newsfirstkannada.com

ಮಂಕಿ ಗ್ಯಾಂಗ್ ಲೀಡರ್ ಬಂಧಿಸಲು ಪೊಲೀಸರ ಹರಸಾಹಸ.. ಇದು ಯಾವ ರೌಡಿಗೂ ಕಮ್ಮಿ ಇಲ್ಲ!

Share :

Published March 30, 2024 at 3:53pm

Update March 30, 2024 at 3:54pm

    ಬ್ಯಾಂಕಾಕ್‌ನಿಂದ 90 ಕಿ.ಮೀ ದೂರದ ಲಪಬುರಿ ನಗರದಲ್ಲಿ ಮಂಕಿ ಕಾಳಗ

    ನಾಯಕತ್ವದ ಪಟ್ಟಕ್ಕಾಗಿ ಎರಡು ಕಡೆಯ ಮಂಕಿ ಗ್ಯಾಂಗ್‌ ಮಧ್ಯೆ ಫೈಟ್‌

    ಪೊಲೀಸರಿಂದ ಕೊನೆಗೂ ಮಂಕಿ ಗ್ಯಾಂಗ್‌ ಲೀಡರ್ ಮಂಕಿ ಐ ಕ್ರೂವ್

ಬ್ಯಾಂಕಾಕ್‌: ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಪುಡಿರೌಡಿಗಳು ಮಚ್ಚು, ಲಾಂಗ್ ಹಿಡಿದು ನಡು ರೋಡಲ್ಲಿ ಹೊಡೆದಾಡೋದನ್ನ ನೋಡಿರ್ತೀವಿ. ಆದರೆ ಥೈಲ್ಯಾಂಡ್‌ನಲ್ಲಿ ಮಂಕಿ ಗ್ಯಾಂಗ್‌ಗಳು ಬೀದಿಗಿಳಿದು ಹೊಡೆದಾಟ ನಡೆಸುತ್ತವೆ. ನಾಯಕತ್ವದ ಪಟ್ಟಕ್ಕಾಗಿ ಎರಡು ಕಡೆಯ ಮಂಕಿ ಗ್ಯಾಂಗ್‌ಗಳು ಭಯಾನಕ ಫೈಟ್ ಮಾಡುತ್ತವೆ. ಅಬ್ಬಾ.. ಇದು ಕೇಳೋದಕ್ಕೆ ಆಶ್ಚರ್ಯವಾದ್ರೂ ರಿಯಲ್ ಆಗಿ ನಡೆದಿರೋ ಘಟನೆ.

ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಿಂದ 90 ಕಿ.ಮೀ ದೂರದ ಲಪಬುರಿ ನಗರದಲ್ಲಿ ಎರಡು ಮಂಕಿ ಗ್ಯಾಗ್ ಮಧ್ಯೆ ಫೈಟ್‌ ನಡೆದಿದೆ. ಈ ಕದನ ಭಯಾನಕ ಹಂತಕ್ಕೆ ಹೋಗಿದ್ದು, ನೆರೆದಿದ್ದ ಜನರೆಲ್ಲ ಮೂಕವಿಸ್ಮಿತರಾಗಿ ನಿಲ್ಲುತ್ತಾರೆ. ಪೊಲೀಸರಿಗಂತೂ ಈ ಮಂಕಿ ಗ್ಯಾಂಗ್‌ ಅನ್ನ ನಿಯಂತ್ರಿಸೋದು ಒಂದು ದೊಡ್ಡ ಸವಾಲಿನ ಕೆಲಸ.

ಮಂಕಿಗಳೇ ಭಯೋತ್ಪಾದಕರು!
ಥೈಲ್ಯಾಂಡ್ ದೇಶ ಸುಂದರ ಪ್ರವಾಸಿ ತಾಣಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ಬರುವ ಟೂರಿಸ್ಟ್‌ಗಳ ಮೇಲೆ ಥೈಲ್ಯಾಂಡ್ ಕೂಡ ಅವಲಂಬಿತವಾಗಿದೆ. ಆದರೆ ಇಲ್ಲಿರುವ ಮಂಕಿ ಗ್ಯಾಂಗ್ ಕಿತ್ತಾಡುವುದಷ್ಟೇ ಅಲ್ಲ ಸಖತ್ ಕಿರಿಕಿರಿ ಮಾಡುತ್ತಿವೆ. ಅದು ಎಷ್ಟರ ಮಟ್ಟಿಗೆ ಇದೆ ಅಂದ್ರೆ ಮಂಕಿಗಳನ್ನೇ ಭಯೋತ್ಪಾದಕರು ಎಂದು ಕರೆಯಲಾಗುತ್ತದೆ.

ಥೈಲ್ಯಾಂಡ್‌ಗೆ ಬರುವ ಟೂರಿಸ್ಟ್‌ಗಳು, ಜನರ ಮೇಲೆ ಮಂಕಿ ಗ್ಯಾಂಗ್‌ ಅಟ್ಯಾಕ್ ಮಾಡುತ್ತವೆ. ಟ್ಯೂರಿಸ್ಟ್‌ಗಳ ಬಳಿ ಇರುವ ಆಹಾರ, ಜ್ಯೂಸ್‌ ಕಿತ್ತುಕೊಂಡು ಹೋಗುತ್ತವೆ. ಸಿಟಿಯ ಅಂಗಡಿ, ಕಾರ್, ಬೈಕ್, ವಾಹನಗಳ ಮೇಲೆ ಮಂಕಿ ಗ್ಯಾಂಗ್‌ ದಾಳಿ ಮಿತಿ ಮೀರಿದೆ. ಥೈಲ್ಯಾಂಡ್‌ನ ಟೂರಿಸ್ಟ್‌ಗಳಲ್ಲಿ ಮಂಕಿ ಗ್ಯಾಂಗ್‌ಗಳು ಭಯ ಸೃಷ್ಟಿಸಿವೆ.

ಇದನ್ನೂ ಓದಿ: ಅಬ್ಬಾ..! ವಿಶ್ವದ ಅತಿ ವೇಗದ ಮೀನು ಇದು! ಗಂಟೆಗೆ 110km ಕ್ರಮಿಸುತ್ತಂತೆ

ಥೈಲ್ಯಾಂಡ್‌ನಲ್ಲಿ ಮಂಕಿಗಳ ಭಯೋತ್ಪಾದನೆ ನಿಯಂತ್ರಿಸಲು ಆದೇಶ ನೀಡಲಾಗಿದೆ. ಪೊಲೀಸರಿಗೆ ಕ್ಯಾಟರ್ ಪಿಲ್ಲರ್‌ ನೀಡಲಾಗಿದ್ದು, ಮಂಕಿಗಳನ್ನ ಹಿಡಿದು ಬೇರೆಡೆಗೆ ಸಾಗಾಟ ಮಾಡಲಾಗುತ್ತಿದೆ. ಮತ್ತು ಬರಿಸುವ ಟ್ರಾನಕ್ವಿಲೈಜರ್ ಗನ್‌ನಿಂದ ಹೊಡೆದು ಮಂಕಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡೋ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಟ್ರಾನಕ್ವಿಲೈಜರ್ ಗನ್ ಕಾಣುತ್ತಿದ್ದಂತೆ ಈ ಬುದ್ಧಿವಂತ ಮಂಕಿಗಳು ತಕ್ಷಣವೇ ಎಸ್ಕೇಪ್ ಆಗುತ್ತಿದ್ದವು.

ಕೊನೆಗೆ ಥೈಲ್ಯಾಂಡ್ ಪೊಲೀಸರು ಮಂಕಿ ಗ್ಯಾಂಗ್‌ ಲೀಡರ್ ಮಂಕಿ ಐ ಕ್ರೂವ್ ಎಂಬ ಕೋತಿಯನ್ನು ಬಂಧಿಸಿದ್ದಾರೆ. ಐ ಕ್ರೂವ್ ಮಂಕಿಯನ್ನ ಹಿಡಿಯುತ್ತಿದಂತೆ ಗ್ಯಾಂಗ್‌ನ ಉಳಿದ ಮಂಕಿಗಳು ಕೂಗಾಟ ನಡೆಸಿವೆ. ಐ ಕ್ರೂವ್ ಮಂಕಿಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಕಿ ಗ್ಯಾಂಗ್ ಲೀಡರ್ ಬಂಧಿಸಲು ಪೊಲೀಸರ ಹರಸಾಹಸ.. ಇದು ಯಾವ ರೌಡಿಗೂ ಕಮ್ಮಿ ಇಲ್ಲ!

https://newsfirstlive.com/wp-content/uploads/2024/03/Thailand-Monkey-Gang.jpg

Load More