/newsfirstlive-kannada/media/post_attachments/wp-content/uploads/2024/10/Darshan-Case-SPP-Prasanna-Kumar-1.jpg)
ಬೆಂಗಳೂರು: ರೇಣುಕಾಸ್ವಾಮಿ ಕೇಸ್​ನಲ್ಲಿ ಜಾಮೀನು ಪಡೆದು ಆಚೆ ಬಂದಿರುವ ನಟ ದರ್ಶನ್​​ಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಪೊಲೀಸರು 2ನೇ ಚಾರ್ಜ್​ಶೀಟ್‌ನಲ್ಲಿ ದರ್ಶನ್ ವಿರುದ್ಧ ಪ್ರಬಲ ಸಾಕ್ಷ್ಯವನ್ನು ಸೇರಿಸಿರೋದು ದರ್ಶನ್‌ಗೆ ಅತಿದೊಡ್ಡ ಆತಂಕ ಕಾಡುವಂತೆ ಮಾಡಿದೆ.
ಚಾಲೆಂಜಿಂಗ್ ಸ್ಟಾರ್ ಪಟ್ಟ ಹೊತ್ತು ಊರೆಲ್ಲ ಮೆರೆದಾಡಿದ್ದ ದರ್ಶನ್ ಅವರು ಪರಪ್ಪನ ಅಗ್ರಹಾರ ಟು ಬಳ್ಳಾರಿ ಜೈಲಿನ ದರ್ಶನ ಮಾಡಿ ಬಂದಿದ್ದಾರೆ. ಸದ್ಯ ಮಧ್ಯಂತರ ಜಾಮೀನು ಪಡೆದು ದರ್ಶನ್ ಅವರು ಆಚೆ ಬಂದಿದ್ದಾರೆ. 6 ವಾರಗಳ ಕಾಲ ಷರತ್ತು ಬದ್ಧ ಜಾಮೀನು​ ಸಿಕ್ಕಿ ಸದ್ಯ ಚಿಕಿತ್ಸೆ ಪಡೀತಿದ್ದಾರೆ. ಜಾಮೀನಿನ ಅವಧಿ ಕೂಡ ಅರ್ಧದಷ್ಟು ಮುಗಿಯುತ್ತಾ ಬಂದಿದೆ. ದರ್ಶನ್​ಗೆ ಬೆನ್ನು ನೋವು ಜೊತೆಗೆ ಮೇಲ್ಮನವಿ ಅನ್ನೋ ತಲೆನೋವು ಸ್ವಲ್ಪ ಜಾಸ್ತಿನೇ ಆಗಿದೆ. ಆದ್ರೆ ಇದೆಲ್ಲದರ ಮಧ್ಯೆ ದರ್ಶನ್​ಗೆ ಎರಡನೇ ಚಾರ್ಜ್​ಶೀಟ್​ ತೂಗುಗತ್ತಿ ನೇತಾಡುತ್ತಿದೆ.
ನಟ ದರ್ಶನ್​ಗೆ ಎದುರಾಗುತ್ತಾ ಮತ್ತೊಂದು ಸಂಕಷ್ಟ?
ರೇಣುಕಾಸ್ವಾಮಿ ಕೇಸ್​ನಲ್ಲಿ 2ನೇ ಚಾರ್ಜ್​​ಶೀಟ್ ಸಿದ್ಧ
131 ದಿನ ಜೈಲಿನಲ್ಲಿದ್ದ ನಟ ದರ್ಶನ್ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಹೈಕೋರ್ಟ್ 6 ವಾರಗಳ ಕಾಲ ಷರತ್ತುಬದ್ಧ ಜಾಮೀನು ನೀಡಿದೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರೋ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ನಟ ದರ್ಶನ್​ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಈ ಮಧ್ಯೆ ಪೊಲೀಸರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಅರ್ಜಿಯನ್ನ ಸಲ್ಲಿಸಲು ಮುಂದಾಗಿದ್ದಾರೆ. ಮೇಲ್ಮನವಿಯ ಆತಂಕದ ನಡುವೆ ದರ್ಶನ್​​ಗೆ ಎರಡನೇ ಚಾರ್ಜ್​ಶೀಟ್​ ಸಂಕಟ ಎದುರಾಗಿದೆ.
ಇದನ್ನೂ ಓದಿ: ದರ್ಶನ್​​ಗೆ ಇವತ್ತು ಟೆನ್ಷನ್ ಡೇ.. ಎರಡು ಪ್ರಮುಖ ನಿರ್ಧಾರ ಸಾಧ್ಯತೆ
ಈಗಾಗಲೇ ಪೊಲೀಸರು ಮೊದಲ ಚಾರ್ಜ್​ಶೀಟ್​ ಸಲ್ಲಿಸಿ ಪ್ರಮುಖ ಸಾಕ್ಷಿಗಳನ್ನ ನ್ಯಾಯಲಯಕ್ಕೆ ಒಪ್ಪಿಸಿದ್ರು. ಈಗ ಎರಡನೇ ಚಾರ್ಜ್​ಶೀಟ್ ಸಿದ್ಧ ಮಾಡಿದ್ದು, ಶುಕ್ರವಾರ ಸಂಜೆಯೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಈ ಚಾರ್ಜ್​​ಶೀಟ್​ನಲ್ಲಿ ದರ್ಶನ್​ಗೆ ಮತ್ತೊಂದು ಶಾಕ್​ ಇರೋದು ತಿಳಿದು ಬಂದಿದ್ದು, ಮತ್ತಷ್ಟು ಪ್ರಬಲ ಸಾಕ್ಷಿಗಳಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ರೆಡಿ
20ಕ್ಕೂ ಹೆಚ್ಚು ಸಾಕ್ಷಿ, FSL ವರದಿಗಳಿರೋ ಚಾರ್ಜ್‌ಶೀಟ್
ಈ ಎರಡನೇ ಚಾರ್ಜ್​ಶೀಟ್​​ನಲ್ಲಿ ಸಾವಿರಕ್ಕೂ ಅಧಿಕ ಪುಟಗಳ ವರದಿಯಿದೆ ಎನ್ನಲಾಗಿದೆ. ಈ ಒಂದು ಸಾವಿರ ಪುಟಗಳಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧಿಸಿದ 20 ಕ್ಕೂ ಹೆಚ್ಚು ಸಾಕ್ಷಿಗಳು ಮತ್ತು ಎಫ್​ಎಸ್‌ಎಲ್​ ವರದಿಗಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಪೊಲೀಸರು ನ್ಯಾಯಲಯಕ್ಕೆ ಸಲ್ಲಿಸೋದಕ್ಕೆ ಸಿದ್ಧಪಡಿಸಿರುವ ಎರಡನೇ ಚಾರ್ಜ್​ಶೀಟ್​ನಲ್ಲಿ ಪ್ರತ್ಯಕ್ಷದರ್ಶಿ ಪುನೀತ್ ಮೊಬೈಲ್​ನಿಂದ ಪಟ್ಟಣಗೆರೆ ಶೆಡ್​ನಲ್ಲಿ ದರ್ಶನ್​ ತನ್ನ ಗ್ಯಾಂಗ್​ನೊಂದಿಗೆ ನಿಂತಿರೋ ಫೋಟೋ ರಿಕವರಿ ಮಾಡಿದ್ದಾರೆ. ಶೆಡ್‌ನಲ್ಲಿ ಎಲ್ಲರ ಜೊತೆ ನಿಂತಿರೋ ದರ್ಶನ್ ನಿಂತಿರುವ ಫೋಟೋ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಮತ್ತೆರಡು ಫೋಟೋ ರಿಟ್ರೀವ್.. ದರ್ಶನ್​​ಗೆ ಹೆಚ್ಚುವರಿ ಚಾರ್ಜ್​ಶೀಟ್ ಆಘಾತ..!
ಈ ಫೋಟೋದಲ್ಲಿ ದರ್ಶನ್​ ಬ್ಲೂ ಟೀ ಶರ್ಟ್ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಈ ಫೋಟೋವನ್ನು ಪುನೀತ್ ಡಿಲೀಟ್ ಮಾಡಿದ್ದ. ಪೊಲೀಸರು ಈ ಫೋಟೋವನ್ನು ರಿಟ್ರೀವ್ ಮಾಡಿ ಎರಡನೇ ಚಾರ್ಜ್​ಶೀಟ್​ನಲ್ಲಿ ಸೇರಿಸಿದ್ದಾರೆ. ಇದರ ಜೊತೆಗೆ ಘಟನೆ ನಡೆದ ಸ್ಥಳದ ಫೋಟೋವನ್ನು ರಿಕವರಿ ಮಾಡಿದ್ದು, ಒಟ್ಟು ಎರಡು ಫೋಟೋಗಳನ್ನ ಚಾರ್ಜ್​ಶೀಟ್​ನಲ್ಲಿ ಸೇರಿಸಲಾಗಿದೆ.
ದರ್ಶನ್ ಜಾಮೀನು ಅರ್ಜಿ ಮುಂದಿನ ವಾರಕ್ಕೆ ಮಂದೂಡಿಕೆ!
ಇದೇ ವೇಳೆ ಹೈಕೋರ್ಟ್​ನಲ್ಲಿ ದರ್ಶನ್​ ರೆಗ್ಯೂಲರ್ ಬೇಲ್​ ಅರ್ಜಿ ವಿಚಾರಣೆ ನಡೆಸಲಾಯಿತು. ರೆಗ್ಯೂಲರ್ ಬೇಲ್​ಗಾಗಿ ​ದರ್ಶನ್​ ಪರ ವಕೀಲರು ವಾದ ಮಂಡಿಸಿದರು. ಈ ವೇಳೆ ಜಡ್ಜ್ ಹೆಲ್ತ್ ರಿಪೋರ್ಟ್ ಸಲ್ಲಿಕೆ ಬಗ್ಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ವಕೀಲ ಬಿ.ವಿ ನಾಗೇಶ್​ ಅವರು ನಿಮ್ಮ ಆದೇಶದಂತೆ ಒಂದು ವಾರದಲ್ಲಿ ಸಲ್ಲಿಕೆ ಮಾಡಿದ್ದೇವೆ ಅಂತ ಹೇಳಿದರು. ಅದಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿ ದರ್ಶನ್‌ಗೆ ಮಧ್ಯಂತರ ಜಾಮೀನು ಷರತ್ತುಗಳಡಿ ನೀಡಲಾಗಿತ್ತು. ಇನ್ನೂ ದರ್ಶನ್ ಗೆ ಅಪರೇಷನ್ ದಿನಾಂಕ ನಿಗಧಿಯಾಗಿಲ್ಲ ಅಂತ ಉಲ್ಲೇಖ ಮಾಡಿದರು.
ಬಳಿಕ ಎಸ್​​ಪಿಪಿ ಪ್ರಸನ್ನಕುಮಾರ್​ ವೈದ್ಯಕೀಯ ರಿಪೋರ್ಟ್​ ಬಗ್ಗೆ ಪರಿಶೀಲನೆ ಮಾಡಿಕ್ಕೊಂಡು ಬಂದು ವಾದ ಮಾಡಿ ಅಂತ ಹೇಳಿದ್ದ ಜಡ್ಜ್​ ಅರ್ಜಿ ವಿಚಾರಣೆಯನ್ನ ಮುಂದೂಡುವ ಬಗ್ಗೆ ಪ್ರಶ್ನೆ ಮಾಡಿದ್ರು. ಆಗ ಪವಿತ್ರಗೌಡ ಪರ ವಕೀಲರು ಆದಷ್ಟು ಹತ್ತಿರದ ಡೇಟ್ ನೀಡುವಂತೆ ಮನವಿ ಮಾಡ್ದಾಗ ಮುಂದಿನ ವಾರ ಅಂದ್ರೆ ನವೆಂಬರ್ 26 ಕ್ಕೆ ಎಲ್ಲಾ ಆರೋಪಿಗಳು ಜಾಮೀನು ಅರ್ಜಿಯನ್ನ ಮುಂದೂಡಿದ್ರು. ಹೀಗಾಗಿ ಮಂಗಳವಾರ ಕೊಲೆ ಆರೋಪಿಗಳಿಗೆ ಶುಭ ತರುತ್ತಾ? ಅಥವಾ ಅಶುಭವಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ