ಗದಗ ಪೊಲೀಸರ ದಾಳಿ.. ಅಕ್ರಮ ಬಡ್ಡಿ ದಂಧೆಕೋರರಿಗೆ ಶಾಕ್: ಕೋಟಿ ಕೋಟಿ ಹಣ ಜಪ್ತಿ

author-image
Gopal Kulkarni
Updated On
ಗದಗ ಪೊಲೀಸರ ದಾಳಿ.. ಅಕ್ರಮ ಬಡ್ಡಿ ದಂಧೆಕೋರರಿಗೆ ಶಾಕ್: ಕೋಟಿ ಕೋಟಿ ಹಣ ಜಪ್ತಿ
Advertisment
  • ಬೆಟಗೇರಿ ಬಡ್ಡಿ ದಂಧೆಕೋರನ ಮನೆ ಮೇಲೆ ದಾಳಿ
  • ಪೊಲೀಸರ ದಾಳಿ ವೇಳೆ ಕೋಟಿ ಕೋಟಿ ಹಣ ಜಪ್ತಿ
  • 1.50 ಕೋಟಿ ಹಣ, ಚಿನ್ನಾಭರಣ, ಅನೇಕ ದಾಖಲೆ ಜಪ್ತಿ

ಗದಗ ಜಿಲ್ಲೆಯಲ್ಲಿ ಪೊಲೀಸರು ಬಡ್ಡಿ ದಂಧೆಕೋರರಿಗೆ ಸರಿಯಾದ ಪಾಠ ಮಾಡ್ತಿದ್ದಾರೆ. ಅದ್ರಲ್ಲೂ ಅಕ್ರಮ ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದ್ದು, ಬ್ರೇಕ್ ಹಾಕೋಕೆ ಪೊಲೀಸ್ ಇಲಾಖೆ ಟೊಂಕಕಟ್ಟಿ ನಿಂತಂತೆ ಕಾಣ್ತಿದೆ. ಇದರ ಮುಂದುವರೆದ ಭಾಗವಾಗಿ ನಿನ್ನೆ ಕೂಡ ಗದಗ ಪೊಲೀಸರು 12 ತಂಡಗಳಾಗಿ 12 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.. ಈ ಬಗ್ಗೆ ಒಂದು ಸ್ಟೋರಿ ಇಲ್ಲಿದೆ.

ಗದಗ ಜಿಲ್ಲೆಯಲ್ಲಿ ಮನೆ ಮಾಡಿರೋ ಬಡ್ಡಿ ದಂಧೆಕೋರರ ಹಾವಳಿಗೆ ಬ್ರೇಕ್ ಹಾಕೋಕೆ ಪೊಲೀಸರು ಪಣತೊಟ್ಟಂತೆ ಕಾಣಿಸ್ತಿದೆ. ಎರಡು ದಿನಗಳ ಹಿಂದೆ ಸುಮಾರು 12 ಜನ ಬಡ್ಡಿ ದಂಧೆಕೋರರ ಮನೆ ಮೇಲೆ ದಾಳಿ ಮಾಡಿ ಸುಮಾರು 26 ಲಕ್ಷಕ್ಕೂ ಅಧಿಕ ಹಣ ಜಪ್ತಿ ಮಾಡಿದ್ದರು. ಇದೇ ಬಿಸಿಯಲ್ಲಿ ನಿನ್ನೆ ಕೂಡ ಬಡ್ಡಿ ವ್ಯವಹಾರ ಮಾಡ್ತಿದ್ದ ಮತ್ತೊಬ್ಬನಿಗೆ ಬಿಸಿ ಮುಟ್ಟಿಸಿ ಬೆವರಿಳಿಸಿದ್ದಾರೆ.

ಇದನ್ನೂ ಓದಿ:Bhagappa Harijan: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು.. ನಟೋರಿಯಸ್ ಬಾಗಪ್ಪ ಹರಿಜನ್ ಫಿನಿಶ್ ​

publive-image

ಗೋಲ್ಡ್​ ಚೈನ್​. ಗೋಲ್ಡ್​ ಬ್ರಸ್ಲೇಟ್. ಗೂಂಡಾ ಲುಕ್​​ನಲ್ಲಿರೋ ಬೆಟಗೇರಿ ಯಲ್ಲಪ್ಪ ಮಿಸ್ಕಿನ್​ಗೆ ಗದಗ ಪೊಲೀಸರು ಮಿಸ್ಕಾಡದಂತೆ ಮಾಡಿ ಮೂಲೆನಲ್ಲಿ ಕೂರಿಸಿದ್ರು. ಈತನಿಗೆ ಸೇರಿದ್ದ ಹಾಗೂ ಈತನ ಸಂಬಂಧಿಕರ ಮನೆ ಸೇರಿ ಸುಮಾರು 12 ಕಡೆ ದಾಳಿ ಮಾಡಿ ಕೋಟಿ ಕೋಟಿ ಹಣ ಜಪ್ತಿ ಮಾಡಿದ್ದಾರೆ. ಹೀಗೆ 12 ಕಡೆ ದಾಳಿ ಮಾಡಿದ ಪೊಲೀಸರ ಕೈಗೆ ಸಿಕ್ಕಿದ್ದು, ಸುಮಾರು 1.50 ಕೋಟಿಗೂ ಅಧಿಕ ಹಣ. ಜೊತೆಗೆ ಸಾಕಷ್ಟು ಚಿನ್ನಾಭರಣ. ಹಾಗೂ ಅಡಮಾನದ ದಾಖಲೆಗಳು, ಸಾಕಷ್ಟು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

publive-image

ಇನ್ನು ಈತನ ಮೇಲೆ ದಾಳಿ ಮಾಡೋಕೆ ಕಾರಣ ಆತ ಸಾಲಗಾರರಿಗೆ ಕೊಡ್ತಿದ್ದ ಕಿರುಕುಳ. ಯಲ್ಲಪ್ಪ ಮಿಸ್ಕಿನ್​​ ಗದಗ ಬೆಟಗೇರಿಯ ಹಲವಾರು ಜನರಿಗೆ ಅಕ್ರಮವಾಗಿ ಬಡ್ಡಿ ಹಣ ನೀಡಿ ಬಡ್ಡಿಗೆ ಬಡ್ಡಿ ಹಾಕಿ ಸಾಕಷ್ಟು ಕಿರುಕುಳ ನೀಡ್ತಿದ್ದನೆಂಬ ಆರೋಪವಿದೆ. ಅದ್ರಂತೆ ಅಶೋಕ ಗಣಾಚಾರಿ ಎಂಬುವರು ಈತ ಕೊಡ್ತಿದ್ದ ಕಿರಕುಳದ ಬಗ್ಗೆ ಬೆಟಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರು ನೀಡಿರೋ ದೂರಿನ ಆಧಾರದ ಮೇಲೆ ಪೊಲೀಸರು ಸುಮಾರು 12 ತಂಡಗಳನ್ನ ರಚನೆ ಮಾಡಿಕೊಂಡು ಖಚಿತ ಮಾಹಿತಿ ಪಡೆದು ಯಲ್ಲಪ್ಪ ಮಿಸ್ಕಿನ್​ ಮಾಡಿರೋ ಬೇನಾಮಿ ಆಸ್ತಿಗಳನ್ನೂ ಒಳಗೊಂಡಂತೆ ದಾಳಿ ಮಾಡಿದ್ದಾರೆ.

publive-image

ಇದನ್ನೂ ಓದಿ:ಬೆಂಗಳೂರು-ಮೈಸೂರು ಮೆಮು ರೈಲಿನಲ್ಲಿ ಫಿಲ್ಮಿ ಸ್ಟೈಲ್‌ ದರೋಡೆ; ಮಂಡ್ಯ ಟು ಚನ್ನಪಟ್ಟಣ ನಡೆದಿದ್ದೇನು?

ಇನ್ನು ಈ ಆಸಾಮಿಯ ಮೈತುಂಬ ಬಡ್ಡಿ ದುಡ್ಡಿಂದ ಬಂದಿದ್ದ ಚಿನ್ನಾಭರಣಗಳನ್ನೇ ಹಾಕಿಕೊಂಡು ಮೆರದಾಡ್ತಿದ್ದನಂತೆ. ಈತನನ್ನ ನೋಡಿ ಅದೆಷ್ಟೋ ರೌಡಿಗಳು ಬಡ್ಡಿದಂಧೆಗೆ ಇಳಿದು ಅಕ್ರಮ ದಂಧೆ ನಡೆಸ್ತಿದ್ರು ಅನ್ನೋ ಮಾತುಗಳು ಸಹ ಇವೆ. ಸದ್ಯ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬಂತೆ ಅಸಾಮಿ ಪೊಲೀಸರ ಕಾರ್ಯಾಚರಣೆಯಲ್ಲಿ ತಗ್ಲಾಕ್ಕೊಂಡಿದ್ದಾನೆ. ಬಡ್ಡಿ ಕಿರುಕುಳ ಅನುಭವಿಸ್ತಿದ್ದ ಬಡಪಾಯಿಗಳಿಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ ಗದಗ ಪೊಲೀಸರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment