ಗಾಯಕಿ ಮಂಗ್ಲಿಗೆ ಬಿಗ್ ಶಾಕ್‌.. ಬರ್ತ್‌ ಡೇ ಪಾರ್ಟಿಗೆ ಬಂದವರು ಯಾರು? ಪೊಲೀಸರಿಗೆ ಸಿಕ್ಕಿದ್ದೇನು?

author-image
admin
Updated On
ಗಾಯಕಿ ಮಂಗ್ಲಿಗೆ ಬಿಗ್ ಶಾಕ್‌.. ಬರ್ತ್‌ ಡೇ ಪಾರ್ಟಿಗೆ ಬಂದವರು ಯಾರು? ಪೊಲೀಸರಿಗೆ ಸಿಕ್ಕಿದ್ದೇನು?
Advertisment
  • ಮಂಗ್ಲಿ ಬರ್ತ್ ಡೇ ಪಾರ್ಟಿ ಮೇಲೆ ಏಕಾಏಕಿ ಪೊಲೀಸ್ ದಾಳಿ
  • 48 ಮಂದಿಯ ಡ್ರಗ್ಸ್ ಪರೀಕ್ಷೆಯಲ್ಲಿ 9 ಜನಕ್ಕೆ ಡ್ರಗ್ಸ್ ಪಾಸಿಟಿವ್
  • ಪೊಲೀಸ್‌ ಅನುಮತಿ ಪಡೆಯದೆ ಪಾರ್ಟಿ ಆಯೋಜನೆ ಮಾಡಿದ್ದ ಮಂಗ್ಲಿ

ಹೈದರಾಬಾದ್‌: ಖ್ಯಾತ ಹಿನ್ನೆಲೆ ಗಾಯಕಿ ಮಂಗ್ಲಿ ಅವರಿಗೆ ಸಂಕಷ್ಟ ಎದುರಾಗಿದೆ. ಮಂಗ್ಲಿ ಬರ್ತ್ ಡೇ ಪಾರ್ಟಿ ಮೇಲೆ ದಾಳಿ ಮಾಡಿರುವ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಸ್ನೇಹಿತರಿಗಾಗಿ ಮಂಗ್ಲಿ ಪಾರ್ಟಿ ಪ್ಲಾನ್ ಮಾಡಿದ್ದು, ಡ್ರಗ್ಸ್‌ ಪರೀಕ್ಷೆಯಲ್ಲಿ ಪಾಸಿಟಿವ್ ರಿಪೋರ್ಟ್ ಬಂದಿದೆ.

publive-image

ಗಾಯಕಿ ಮಂಗ್ಲಿ ಅವರು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾದ ತ್ರಿಪುರಾ ರೆಸಾರ್ಟ್‌ನಲ್ಲಿ ನಿನ್ನೆ ತಮ್ಮ ಬರ್ತ್‌ ಡೇ ಪಾರ್ಟಿ ಆಯೋಜನೆ ಮಾಡಿದ್ದರು. ಪೊಲೀಸರು ಈ ಪಾರ್ಟಿ ಮೇಲೆ ರೇಡ್ ಮಾಡಿದ್ದು, ಕಾರ್ಯಕ್ರಮದ ಆಯೋಜಕರಿಂದ ಅಪಾರ ಪ್ರಮಾಣದ ವಿದೇಶಿ ಮದ್ಯ, ಡ್ರಗ್ಸ್​ ವಶಕ್ಕೆ ಪಡೆದಿದ್ದಾರೆ.

publive-image

ಮಂಗ್ಲಿ ಬರ್ತ್‌ ಡೇ ಪಾರ್ಟಿಯಲ್ಲಿ ಆಪ್ತ ಸ್ನೇಹಿತರು, ಕುಟುಂಬಸ್ಥರು ಸೇರಿ 48 ಮಂದಿಯಷ್ಟೇ ಭಾಗಿಯಾಗಿದ್ದರು. 48 ಮಂದಿಯ ಡ್ರಗ್ಸ್ ಪರೀಕ್ಷೆಯಲ್ಲಿ 9 ಜನಕ್ಕೆ ಡ್ರಗ್ಸ್ ಪಾಸಿಟಿವ್ ಬಂದಿದೆ. NDPS ಆ್ಯಕ್ಟ್ ಹಾಗೂ ಶಬ್ದ ಮಾಲಿನ್ಯ ಕಾಯಿದೆಯಡಿ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

publive-image

ಇದನ್ನೂ ಓದಿ: ಗಾಯಕಿ ಮಂಗ್ಲಿ ಬರ್ತ್‌ ಡೇ ಪಾರ್ಟಿ ಮೇಲೆ ಪೊಲೀಸ್ ರೇಡ್‌.. ಡ್ರಗ್ಸ್‌, ಗಾಂಜಾ, ಮಾದಕ ದ್ರವ್ಯಗಳು ಪತ್ತೆ! 

ಬಹುಭಾಷಾ ಗಾಯಕಿ ಮಂಗ್ಲಿ ಅವರು ಪೊಲೀಸರ ಅನುಮತಿ ಪಡೆಯದೆ ಪಾರ್ಟಿ ಆಯೋಜನೆ ಮಾಡಿದ್ದಾರೆ. ಪಾರ್ಟಿ ಮೇಲೆ ಏಕಾಏಕಿ ದಾಳಿ ಮಾಡಿರುವ ಪೊಲೀಸರು, ಅನುಮತಿಯಿಲ್ಲದೆ ಬಳಸಲಾಗಿದ್ದ ಡಿಜೆ ಸಿಸ್ಟಂ, ವಿದೇಶಿ ಮದ್ಯ ಹಾಗೂ ಡ್ರಗ್ಸ್​ ವಶಕ್ಕೆ ಪಡೆದಿದ್ದಾರೆ. ಗಾಂಜಾ ಸೇವನೆ ಮಾಡಿದ್ದ 9 ಜನರನ್ನು ಬಂಧಿಸಿ ಪರೀಕ್ಷೆ ನಡೆಸಿದ್ದಾರೆ. ಗಾಯಕಿ ಮಂಗ್ಲಿ ಹಾಗೂ ತ್ರಿಪುರಾ ರೆಸಾರ್ಟ್ ಜನರಲ್ ಮ್ಯಾನೇಜರ್ ಶಿವರಾಮ ಕೃಷ್ಣ ವಿರುದ್ಧ ಕೇಸ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment