newsfirstkannada.com

ಪೊಲೀಸರಿಂದ ರಣಬೇಟೆ.. ಗಣಿನಾಡಿನ ಮನೆಯಲ್ಲಿ ಕೋಟಿ ಕೋಟಿ ಹಣ, ಮೂಟೆ, ಮೂಟೆ ಬೆಳ್ಳಿ, ಚಿನ್ನ ಪತ್ತೆ

Share :

Published April 8, 2024 at 7:44am

    ಮೂಟೆ ಬಂಗಾರ, ಕೆಜಿಗಟ್ಟಲೇ ಬೆಳ್ಳಿ ಇದು ಕುಬೇರನಾ ಸಾಮ್ರಾಜ್ಯ?

    ಒಬ್ಬ ವ್ಯಕ್ತಿಯ ಮನೆಯಲ್ಲಿ ದಾಖಲೆ ಇಲ್ಲದ ಭಾರೀ ಸಂಪತ್ತು ಪತ್ತೆ

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಖುದ್ದಾಗಿ ಭೇಟಿ

ಲೋಕಸಭಾ ಚುನಾವಣೆ ಹೊತ್ತಲ್ಲಿ ಬಳ್ಳಾರಿ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದಾಖಲೆ ಇಲ್ಲದೇ ಸಂಗ್ರಹಿಸಿಟ್ಟಿದ್ದ ಕೋಟಿ ಕೋಟಿ ಹಣ, ಬೆಳ್ಳಿ ಮತ್ತು ಬಂಗಾರ ಸೀಜ್‌ ಮಾಡಿದ್ದಾರೆ.

ಕಂತೆ ಕಂತೆ ನೋಟು‌ಗಳ ರಾಶಿ. ಮೂಟೆ, ಮೂಟೆ ಬಂಗಾರ.. ಕೆಜಿಗಟ್ಟಲೇ ಬೆಳ್ಳಿ ರಾಶಿ ಇದೇನು ಯಕ್ಷ ಸಾಮ್ರಾಜ್ಯದ ಕುಬೇರನ ಆಸ್ಥಾನವೋ ಅಥವಾ ಕಲಿಯುಗದಲ್ಲಿರೋ ಯಾವುದೋ ದೊಡ್ಡ ಬ್ಯಾಂಕೋ? ಅಂತ ಒಂದ್ಸಲ ಯೋಚ್ನೇ ಬರದೇ ಇರಲ್ಲ. ಆದ್ರೆ, ಇದೆಲ್ಲ ಒಬ್ಬ ವ್ಯಕ್ತಿಯ ಮನೆಯಲ್ಲಿದ್ದ ದಾಖಲೆ ಇಲ್ಲದ ಸಂಪತ್ತು.

ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಉತ್ತರ ಕರ್ನಾಟಕದ ರಾಕ್ ಸ್ಟಾರ್.. ಲಕ್ಷಾಂತರ ಅಭಿಮಾನಿಗಳಿಂದ ನೋವಿನ ವಿದಾಯ

ದಾಖಲೆ ಇಲ್ಲದ ಕೋಟಿ ಕೋಟಿ ಹಣ, ಬೆಳ್ಳಿ, ಬಂಗಾರ ಸೀಜ್

ಹೀಗೆ ರಾಶಿ -ರಾಶಿ ಕಾಣಿಸುತ್ತಿರುವ ಹಣ, ಮತ್ತೊಂದು ಕಡೆ ಮೂಟೆ ಬಂಗಾರ, ಚೀಲ ಚೀಲ ಬೆಳ್ಳಿ.. ಇದೆಲ್ಲವನ್ನ ತುಂಬ್ಕೊಂಡು ಸಿಬ್ಬಂದಿ ಠಾಣೆಗೆ ತಂದಿದ್ದಾರೆ. ಗಣಿನಾಡು ಬಳ್ಳಾರಿ ಬ್ರೂಸ್‌ಪೇಟೆ ಠಾಣೆಗೆ ಹೊತ್ತುಕೊಂಡು ಬಂದಿದ್ದಾರೆ. ಬಳ್ಳಾರಿ ನಗರ ಕಂಬಳಿ ಬಜಾರನಲ್ಲಿರುವ ಜ್ಯುವಲರಿ ಶಾಪ್ ಮಾಲೀಕ ನರೇಶ್​ ತಮ್ಮ ಮನೆಯಲ್ಲಿ ದಾಖಲೆಗಳಿಲ್ಲದೇ ಸುಮಾರು 5 ಕೋಟಿ 60 ಲಕ್ಷ ರೂಪಾಯಿ ಹಣ. 3 ಕೆ.ಜಿ ಬಂಗಾರ, 68 ಕೆ.ಜಿ. ಗಟ್ಟಿ ಬೆಳ್ಳಿ ಜೊತೆಗೆ 103 ಕೆ.ಜಿ. ಬೆಳ್ಳಿ ಆಭರಣಗಳನ್ನ ಮನೆಯಲ್ಲಿ ಸಂಗ್ರಹಿಸಿಟ್ಟಿದ್ರು.. ಈ ಬಗ್ಗೆ ಪೊಲೀಸರಿಗೆ ಕೆಲ ಮೂಲಗಳಿಂದ ಮಾಹಿತಿ ಸಿಕ್ಕಿತ್ತು. ಹೀಗೆ ಮಾಹಿತಿ ತಿಳಿಯುತ್ತಿದ್ದಂತೆ ಬಳ್ಳಾರಿ ಪೊಲೀಸರು ರೇಡ್ ಮಾಡಿದ್ದಾರೆ.

ಜ್ಯುವಲರಿ ಶಾಪ್ ಮಾಲೀಕ ನರೇಶ್‌‌ನ ಮನೆಗೆ ಪೊಲೀಸರು ದಾಳಿ ಮಾಡಿದಾಗ ಮೂಟೆ ಮೂಟೆ ಹಣದ ಜೊತೆಗೆ ಕೆಜಿ ಕೆಜಿ ಬಂಗಾರ ಬೆಳ್ಳಿ ಸಿಕ್ಕಿದೆ. ಆದ್ರೆ, ಸೂಕ್ತ ದಾಖಲೆ ಸಲ್ಲಿಸದ ಹಿನ್ನೆಲೆ ಪತ್ತೆಯಾದ ಎಲ್ಲ ಹಣ, ಚಿನ್ನ, ಬೆಳ್ಳಿಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಖುದ್ದಾಗಿ ಭೇಟಿ ನೀಡಿ‌ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಹೇಮಾ ಜ್ಯುವೆಲರಿ ಶ್ಯಾಪ್ ಮಾಲೀಕ ನರೇಶ್​ ಎಂಬುವರ ಮನೆಯಲ್ಲಿ 5.6 ಕೋಟಿ ರೂಪಾಯಿ ನಗದು, 103 ಬೆಳ್ಳಿ, 68 ಕೆ.ಜಿ ಕಚ್ಚಾ ಬೆಳ್ಳಿ ಹಾಗೂ 3 ಕೆ.ಜಿ ಬಂಗಾರ ಸಿಕ್ಕಿದೆ. ಇದಕ್ಕೆ ದಾಖಲೆ ಇಲ್ಲದ ಕಾರಣ ನಮ್ಮ ತಂಡ ವಶಕ್ಕೆ ಪಡೆದುಕೊಂಡಿದೆ.  

ರಂಜಿತ್ ಕುಮಾರ ಬಂಡಾರು, ಎಸ್​ಪಿ

ಲೋಕಸಭಾ ಚುನಾವಣೆ ಹಿನ್ನೆಲೆ ನೀತಿಸಂಹಿತೆ ಜಾರಿಯಲ್ಲಿದ್ದು, ಇಷ್ಟೊಂದು ಹಣ ಬಂಗಾರ ಬೆಳ್ಳಿ ಪತ್ತೆಯಾಗಿರೋದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇಷ್ಟೊಂದು ಹಣವನ್ನ ನಗದು ರೂಪದಲ್ಲಿ ಇಟ್ಟುಕೊಂಡಿರುವುದಕ್ಕೆ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಲು ಇಟ್ಟುಕೊಳ್ಳಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಇನ್ನು ನರೇಶ್​ನಿಗೆ ನೋಟಿಸ್ ನೀಡಲಾಗಿದ್ದು, ಆತನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತೆ ಅಂತ ಎಸ್‌ಪಿ ತಿಳಿಸಿದ್ದಾರೆ.

ಅವರನ್ನು ವಿಚಾರಣೆಗೆ ಕರೆಸಿ ಮಾಹಿತಿ ಪಡೆದುಕೊಳ್ಳುತ್ತೇವೆ. ಇದರ ಸಂಬಂಧ ಎಲ್ಲ ದಾಖಲೆಗಳನ್ನ ಸಂಗ್ರಹಿಸುತ್ತೇವೆ. ಯಾವ ಉದ್ದೇಶಕ್ಕಾಗಿ ಇದೆಲ್ಲ ನಿಮ್ಮತ್ರ ಬಂದಿದೆ. ಇದೆಲ್ಲದರ ಮೂಲ ಯಾವುದು ಎಂದು ಮಾಹಿತಿ ಪಡೆಯುತ್ತೇವೆ. ಎಲೆಕ್ಷನ್​ ಸಂಬಂಧ ಇದನ್ನು ಸಂಗ್ರಹಿಸಿದ್ದರಾ ಎಂಬುದನ್ನು ವಿಚಾರಣೆಯಲ್ಲಿ ಗೊತ್ತಾಗಲಿದೆ. 

ರಂಜಿತ್ ಕುಮಾರ್‌ ಬಂಡಾರು, ಎಸ್‌ಪಿ 

ಕೋಟಿ ಕೋಟಿ ಸಂಪತ್ತಿನ ಹಿಂದೆ ಬಿದ್ದಿರೋ ಪೊಲೀಸರು ಎಲ್ಲ ರೀತಿಯಿಂದ ತನಿಖೆ ನಡೆಸುತ್ತಿದ್ದಾರೆ. ಇದು ಹವಾಲಾ ಹಣವೋ ಅಥವಾ ಬ್ಲ್ಯಾಕ್‌ ಮನಿಯೋ? ಚುನಾವಣೆಗೆ ಬಳಕೆ ಮಾಡಲು ತಂದಿದ್ದೋ? ಅಂತ ಹಲವು ಆಯಾಮಗಳಲ್ಲಿ ತನಿಖೆಯನ್ನ ಮುಂದುವರಿಸಿದ್ದಾರೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೊಲೀಸರಿಂದ ರಣಬೇಟೆ.. ಗಣಿನಾಡಿನ ಮನೆಯಲ್ಲಿ ಕೋಟಿ ಕೋಟಿ ಹಣ, ಮೂಟೆ, ಮೂಟೆ ಬೆಳ್ಳಿ, ಚಿನ್ನ ಪತ್ತೆ

https://newsfirstlive.com/wp-content/uploads/2024/04/BLY_MONEY_GOLD_SILVEr.jpg

Load More