/newsfirstlive-kannada/media/post_attachments/wp-content/uploads/2024/03/Mangli-1-1.jpg)
ರಾಬರ್ಟ್ ಸಿನಿಮಾದ ಕಣ್ಣು ಹೊಡಿಯಾಕ ಸೇರಿದಂತೆ ಕನ್ನಡದ ಹಲವು ಸಿನಿಮಾಗಳ ಹಿನ್ನೆಲೆ ಗಾಯಕಿ ಹಾಗೂ ತೆಲಂಗಾಣದ ಜಾನಪದ ಗಾಯಕಿ ಎಂದೇ ಖ್ಯಾತಿಯಾಗಿರುವ ಮಂಗ್ಲಿ ಹುಟ್ಟುಹಬ್ಬದ ಪಾರ್ಟಿ ಮೇಲೆ ಪೊಲೀಸರು ರೆೇಡ್ ಮಾಡಿದ್ದಾರೆ.
ಹೈದರಾಬಾದ್ ಹೊರವಲಯದ ರಂಗಾರೆಡ್ಡಿ ಜಿಲ್ಲೆಯ ತ್ರಿಪುರ ರೆಸಾರ್ಟ್‌ನಲ್ಲಿ ಮಂಗ್ಲಿ ಅವರ ಬರ್ತ್ ಡೇ ಪಾರ್ಟಿ ಆಯೋಜಿಸಲಾಗಿತ್ತು. ಈ ರೆಸಾರ್ಟ್ ಮೇಲೆ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ.
ಮಂಗ್ಲಿ ಪಾರ್ಟಿಯಲ್ಲಿ ಒಟ್ಟು 48 ಮಂದಿ ಭಾಗಿಯಾಗಿದ್ದರು. ಇವರನ್ನ ಪರೀಕ್ಷೆ ಮಾಡಲಾಗಿದ್ದು, 48ರಲ್ಲಿ 9 ಮಂದಿಗೆ ಡ್ರಗ್ಸ್ ಸೇವನೆಯ ಪಾಸಿಟಿವ್ ರಿಪೋರ್ಟ್ ಬಂದಿದೆ.
ಇದನ್ನೂ ಓದಿ: ಟಾಲಿವುಡ್ ಸ್ಟಾರ್ ಡೈರೆಕ್ಟರ್ ಎ.ಎಸ್ ರವಿಕುಮಾರ್ ಚೌಧರಿ ಇನ್ನಿಲ್ಲ
ಮಂಗ್ಲಿ ಹುಟ್ಟುಹಬ್ಬದ ಬರ್ತ್ ಡೇಯಲ್ಲಿ ವಿದೇಶಿ ಮದ್ಯವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಎನ್‌ಡಿಪಿಎಸ್ ಆ್ಯಕ್ಟ್, ಶಬ್ದ ಮಾಲಿನ್ಯ ಕಾಯಿದೆಯಡಿ ಪೊಲೀಸರು ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ