newsfirstkannada.com

ಸೋನುಗೌಡಗೆ ಪರಪ್ಪನ ಅಗ್ರಹಾರ ಜೈಲಿನಿಂದ ಮುಕ್ತಿ ಸಿಗುತ್ತಾ.. ರೀಲ್ಸ್​ ರಾಣಿಗೆ ರಿಲೀಫ್ ಯಾವಾಗ?

Share :

Published March 26, 2024 at 7:37pm

Update March 26, 2024 at 7:38pm

    ಬಾಲಕಿಯ ಪೋಷಕರು ನೀಡಿದ ಹೇಳಿಕೆ ಸೋನುಗೆ ಮುಳುವಾಗುತ್ತಾ?

    ಏನೋ ಮಾಡೋದಕ್ಕೆ ಹೋಗಿ ಇನ್ನೇನೋ ಮಾಡಿ ಸೋನುಗೆ ಸಂಕಷ್ಟ

    ಕಳೆದ 4 ದಿನಗಳಿಂದ ನಿರಂತರವಾಗಿ ತನಿಖೆ ನಡೆಸುತ್ತಿರೋ ಪೊಲೀಸರು

ರೀಲ್ಸ್ ರಾಣಿ ಸೋನುಗೌಡ ಮಗುವನ್ನು ದತ್ತು ಪಡೆದ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಒಂದ್ಕಡೆ ಕೋರ್ಟ್ ಸೋನುಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇನ್ನೊಂದ್ಕಡೆ ಬಾಲಕಿ ಪೋಷಕರು ಮಗುವನ್ನ ದತ್ತು ಕೊಟ್ಟಿಲ್ಲ ಅಂತೇಳ್ತಿದ್ದಾರೆ. ಹಾಗಾದ್ರೆ ಬಾಲಕಿ ಪೋಷಕರು ಈ ಹೇಳಿಕೆ ಸೋನುಗೆ ರಿಲೀಫ್​ ನೀಡುತ್ತಾ ಅಥವಾ ಮುಳುವಾಗುತ್ತಾ?.

ಸದ್ಯ ರೀಲ್ಸ್ ರಾಣಿ ಸೋನುಗೌಡ ಪರಿಸ್ಥಿತಿ ಏನೋ ಮಾಡಲು ಹೋಗಿ ಏನೋ ಮಾಡಿದೆ ಎನ್ನುವಾಗೆ ಆಗಿದೆ. ಏನೋ ಮಾಡೋದಕ್ಕೆ ಹೋಗಿ ಇನ್ನೇನೊ ಮಾಡಿ ಸೋನು ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿರುವ ಸೋನುಗೌಡ ದತ್ತು ಪ್ರಕರಣ, ಬಾಲಕಿ ಪೋಷಕರ ಹೇಳಿಕೆಯಿಂದ ಮತ್ತೊಂದು ಆಯಾಮ ಪಡೆದುಕೊಂಡಿದೆ.

ರೀಲ್ಸ್ ರಾಣಿಗೆ 14 ದಿನ ನ್ಯಾಯಾಂಗ ಬಂಧನ! ಮುಂದೇನು?

ಅಕ್ರಮವಾಗಿ ದತ್ತು ಪಡೆದ ಆರೋಪದಲ್ಲಿ ಪೊಲೀಸರು ಸೋನುಗೌಡರನ್ನ ಅರೆಸ್ಟ್ ಮಾಡಿದ್ದಾರೆ. ಸೋನು ಬಂಧನದ ಬಳಿಕ ಪೊಲೀಸರು ರಾಯಚೂರಿನಲ್ಲಿ ಸ್ಥಳ ಮಹಜರು ಕೂಡ ನಡೆಸಿದರು. ತರಾತುರಿಯಲ್ಲೇ ಬಾಲಕಿ ಚಿಕ್ಕಪ್ಪನ ಮನೆಯನ್ನ ಪರಿಶೀಲನೆ ನಡೆಸಿ, ಪೊಲೀಸರು ಸೋನುಳನ್ನ ಅಲ್ಲಿಂದ ಕರೆದುಕೊಂಡು ಹೋದರು. ಆದ್ರೆ, ಈ ವೇಳೆ ಗ್ರಾಮಸ್ಥರು ಸೋನುಗೌಡ ವಿರುದ್ಧ ಅಕ್ಷರಶಃ ಕೆಂಡ ಮಂಡಲವಾಗಿದ್ರು. ಇದೇ ಕಾರಣಕ್ಕೆ ಸೋನುಗೌಡ ಇದ್ದ ಕಾರಿಗೆ ಕಾಚಾಪುರದ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿಬಿಟ್ಟಿದ್ರು.

ಈ ಮೊದಲು ನ್ಯಾಯಾಲಯ ಸೋನುಗೌಡಳನ್ನ ಪೊಲೀಸ್​ ಕಸ್ಟಡಿಗೆ ನೀಡಿತ್ತು. ಈ ಹಿನ್ನಲೆ, ಕಳೆದ 4 ದಿನಗಳಿಂದ ನಿರಂತರ ತನಿಖೆ ನಡೆಸುತ್ತಿರೋ ಪೊಲೀಸರು, ರಾಯಚೂರಿಗೂ ತೆರಳಿ, ಅಲ್ಲಿ ಸ್ಥಳ ಮಹಜರು ಮಾಡಿ ತನಿಖೆ ನಡೆಸಿ ಬಂದಿದ್ದಾರೆ. ಸದ್ಯ 4 ದಿನದಿಂದ ವಿಚಾರಣೆ ಎದುರಿಸಿರೋ ಸೋನುಗೌಡಳನ್ನ ಸೋಮವಾರ ನ್ಯಾಯಧೀಶರ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ಆಲಿಸಿದ ಕೋರ್ಟ್ ಸೋನುಗೌಡಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಸದ್ಯ ಸೋನು ಶ್ರೀನಿವಾಸ್‌ ಗೌಡಳನ್ನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

ಮಗುವಿನ ಪೋಷಕರಿಗೂ ನೋಟಿಸ್.. ವಿಚಾರಣೆಯಲ್ಲಿ ಹೇಳಿದ್ದೇನು?

ಈ ಪ್ರಕರಣ ಸಂಬಂಧ ಪೊಲೀಸರು ಮಗುವಿನ ಪೋಷಕರಿಗೂ ನೋಟಿಸ್‌ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ರು. ಇದ್ರಂತೆ ಪೊಲೀಸರ ವಿಚಾರಣೆಯಲ್ಲಿ ಮಗುವಿನ ಪೋಷಕರು ನಾವು ಮಗುವನ್ನ ದತ್ತು ನೀಡಿಲ್ಲ ಎಂದಿದ್ದಾರೆ. ಮಗು ಸೋನುಗೌಡಳನ್ನ ಹಚ್ಕೊಂಡಿತ್ತು. ಹುಷಾರಿಲ್ಲದಿದ್ದಾಗ ಸೋನು ಅಕ್ಕ ಅಂತಾ ಕನವರಿಸ್ತಿದ್ದಳು. ಆದ್ರಿಂದ ಒಂದೆರಡು ದಿನ ಸೋನು ಜೊತೆ ಇರಲಿ ಅಂತಾ ಕಳಿಸಿದ್ದೇವು. ನಾವು ಮಗುವನ್ನ ಸೋನುಗೌಡಗೆ ಮಾರಾಟ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಬಾಲಕಿ ಪೋಷಕರು ಹೇಳಿದ್ದೇನು?

  • ಪೊಲೀಸರು: ನೀವು ನಿಮ್ಮ ಮಗುವನ್ನ ಸೋನುಗೌಡಗೆ ದತ್ತು ನೀಡಿದ್ರಾ?
  • ಮಗುವಿನ ಪೋಷಕರು: ಇಲ್ಲ ನಾವು ನಮ್ಮ ಮಗಳನ್ನ ದತ್ತು ನೀಡಿಲ್ಲ
  • ಪೊಲೀಸರು: ಹಾಗಾದ್ರೆ ನಿಮ್ಮ ಮಗಳು ಸೋನು ಬಳಿ ಯಾಕಿತ್ತು?
  • ಮಗುವಿನ ಪೋಷಕರು: ಮಗು ಸೋನುಗೌಡಳನ್ನ ಹಚ್ಕೊಂಡಿತ್ತು, ಹುಷಾರಿಲ್ಲದಿದ್ದಾಗ ಸೋನು ಅಕ್ಕ ಅಂತಾ ಕನವರಿಸ್ತಿತ್ತು. ಅದಕ್ಕೆ ಒಂದೆರಡು ದಿನ ಇರಲಿ ಅಂತ ಕಳಿಸಿಕೊಟ್ಟಿದ್ದೇವು.
  • ಪೊಲೀಸರು: ನಿಮ್ಮ ಮಗಳನ್ನ ಸೋನುಗೌಡಗೆ ಮಾರಾಟ ಮಾಡಿದ್ರಾ?
  • ಮಗುವಿನ ಪೋಷಕರು: ಇಲ್ಲ ನಾವು ನಮ್ಮ ಮಗುವನ್ನ ಮಾರಾಟ ಮಾಡಿಲ್ಲ

ಪೊಲೀಸರ ಮುಂದೆ ಹೇಳಿಕೆ ನೀಡಿರುವ ಬಾಲಕಿ ಪೋಷಕರು ಯಾವುದೇ ರೀತಿಯ ಮಾರಟವಾಗಲಿ, ದತ್ತುವಾಗಲಿ ನೀಡಿಲ್ಲ ಎಂದಿದ್ದಾರೆ. ಆದ್ರೆ ಸೋನುಗೌಡ ತನ್ನ ಯ್ಯೂಟೂಬ್​ನಲ್ಲಿ ಅಪ್​ಲೋಡ್​ ಮಾಡಿರುವ ವಿಡಿಯೋದಲ್ಲಿ ದತ್ತು ಪಡೆದಿದ್ದೇನೆ ಅಂತಾ ಹೇಳಿದ್ದರು. ಜೊತೆಗೆ ಕಾನೂನಾತ್ಮಕವಾಗಿ ಪಡೆಯುವ ಪ್ರಕ್ರಿಯೆ ಆರಂಭಿಸಿಲ್ಲ. ಅದಕ್ಕೆ ಮೂರ್ನಾಲ್ಕು ತಿಂಗಳು ಬೇಕಾಗುತ್ತದೆ ಅಂತಾ ಹೇಳಿಕೆ ನೀಡಿದ್ದಳು. ಹೀಗಾಗಿ ಇಬ್ಬರ ಹೇಳಿಕೆಯಲ್ಲಿ ಯಾವುದು ಸತ್ಯ? ಯಾವುದು ಮಿಥ್ಯ ಅನ್ನೋದೆ ಹಲವು ಅನುಮಾನಕ್ಕೆ ಕಾರಣ ಉಂಟು ಮಾಡಿದೆ.

ಇದನ್ನೂ ಓದಿ: ರಾಧಾ ರಮಣ ಖ್ಯಾತಿಯ ಕಾವ್ಯಾಗೌಡ ಪುತ್ರಿಯ ಫೋಟೋ ರಿವೀಲ್ ಆಯಿತಾ.. 2ನೇ ಮಗುವಿನ ನಿರೀಕ್ಷೆಯಲ್ಲಿ ಫ್ಯಾಮಿಲಿ 

ಸದ್ಯಕ್ಕಿರೋ ಪ್ರಶ್ನೆ ಮಾತ್ರ ಇದೊಂದೆ.. ಈಗಾಗಲೇ ಸೋನು ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸೋದಕ್ಕೆ ಸಿದ್ಧತೆ ನಡೆಸಿದ್ದಾರೆ. ಆದ್ರೆ ಅಕ್ರಮವಾಗಿ ದತ್ತು ಪ್ರಕರಣದಲ್ಲಿ ಸೋನುಗೌಡಗೆ ಬೇಲಾ ಜೈಲಾ? ಅನ್ನೋದು ವಿಚಾರಣೆ ಬಳಿಕವೇ ಗೊತ್ತಾಗಲಿದೆ. ಒಂದ್ಕಡೆ ಬಾಲಕಿ ಪೋಷಕರ ಹೇಳಿಕೆ ಸೋನು ಪರವಾಗಿ ಇದೆ. ಇನ್ನೊಂದ್ಕಡೆ ಸೋನುಗೌಡ ದತ್ತು ಪಡೆದಿದ್ದೇನೆ ಅಂತ ಹೇಳಿರುವ ವಿಡಿಯೋ ಮೇಲೆ ಪೊಲೀಸರ ಕಣ್ಣಿದೆ. ಹೀಗಾಗಿ ಸೋನುಗೌಡ ಸಂಕಷ್ಟ ಇಲ್ಲಿಗೆ ಮುಗಿಯುತ್ತೆ ಅಂತ ಹೇಳೋದು ಸ್ವಲ್ಪ ಕಷ್ಟ.

ಚೆಂದ ಚೆಂದ ರೀಲ್ಸ್ ಮಾಡ್ಕೊಂಡು ಇದ್ದ ಹುಡುಗಿ ಏನೋ ಮಾಡಲು ಹೋಗಿ ಇನ್ನೇನು ಮಾಡಿ ಈಗ ಪರಪ್ಪನ ಅಗ್ರಹಾರದ ಜೈಲು ಸೇರಿದ್ದಾಳೆ. ಈ ಪ್ರಕರಣದಿಂದ ಸೋನುಗೆ ಮುಕ್ತಿ ಸಿಗುತ್ತಾ? ಅಥವಾ ಸೋನುಗೌಡಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋನುಗೌಡಗೆ ಪರಪ್ಪನ ಅಗ್ರಹಾರ ಜೈಲಿನಿಂದ ಮುಕ್ತಿ ಸಿಗುತ್ತಾ.. ರೀಲ್ಸ್​ ರಾಣಿಗೆ ರಿಲೀಫ್ ಯಾವಾಗ?

https://newsfirstlive.com/wp-content/uploads/2024/03/SONUGOWDA_2.jpg

Load More