newsfirstkannada.com

ಮದ್ವೆಯಾದ್ರೂ ಸಂಸಾರ ಇಲ್ಲ, ಮಕ್ಕಳೂ ಆಗಿಲ್ಲ, ಡಿವೋರ್ಸ್​ ಒಂದೇ ಬಾಕಿ -ರಾಜ್ಯದ ಅನೇಕ ಪೊಲೀಸರ ಕಣ್ಣೀರ ಕಥೆ

Share :

Published February 25, 2024 at 6:40am

    ಪೊಲೀಸ್ ಇಲಾಖೆಯಲ್ಲಿ 2021ರಿಂದ ವರ್ಗಾವಣೆಯೇ ಆಗಿಲ್ಲ

    ವರ್ಗಾವಣೆ ಸಿಗದೇ ವಿಚ್ಛೇದನ ಪ್ರಕರಣ ಹೆಚ್ಚುತ್ತಿವೆ ಅಂತ ಅಳಲು

    ದಯಾಮರಣಕ್ಕೆ ಅವಕಾಶ ಕೋರಿ ಪೊಲೀಸರಿಂದ ರಾಷ್ಟ್ರಪತಿಗೆ ಪತ್ರ

ಪೊಲೀಸ್​ ಇಲಾಖೆ ಅಂದ್ರೆ ಶಿಸ್ತಿನ ಇಲಾಖೆ. ಆದ್ರೆ ಶಿಸ್ತಿನ ಸಿಪಾಯಿಗಳು ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಡ್ಯೂಟಿ ಮಾಡುವಂತಾಗಿದೆ. ಹೀಗಾಗಿ ದಯಾಮರಣ ಕೊಡಿ ಅಂತಾ ಸಿಎಂ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು ತೋಡಿಕೊಂಡಿರೋ ನೋವುಗಳು ಸತ್ಯವೇ ಆಗಿದ್ರೂ ಕೇಳೋರಿಗೆ ವಿಚಿತ್ರ ಅನಿಸಬಹುದು.

ದಯಾಮರಣಕ್ಕೆ ಅವಕಾಶ ಕೋರಿ ರಾಷ್ಟ್ರಪತಿಗೆ ಪತ್ರ ಬರೆದು ಅಳಲು

ನಾವೆಲ್ಲ ಸಮಾಜದಲ್ಲಿ ಶಾಂತಿಯಿಂದ ಇದ್ದೇವೆ ಅಂದ್ರೆ ಅದಕ್ಕೆ ಆರಕ್ಷಕರೇ ಕಾರಣ. ಆದ್ರೀಗ ಸರ್ಕಾರ ಮತ್ತು ಗೃಹ ಇಲಾಖೆಯ ಅಸಡ್ಡೆಯಿಂದ ವರ್ಗಾವಣೆ ಸಿಗದೇ ಪೊಲೀಸರು ಕಂಗಾಲಾಗಿದ್ದಾರೆ. ಇದರ ನೊಂದ ಪೊಲೀಸರು ವರ್ಗಾವಣೆ ಕೊಡಿ. ಇಲ್ಲ ದಯಾಮರಣಕ್ಕೆ ಒಪ್ಪಿಗೆ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದು ಮನದೊಳಗಿನ ನೋವನ್ನು ಅಕ್ಷರದ ರೂಪದಲ್ಲಿ ತೋಡಿಕೊಂಡಿದ್ದಾರೆ.

ವರ್ಗಾವಣೆ ಮಾಡದೇ ಮಕ್ಕಳಾಗಲ್ಲ ಅಂತ ಅಳಲು

ರಾಜ್ಯದ ಅನೇಕ ಠಾಣೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯಿಂದ ಸಿಎಂ ಮತ್ತು ರಾಷ್ಟ್ರಪತಿಗಳಿಗೆ ಪತ್ರ ರವಾನಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಸಿಗದೇ ಇರುವುದರಿಂದ ಹತಾಶರಾಗಿರುವ ಸಿಬ್ಬಂದಿ ಅಂತಿಮವಾಗಿ ಈ ಹಾದಿ ಹಿಡಿದಿದ್ದಾರೆ. ಪತ್ರ ಬರೆದು, ವರ್ಗಾವಣೆ ಮಾಡಿ ಇಲ್ಲವೇ ದಯಾ ಮರಣ ನೀಡಿ ಎಂದು ಕೋರಿದ್ದಾರೆ. ಹಾಗಾದ್ರೆ ಪತ್ರದಲ್ಲಿ ಏನಿದೆ ಅನ್ನೋದೇ ಕುತೂಹಲಕಾರಿ. ಪೊಲೀಸ್‌ ಸಿಬ್ಬಂದಿ ಮದುವೆಯಾದ್ರೂ ಸಂಸಾರ ಮಾಡಲಾಗದ ಸ್ಥಿತಿಯಲ್ಲಿದ್ದಾರಂತೆ. ಹೆಂಡ್ತಿ ಒಂದು ಜಿಲ್ಲೆಯಲ್ಲಿ ಕೆಲಸ ಮಾಡ್ತಿದ್ರೆ, ಗಂಡ ಇನ್ನೊಂದು ಜಿಲ್ಲೆಯಲ್ಲಿ ಡ್ಯೂಟಿ ಮಾಡ್ತಿದ್ದಾರೆ. ಅಂತರ್​ ಜಿಲ್ಲೆಗೆ ವರ್ಗಾವಣೆ ಮಾಡದೇ ಇರುವ ಕಾರಣ ಗಂಡ, ಹೆಂಡತಿ ಜೊತೆಯಲ್ಲಿ ಇರೋದಕ್ಕೆ ಆಗುತ್ತಿಲ್ಲ. ಇದರಿಂದ ಮಕ್ಕಳಾಗ್ತಿಲ್ಲ ಅಂತ ಪತ್ರ ಬರೆದು ನೋವು ತೋಡಿಕೊಂಡಿದ್ದಾರೆ. ಇದರಿಂದ ವಿಚ್ಛೇದನ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಇನ್ನು ಕೆಲ ಸಿಬ್ಬಂದಿ ವಯಸ್ಸಾದ ತಂದೆ-ತಾಯಿ ನೋಡಿಕೊಳ್ಳಬೇಕಿದೆ. ಹೀಗಾಗಿ ವರ್ಗಾವಣೆ ಕೋರಿ ಪೊಲೀಸ್​ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ಒಂದ್ಕಡೆ ಸಿಬ್ಬಂದಿಗೆ ಮದುವೆಯಾದ್ರೂ, ಗಂಡ ಹೆಂಡತಿ ಬೇರೆ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡ್ತಿರೋದು ಸಮಸ್ಯೆಯಾಗ್ತಿದೆ ಅನ್ನೋದು ಸಿಬ್ಬಂದಿಯ ಅಳಲು. ವರ್ಗಾವಣೆಯಾಗದೇ ಕುಟುಂಬಸ್ಥರಿಂದ ಸಿಬ್ಬಂದಿ ದೂರ ದೂರ ಆಗ್ತಾ ಇದ್ದಾರಂತೆ. ಇನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಮತ್ತು ಕೆಸಿಎಸ್‌ಆರ್‌ ನಿಯಮದ ಪ್ರಕಾರ ಪತಿ-ಪತ್ನಿಯರು ಒಂದೇ ಘಟಕ ಹಾಗೂ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ನಿಯಮ ಇದೆ. ಆದ್ರೂ ಕಳೆದ 3 ವರ್ಷಗಳಿಂದ ಯಾವುದೇ ವರ್ಗಾವಣೆ ಮಾಡುತ್ತಿಲ್ಲ. ಈ ವಿಚಾರವಾಗಿ ಗೃಹ ಸಚಿವರಿಗೆ ಅಂತರ್‌ ಜಿಲ್ಲಾ ವಗಾವಣೆ ಮಾಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದು ಈ ವಿಚಾರವಾಗಿ ಶೀಘ್ರದಲ್ಲೇ ವರ್ಗಾವಣೆ ಮಾಡುತ್ತೇವೆ ಅಂತ ಕೇವಲ ಬಾಯಿ ಮಾತಿನಲ್ಲಿ ಹೇಳಿಕೆ ನೀಡುತ್ತಿದ್ದಾರೆ ಹೊರತು ಅಂತರ್ ಜಿಲ್ಲಾ ವರ್ಗಾವಣೆ ಲಿಖಿತ ರೂಪದಲ್ಲಿ ಬರುತ್ತಿಲ್ಲ. ಪೊಲೀಸ್ ಇಲಾಖೆಯಲ್ಲಿ 2021ರಿಂದ ವರ್ಗಾವಣೆಯೇ ಆಗಿಲ್ಲ. ಹೀಗಾಗಿ ವರ್ಗಾವಣೆಯಾಗದೆ ಕುಟುಂಬಸ್ಥರಿಂದ ದೂರ ಉಳಿಯುವಂತಾಗಿದೆ ಎಂದು ಮನದ ಮಾತು ಹೇಳಿಕೊಂಡಿದ್ದಾರೆ.

ಪೊಲೀಸರದ್ದು ಶಿಸ್ತಿನ ಇಲಾಖೆ. ಹಾಗಾಗಿ ಬೇರೆ ಇಲಾಖೆಯವರಂತೆ ಪ್ರತಿಭಟನೆ ಮಾಡಲು ಅವಕಾಶವಿರುವುದಿಲ್ಲ. ಬೇರೆ ಇಲಾಖೆಯಲ್ಲಿ ಅಂತರ್‌ ಜಿಲ್ಲಾ ವರ್ಗಾವಣೆ ನಡೆದಿದೆ. ಹೀಗಾಗಿ ದಯಾಳುಗಳಾದ ತಾವುಗಳು ನಮಗೆ ದಯಾಮರಣ ಕಲ್ಪಿಸಿಕೊಡಬೇಕೆಂದು ನೊಂದ ಮನಸ್ಸಿನಿಂದ ಈ ಮೂಲಕ ಕಳಕಳಿಯಿಂದ ಬೇಡಿಕೊಳ್ಳುತ್ತವೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಅನ್ನೋದನ್ನು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದ್ವೆಯಾದ್ರೂ ಸಂಸಾರ ಇಲ್ಲ, ಮಕ್ಕಳೂ ಆಗಿಲ್ಲ, ಡಿವೋರ್ಸ್​ ಒಂದೇ ಬಾಕಿ -ರಾಜ್ಯದ ಅನೇಕ ಪೊಲೀಸರ ಕಣ್ಣೀರ ಕಥೆ

https://newsfirstlive.com/wp-content/uploads/2023/12/Police-7.jpg

Load More