ್ದೇವೆ. ಅಲ್ಲು ಅರ್ಜುನ್ ಆಗಮಿಸುವವರೆಗೂ ಜನಸಂದಣಿ ಸಾಮಾನ್ಯವಾಗಿತ್ತು. ಅಲ್ಲು ಅರ್ಜುನ್ ಆಗಮಿಸಿದ ನಂತರ ಪರಿಸ್ಥಿತಿ ಕೈಮೀರಿದೆ. ಥಿಯೇಟರ್ ಪ್ರವೇಶಿಸುವ ಮುನ್ನ ಅಲ್ಲು ಅರ್ಜುನ್ ಕಾರಿನಿಂದ ಇಳಿದು ಅಭಿಮಾನಿಗಳಿಗೆ ಶುಭಾಶಯ ಕೋರಿದರು.

ಅವರು ನೆರೆದಿದ್ದವರನ್ನು ಸ್ವಾಗತಿಸುತ್ತಿದ್ದಂತೆಯೇ ಜನಸಮೂಹ ನಿಯಂತ್ರಣ ಕಳೆದುಕೊಂಡಿತು. ಅವರ ಖಾಸಗಿ ಭದ್ರತಾ ಸಿಬ್ಬಂದಿ ಸಾರ್ವಜನಿಕರನ್ನು ತಳ್ಳಿದರು. ಕೂಡಲೇ ಅಲ್ಲು ಅರ್ಜುನ್‌ಗೆ ಅಲ್ಲಿಂದ ಹೊರಡುವಂತೆ ಸೂಚಿಸಿದ್ದೇವೆ. ಅಲ್ಲು ಅರ್ಜುನ್ ಥಿಯೇಟರ್ ಒಳಗೆ ಹೋಗಿ 2 ಗಂಟೆಗಳ ಕಾಲ ಇದ್ದರು. ಘಟನೆ ನಡೆದು ಒಂಬತ್ತು ದಿನಗಳಾದರೂ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರ ಸ್ಪಷ್ಟನೆ ಏನು..?

ಇನ್ನು ಅಲ್ಲು ಅರ್ಜುನ್ ಅವರನ್ನು ಬಂಧಿಸುವ ವೇಳೆ ಯಾವುದೇ ಅನುಚಿತ ವರ್ತನೆ ಮಾಡಿಲ್ಲ. ನಟನ ಜೊತೆ ನಾವು ಚೆನ್ನಾಗಿಯೇ ನಡೆದುಕೊಂಡಿದ್ದೇವೆ. ಪೊಲೀಸರು ಮನೆಗೆ ಹೋದಾಗ ಅಲ್ಲು ಅರ್ಜುನ್ ಬಟ್ಟೆ ಬದಲಾಯಿಸಲು ಸಮಯ ಕೇಳಿದರು. ನಾವು ಅವರ ಮನೆಗೆ ಹೋದಾಗ ಅಲ್ಲು ಅರ್ಜುನ್ ಬೆಡ್​ರೂಮ್​​ನಲ್ಲಿದ್ದರು. ಅವರ ಅಲ್ಲಿಂದ ಬಂದ ಮೇಲೆಯೇ ನಾವು ವಶಕ್ಕೆ ಪಡೆದುಕೊಂಡೆವು. ಕುಟುಂಬದ ಸದಸ್ಯರೊಂದಿಗೆ ಮಾತನಾಡಲು ಸಾಕಷ್ಟು ಸಮಯವನ್ನೂ ನೀಡಿದ್ದೇವೆ. ನಂತರ ಅವರಾಗಿಯೇ ಬಂದು ಪೊಲೀಸ್ ವಾಹನ ಹತ್ತಿದ್ದಾರೆ.

ಇದನ್ನೂ ಓದಿ:ಮುಡಾಗೆ ಮೇಜರ್​ ಸರ್ಜರಿ ಮಾಡಲು ನಿರ್ಧಾರ; ಇನ್ಮುಂದೆ BDA ಮಾದರಿಯಲ್ಲೇ ಮೈಸೂರು ಅಭಿವೃದ್ಧಿ ಪ್ರಾಧಿಕಾರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment