newsfirstkannada.com

ಒಂದಲ್ಲ.. ಎರಡಲ್ಲ.. ಎಷ್ಟು ಮಕ್ಕಳು ಈ ಬೈಕ್​ನಲ್ಲಿ ಪ್ರಯಾಣಿಸ್ತಿದ್ದಾರೆ..? ಶಾಕಿಂಗ್ ವಿಡಿಯೋ

Share :

26-06-2023

    ಆರೋಪಿ ವಿರುದ್ಧ ಮುಂಬೈ ಪೊಲೀಸರಿಂದ ಕೇಸ್

    ಸೆಕ್ಷನ್ 308 ಅಡಿಯಲ್ಲಿ ಕೇಸ್, ಇದು ಏನ್ ಹೇಳುತ್ತೆ..?

    ಪೊಲೀಸ್ ಅಧಿಕಾರಿಗಳು ನೀಡಿದ ಎಚ್ಚರಿಕೆ ಏನು?

ಕೆಲವೊಮ್ಮೆ ರಸ್ತೆ ಅಪಘಾತ ಆಕಸ್ಮಿಕವಾಗಿ ಸಂಭವಿಸುತ್ತವೆ. ಕೆಲವರು ಬೇಕು ಅಂತಲೇ ಆಪತ್ತನ್ನು ತಂದುಕೊಳ್ತಾರೆ. ಪೊಲೀಸ್ ಅಧಿಕಾರಿಗಳು, ಸರ್ಕಾರಗಳು ರಸ್ತೆ ಅಪಘಾತ ತಪ್ಪಿಸಲು ಅದೆಷ್ಟೋ ಕಾನೂನು ಹಾಗೂ ತಿಳುವಳಿಕೆಯನ್ನು ಮೂಡಿಸುತ್ತ ಇರ್ತಾರೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಒಂದನ್ನು ಗಮನಿಸಿರುವ ಪೊಲೀಸ್ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. 7 ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡಿದ ಆರೋಪದ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಒಂದು ಬೈಕ್​ನಲ್ಲಿ ಬರೋಬ್ಬರಿ 7 ಮಕ್ಕಳನ್ನು ಕೂರಿಸಿಕೊಂಡು ಮುಂಬೈನ ರಸ್ತೆಯಲ್ಲಿ ಸುತ್ತಾಡಿದ ವಿಡಿಯೋ ಇದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು. ಇಂಥ ಪ್ರಯಾಣವನ್ನು ನಾವು ಯಾವತ್ತೂ ಬೆಂಬಲಿಸುವುದಿಲ್ಲ. ಈ ಪ್ರಯಾಣಿಕ ತನ್ನ ಜೀವ ಹಾಗೂ ಮಕ್ಕಳನ್ನು ಅಪಾಯಕ್ಕೆ ಸಿಲುಕಿಸಿದ್ದಲ್ಲದೇ, ಇತರೆ ಪ್ರಯಾಣಿಕರಿಗೂ ತೊಂದರೆ ಕೊಟ್ಟಿದ್ದಾನೆ. ಇದೊಂದು ಗಂಭೀರ ಅಪರಾಧ. ಸೆಕ್ಷನ್ 308 (attempt to commit culpable homicide: ನರಮೇಧ ನಡೆಸಲು ಯತ್ನ) ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಮುಂಬೈನ ಟರ್ಡೆವೋ ಠಾಣೆಯಲ್ಲಿ ಕಸ್ ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದಲ್ಲ.. ಎರಡಲ್ಲ.. ಎಷ್ಟು ಮಕ್ಕಳು ಈ ಬೈಕ್​ನಲ್ಲಿ ಪ್ರಯಾಣಿಸ್ತಿದ್ದಾರೆ..? ಶಾಕಿಂಗ್ ವಿಡಿಯೋ

https://newsfirstlive.com/wp-content/uploads/2023/06/MI_BIKE.jpg

Load More