Advertisment

108 ಆ್ಯಂಬುಲೆನ್ಸ್‌ ಕದ್ದು ಓಡುತ್ತಿದ್ದ ಕಳ್ಳ.. ಸಿನಿಮಾ ಸ್ಟೈಲ್‌ನಲ್ಲಿ ಚೇಸ್ ಮಾಡಿದ ಪೊಲೀಸ್‌! VIDEO

author-image
admin
Updated On
108 ಆ್ಯಂಬುಲೆನ್ಸ್‌ ಕದ್ದು ಓಡುತ್ತಿದ್ದ ಕಳ್ಳ.. ಸಿನಿಮಾ ಸ್ಟೈಲ್‌ನಲ್ಲಿ ಚೇಸ್ ಮಾಡಿದ ಪೊಲೀಸ್‌! VIDEO
Advertisment
  • ಸೈರನ್ ಹಾಕೊಂಡು ಊರೆಲ್ಲಾ ರೌಂಡ್ಸ್‌ ಹೊಡೆಯುತ್ತಿದ್ದ ಕಳ್ಳ
  • ಆ್ಯಂಬುಲೆನ್ಸ್‌ ಹೈಜಾಕ್ ಮಾಡಿ ಪೊಲೀಸರಿಗೆ ಕಣ್ಣಾಮುಚ್ಚಾಲೆ
  • ಸಿನಿಮಾ ಸ್ಟೈಲ್‌ನಲ್ಲಿ ಚೇಸ್ ಮಾಡಲು ಪೊಲೀಸರ ಹರಸಾಹಸ

ಖತರ್ನಾಕ್ ಕಳ್ಳ 108 ಆ್ಯಂಬುಲೆನ್ಸ್‌ ಅನ್ನೇ ಹೈಜಾಕ್ ಮಾಡಿ ಪೊಲೀಸರಿಗೆ ಕಣ್ಣಾಮುಚ್ಚಾಲೆ ಆಟ ಆಡಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ಪ್ರಳಯಾಂತಕ ಆ್ಯಂಬುಲೆನ್ಸ್‌ ಕದ್ದಿದ್ದೂ ಅಲ್ಲದೇ ಸೈರನ್ ಹಾಕೊಂಡು ಊರೆಲ್ಲಾ ರೌಂಡ್ಸ್‌ ಹೊಡೆದಿದ್ದಾನೆ.

Advertisment

ಈ ಆ್ಯಂಬುಲೆನ್ಸ್ ಸೈರನ್ ಸದ್ದಿಗೆ ರಸ್ತೆಯಲ್ಲಿ ಇರೋರೆಲ್ಲಾ ದಾರಿ ಬಿಡುತ್ತಿದ್ದರು. ಆದರೆ ಆ್ಯಂಬುಲೆನ್ಸ್ ಹಿಂದೆ ಪೊಲೀಸ್ ವಾಹನಗಳು ಸಿನಿಮಾ ಸ್ಟೈಲ್‌ನಲ್ಲಿ ಚೇಸ್ ಮಾಡುತ್ತಾ ಇದ್ದವು. ಈ ದೃಶ್ಯವನ್ನು ನೋಡಿದ ಜನರಿಗೆ ಆಗ ಅಸಲಿ ವಿಷಯ ಗೊತ್ತಾಗಿದೆ.

publive-image

ಆ್ಯಂಬುಲೆನ್ಸ್‌ ಒಳಗೆ ಕಳ್ಳನೊಬ್ಬ ಸೇರಿಕೊಂಡಿದ್ದ. ಆತ ಆ್ಯಂಬುಲೆನ್ಸ್‌ ಸೈರನ್ ಹಾಕಿಕೊಂಡು ಹೈದರಾಬಾದ್​-ವಿಜಯವಾಡ ನಡುವಿನ ಹೆದ್ದಾರಿ ಸುತ್ತಾಡಿದ್ದಾನೆ. ಈತನನ್ನ ಕಾಟೆಪಲ್ಲಿ ಟೋಲ್​ ಗೇಟ್​ ಬಳಿ ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಅಲ್ಲೂ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಅಲಿಂದ ಈತ ಎಸ್ಕೇಪ್ ಆಗಿದ್ದ.

publive-image

ಕೊನೆಗೆ ಸೂರ್ಯ ಪೇಟ್​ನಲ್ಲಿ ಇಡೀ ರಸ್ತೆಯನ್ನೇ ಬ್ಲಾಕ್​ಮಾಡಿದ ಪೊಲೀಸರು ಆ್ಯಂಬುಲೆನ್ಸ್ ಕಳ್ಳನನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರನ್ನ ಕಂಡು ಕಕ್ಕಾಬಿಕ್ಕಿಯಾದ ಖದೀಮ ಆ್ಯಂಬುಲೆನ್ಸ್​ನ ಹಳ್ಳಕ್ಕೆ ಇಳಿಸಿ ಶರಣಾಗಿದ್ದಾನೆ.

Advertisment

ಇದನ್ನೂ ಓದಿ: ಮನೆಗೆ ಬಂದಿದ್ದ 30 ವರ್ಷದ ಹಿಂದೆ ಕಳೆದು ಹೋಗಿದ್ದ ಮಗ, ಮಗನೇ ಅಲ್ಲ..! ಎಮೋಷನಲ್ ಸ್ಟೋರಿಯಲ್ಲೊಂದು ಮೆಗಾ ಟ್ವಿಸ್ಟ್​! 


">December 7, 2024

ಆ್ಯಂಬುಲೆನ್ಸ್ ಅನ್ನು ಚೇಸ್ ಮಾಡಿದ ಪೊಲೀಸರು ಕಳ್ಳನನ್ನ ಹಿಡಿಯಲು ಹರಸಾಹಸ ಪಟ್ಟಿದ್ದಾರೆ. ಸಿಕ್ಕಿಬಿದ್ದ ಖತರ್ನಾಕ್ ಆಸಾಮಿ ತೆಲುಗು ಸಿನಿಮಾ ಸ್ಟೈಲ್‌ನಲ್ಲಿ ಡೈಲಾಗ್ ಹೊಡೆದಿದ್ದಾನೆ. ನನ್ನ ಹೆಸರು ಕಾಲ ಭೈರವ ಎಂದು ಮೀಸೆ ತಿರುವುತ್ತಾ ನಾನು ಹೈದರಾಬಾದ್ ಆಸ್ಪತ್ರೆಗೆ ಹೋಗಬೇಕಿತ್ತು ಅದಕ್ಕೆ ಆ್ಯಂಬುಲೆನ್ಸ್ ತೆಗೆದುಕೊಂಡು ಹೋದೆ ಎಂದಿದ್ದಾನೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment