/newsfirstlive-kannada/media/post_attachments/wp-content/uploads/2025/01/honey-rose.jpg)
ತಿರುವನಂತಪುರಂ: ಇದು ಸೋಶಿಯಲ್​ ಮೀಡಿಯಾ ಜಮಾನ. ಬಹುತೇಕ ಮಂದಿ ಇದರಲ್ಲೆ ಮುಳುಗಿ ಹೋಗಿದ್ದಾರೆ. ಇದೇ ಹೊತ್ತಿನಲ್ಲಿ ಇಲ್ಲಿ ವಿಕೃತಿಗಳೂ ಹೆಚ್ಚಾಗಿ ಡಿಜಿಟಲ್​​ ಕಾಮುಕರು ಹುಟ್ಟುಕೊಂಡಿದ್ದಾರೆ. ಹೀಗೆ ಮಲಯಾಳಂನ ಖ್ಯಾತ ನಟಿ ಹನಿರೋಸ್​​ಗೆ ಅಶ್ಲೀಲ ಮೆಸೇಜ್ ಮಾಡಿ ಕಾಟ ಕೊಡ್ತಿದ್ದ ಖ್ಯಾತ ಉದ್ಯಮಿಯೊಬ್ಬರು ಅರೆಸ್ಟ್ ಆಗಿದ್ದಾರೆ.
ರೇಣುಕಾಸ್ವಾಮಿ ಕೇಸ್​​​​ ನಿಮಗೆಲ್ಲಾ ಗೊತ್ತೆ ಇದೆ. ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್​​ ಮಾಡಿದ್ದಲ್ಲಿಂದ ಶುರುವಾದ ಪ್ರಕರಣ ಪಟ್ಟಣಗೆರೆ ಶೆಡ್​​​ಗೆ ತಲುಪಿತ್ತು. ಅಲ್ಲಿಂದ ಪರಪ್ಪನ ಅಗ್ರಹಾರ ಬಳ್ಳಾರಿ ಜೈಲಿನವರೆಗೆ ಕೇಸ್​​ ಸದ್ದು ಮಾಡಿತ್ತು. ಆದ್ರೀಗ ಪವಿತ್ರಾ ಗೌಡ ರೀತಿ ಮತ್ತೊಬ್ಬ ನಟಿಗೆ ಮೆಸೇಜ್ ಕಾಟ ಶುರುವಾಗಿದೆ.
ನಟಿ ಹನಿ ರೋಸ್​​ಗೆ ಡಿಜಿಟಲ್​ ಕಾಮುಕರ ಕಾಟ!
ತಮ್ಮ ಸೌಂದರ್ಯದಿಂದಲೇ ರೀಲ್ಸ್​​ಗಳಲ್ಲಿ ರಾರಾಜಿಸುವ ಮಲಯಾಳಂನ ನಟಿ ಹನಿ ರೋಸ್​​​ಗೆ ಡಿಜಿಟಲ್​​ ಕಾಮುಕರ ಕಾಟ ಹೆಚ್ಚಾಗಿದೆ. ಸೋಶಿಯಲ್​​​​ ಸದಾ ಆ್ಯಕ್ಟೀವ್​ ಇರುವ ನಟಿಗೆ ಕೆಲ ಕಾಮುಕರು ಅಶ್ಲೀಲ ಮೆಸೇಜ್​​​​​​ ಹಾಗೂ ಕೆಟ್ಟ ಕೆಟ್ಟದಾಗಿ ಕಮೆಂಟ್ಸ್​​​​ ಮಾಡಿ ಕಿರುಕುಳ ನೀಡ್ತಿದ್ದಾರೆ. ಇದ್ರಿಂದ ಬೇಸತ್ತು ಹೋಗಿರುವ ನಟಿ ಪವಿತ್ರಾ ಗೌಡ ರೀತಿ ಕಾನೂನು ಕೈಗೆತ್ತಿಕೊಳ್ಳದೇ ನೇರವಾಗಿ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾರೆ.
ನಟಿ ಹನಿರೋಸ್​​​ ಲೈಂಗಿಕ ಕಿರುಕುಳ ಕೇಸ್​​ ಇಡೀ ಕೇರಳದಲ್ಲಿ ಸಂಚಲನ ಸೃಷ್ಟಿಸಿದೆ. ಕೆಟ್ಟ ಕೆಟ್ಟದಾಗಿ ಮೆಸೇಜ್ ಕಿಡಿಗೇಡಿಗಳ ವಿರುದ್ಧ ಸಮರ ಸಾರಿರುವ ನಟಿ ಹನಿರೋಸ್, ಖ್ಯಾತ ಉದ್ಯಮಿ ಸೇರಿ 30 ಜನರ ವಿರುದ್ಧ ಕೇರಳ ಸಿಎಂಗೆ ದೂರು ನೀಡಿದ್ರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳವ ಭರವಸೆ ನೀಡಿದ್ದ ಸಿಎಂ ಎಸ್​​ಐಟಿ ತಂಡ ರಚನೆ ಮಾಡಿದ್ರು.
ಹನಿರೋಸ್​​ಗೆ ಡಬಲ್​ ಮೀನಿಂಗ್​ ಮೆಸೇಜ್​​!
ನಟಿ ಹನಿ ರೋಸ್‌ಗೆ ಅಶ್ಲೀಲ ಮೆಸೇಜ್​ ಹಿನ್ನಲೆ, ಕೇರಳದ ಎಸ್​​ಐಟಿ ತಂಡ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರನ್ನ ಬಂಧಿಸಿದ್ದಾರೆ. ಕೇರಳದ ಪ್ರಮುಖ ಆಭರಣ ವ್ಯಾಪಾರಿಯಾಗಿರೋ ಚೆಮ್ಮನೂರ್ ವಿರುದ್ಧ ಜಾಮೀನು ರಹಿತ ಕೇಸ್​ ದಾಖಲಾಗಿದ್ದು, ಪೊಲೀಸರು ಅರೆಸ್ಟ್​​ ಮಾಡಿ ವಿಚಾರಣೆ ನಡೆಸ್ತಿದ್ದಾರೆ.
ಕೇರಳದ ಶ್ರೀಮಂತ ಉದ್ಯಮಿಯಾಗಿರೋ ಬಾಬಿ ಚೆಮ್ಮನೂರು ಇಂಟರ್​ನ್ಯಾಷನಲ್​ ಜ್ಯುವೆಲರ್ಸ್ ಡೈರೆಕ್ಟರ್​ ಆಗಿದ್ದಾರೆ. ಜೊತೆಗೆ ಆಕ್ಸಿಜನ್​​​ ಎಂಬ ಹೆಸರಿನ ರೆಸಾರ್ಟ್‌ಗಳ ಮಾಲೀಕರಾಗಿದ್ದಾರೆ. ಲೈಫ್ ವಿಷನ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕರಾಗಿರೋ ಬಾಬಿ ಚೆಮ್ಮನೂರ್, 2012ರಲ್ಲಿ ಫುಟ್ಬಾಲ್ ದಂತಕಥೆ ಮರಡೋನಾ ಜೊತೆ ಒಪ್ಪಂದ ಮಾಡಿಕೊಂಡು ಕಣ್ಣೂರಿಗೆ ಕರೆತಂದಿದ್ರು.
ಇದಷ್ಟೇ ಅಲ್ಲದೇ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ಸುಮಾರು 812 ಕಿ.ಮೀ ಓಡಿ ವಿಶ್ವ ದಾಖಲೆ ಬರೆದಿದ್ರು. ಇದಕ್ಕಾಗಿ ಬಾಬಿ ಚೆಮ್ಮನೂರ್​ಗೆ 2016ರಲ್ಲಿ ಶಾಂತಿ ರಾಯಭಾರಿ ಪ್ರಶಸ್ತಿ ಕೂಡ ಲಭಿಸಿದೆ.. ಕಾರ್​ಗಳ ಕ್ರೇಜ್​ಗಳನ್ನು ಹೊಂದಿರುವ ಬಾಬಿ ಚೆಮ್ಮನೂರು ಸಾಕಷ್ಟು ಐಷಾರಾಮಿ ಕಾರುಗಳ ಕಲೆಕ್ಷನ್​ಹೊಂದಿದ್ದು, ಅಮೆರಿಕಾದ ಮುಂದಿನ ಪ್ರೆಸಿಡೆಂಟ್​​ ಬಳಸಿದ್ದ ರೋಲ್ಸ್​​ ರಾಯ್ಸ್​​​ ಫ್ಯಾಂಟಮ್​ ಕಾರು ಖರೀದಿಸಲು ಬಿಡ್​ ಮಾಡಿದ್ರು.
ಇನ್ನು, ನಟಿ ಹನಿರೋಸ್​​​ ಪ್ರಕರಣ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಬಾಬಿ, ತಮ್ಮ ಮೇಲಿನ ಆರೋಪವನ್ನ ತಳ್ಳಿಹಾಕಿದ್ದಾರೆ. ನಮ್ಮ ಮಳಿಗೆಗಳ ಉದ್ಘಾಟನೆಗಳಿಗೆ ಹನಿ ರೋಸ್​​ ಬರುತ್ತಿದ್ದರು, ಆಗ ನಾವು ಡ್ಯಾನ್ಸ್​​ ಮಾಡ್ತಿದ್ವಿ, ಅವರಿಗೆ ಜೋಕ್​ ಹೇಳುತ್ತಿದೆ ಅಂತ ಪೊಲೀಸರಿಗೆ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಮಲಯಾಳಂ ಸಿನಿ ಇಂಡಸ್ಟ್ರೀ ಕಾಸ್ಟಿಂಗ್​​ ಕೌಚ್​​​ನಿಂದ ಸದ್ದು ಮಾಡಿತ್ತು. ಇದೀಗ ಹನಿರೋಸ್​​ ಲೈಂಗಿಕ ಕಿರುಕುಳ ಕೇಸ್​​ ಮತ್ತೆ ಕೋಲಾಹಲ ಸೃಷ್ಟಿಸಿದ್ದು, ಕಾಮ ಕ್ರಿಮಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us