ಸಚಿವೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಆರೋಪ.. ಇಂದು CT ರವಿರನ್ನ ಕೋರ್ಟ್​ಗೆ ಹಾಜರುಪಡಿಸಲಿರುವ ಪೊಲೀಸರು

author-image
Bheemappa
Updated On
ಸಿಟಿ ರವಿಗೆ ಧರ್ಮಸ್ಥಳದಲ್ಲಿ ಆಣೆ ಮಾಡುವಂತೆ ಹೆಬ್ಬಾಳ್ಕರ್ ಸವಾಲ್.. ತಾರಕಕ್ಕೇರಿದ ಜಟಾಪಟಿ..!
Advertisment
  • ಖಾನಾಪುರ ಠಾಣೆಯಿಂದ ಬೆಂಗಳೂರಿಗೆ MLC ಸಿ.ಟಿ ರವಿ ಸ್ಥಳಾಂತರ
  • ಮಾಧ್ಯಮಗಳ ಮುಂದೆ ಸಿ.ಟಿ ರವಿ ಪ್ರತಿಕ್ರಿಯಿಸಿರುವುದು ಏನೇನು..?
  • ಖಾನಾಪುರ ಪೊಲೀಸ್ ಠಾಣೆಯಲ್ಲಿ MLC ಸಿ.ಟಿ.ರವಿ ವಿಚಾರಣೆ

ಜನಪ್ರತಿನಿಧಿಗಳು ಅಂದರೆ ಜನರಿಗೆ ಮಾದರಿ ಆಗಿರಬೇಕಾಗಿರೋರು. ಜನಪ್ರತಿನಿಧಿಗಳ ನಡೆ ಹಲವರಿಗೆ ಅನುಕರಣೀಯ. ಬುದ್ಧಿವಂತರ ಸದನ ಅಂತ ಕರೆಸಿಕೊಳ್ಳುವ ವಿಧಾನ ಪರಿಷತ್ ರಾಜಕೀಯ ನಾಯಕರು ಕಚ್ಚಾಡುವ ವೇದಿಕೆಯಾಗಿ ಮಾರ್ಪಟ್ಟಿದೆ. ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಕೇಸ್​​ನಲ್ಲಿ ಸಿ.ಟಿ ರವಿ ಅರೆಸ್ಟ್ ಆಗಿದ್ದು ಪೊಲೀಸರು ಇಂದು ಜನಪ್ರತಿನಿಧಿಗಳ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.

ಜನಪ್ರತಿನಿಧಿಗಳ ಬಾಯಲ್ಲಿ ಆಗಾಗ್ಗೆ ಉದುರುವ ಅಣಿಮುತ್ತುಗಳು. ಅಶ್ಲೀಲ ಪದ ಬಳಕೆ, ಅಸಹ್ಯ ಪದಗಳು. ನಿನ್ನೆ ಇಡೀ ದಿನ ಬೆಳಗಾವಿ ಚಳಿಗಾಲದ ಕೊನೆಯ ಅಧಿವೇಶನ ಅಂತ್ಯ ಆಗುವ ವೇಳೆಗೆ ಬುದ್ಧಿವಂತರ ಸದನದಲ್ಲಿ ಹೊತ್ತಿದ ಮಾತಿನ ಬೆಂಕಿ ಜ್ವಾಲಾಮುಖಿಯಂತೆ ಸ್ಫೋಟಿಸಿದೆ.

publive-image

ಅಶ್ಲೀಲ ಪದ ಬಳಕೆ ಪ್ರಕರಣ.. ಎಂಎಲ್​ಸಿ ಸಿ.ಟಿ ರವಿ ಬಂಧನ!

ಬುದ್ಧಿವಂತರ ಸದನ ಚಿಂತಕರ ಛಾವಡಿ ಅಂತ ಕರೆಸಿಕೊಳ್ಳುವ ಮೇಲ್ಮನೆ ವಿಧಾನಪರಿಷತ್​​​ನಲ್ಲಿ ಆರೋಗ್ಯಕರ ಚರ್ಚೆಗಳು ನಡೆಯುತ್ತಿದ್ದುದು ಆ ಕಾಲ. ಆದ್ರೀಗ ಕಾಲ ಬದಲಾಗಿದೆ. ಸಚಿವೆ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದ ಬಿಜೆಪಿ ಎಂಎಲ್​ಸಿ ಸಿ.ಟಿ.ರವಿಯನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ. ಸಿ.ಟಿ ರವಿ ವಿರುದ್ಧ ಹಿರೇಬಾಗೇವಾಡಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಖಾನಾಪುರ ಠಾಣೆಗೆ ಕರೆತಂದು ಎಸ್​.ಪಿ ಭೀಮಾಶಂಕರ ಗುಳೇದ್ ಹಾಗೂ ಡಿಸಿಪಿ ರೋಹನ್​ರಿಂದ ವಿಚಾರಣೆ ನಡೀತು. ಅಶ್ಲೀಲ ಪದ ಬಳಕೆ ಬಗ್ಗೆ ಸಿ.ಟಿ ರವಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಪೊಲೀಸರ ಪ್ರಶ್ನೆಗಳು!

  • ಸದನದಲ್ಲಿ ಈ ರೀತಿ ಪದ ಬಳಸಿದ ಉದ್ದೇಶ ಏನು?
  • ಉದ್ದೇಶಪೂರ್ವಕವಾಗಿ ಅಶ್ಲೀಲ ಶಬ್ಧ ಬಳಸಿದ್ದೀರಾ?
  • ನಿಮ್ಮ ಹೇಳಿಕೆ ಸಂಬಂಧ ಏನಾದ್ರೂ ದಾಖಲೆ ಇದ್ಯಾ?
  • ನಿಮ್ಮ ಬಳಿ ಏನಾದ್ರೂ ದಾಖಲೆ ಇದ್ರೆ ನಮಗೆ ನೀಡಿ?
  • ನಾನು ಸಚಿವೆ ವಿರುದ್ಧ ಅಶ್ಲೀಲ ಶಬ್ದವನ್ನು ಬಳಸಿಲ್ಲ
  • ಯಾರದ್ದೋ ಹೇಳಿಕೆ ಆಧರಿಸಿ ನನ್ನ ವಿರುದ್ಧ ದೂರು
  • ಪೊಲೀಸರ ವಿಚಾರಣೆ ವೇಳೆ ಸಿ.ಟಿ.ರವಿ ಹೇಳಿಕೆ

ಖಾನಾಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಬಳಿಕ ಎಂಎಲ್​ಸಿ ಸಿ.ಟಿ ರವಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

‘ಯಾವ ಕೇಸ್ ಅಂತ ಹೇಳಿಲ್ಲ’

ಯಾವ ಕಾರಣಕ್ಕೆ ನನ್ನ ಮೇಲೆ ಎಫ್​ಐಆರ್ ಹಾಕಿದ್ದಾರೆ ಅಂತ ಹೇಳಬೇಕು. ಇದುವರೆಗೂ ನನಗೆ ಏನು ಹೇಳಿಲ್ಲ. ಏನು ಕೇಸ್ ಅಂತ, ಯಾಕೆ ಕರೆದುಕೊಂಡು ಬಂದು ಕೂರಿಸಿಕೊಂಡಿದ್ದಾರೆ ಅಂತನೂ ಹೇಳಿಲ್ಲ. ಯಾವುದೇ ಆಗಲಿ ಮೊದಲು ನನಗೆ ಹೇಳಬೇಕು.
ಅನುಮಾನಸ್ಪಾದವಾಗಿ ವರ್ತನೆ ಮಾಡುತ್ತಿದ್ದಾರೆ. ಇವರ ನಡುವಳಿಕೆ ನನಗೆ ಭೀತಿ ಹುಟ್ಟಿಸಿದೆ. ವಿಧಾನಪರಿಷತ್​​ನ ಸಭಾಂಗಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇವರು ನೇರವಾಗಿ ಬೆದರಿಕೆ ಹಾಕಿದ್ದಾರೆ.

ಸಿ.ಟಿ.ರವಿ, ಎಂಎಲ್​ಸಿ

ಇದನ್ನೂ ಓದಿ:ದರ್ಶನ್​​ಗೆ ಜಾಮೀನು ಬೆನ್ನಲ್ಲೇ ಮತ್ತೊಂದು ಗುಡ್​​ನ್ಯೂಸ್.. ಕೋರ್ಟ್​​ನಿಂದ ಸಿಹಿ ಸುದ್ದಿ

publive-image

ಇಂದು ಜನಪ್ರತಿನಿಧಿಗಳ ಕೋರ್ಟ್​ಗೆ ಸಿ.ಟಿ.ರವಿ ಹಾಜರು

ತಡರಾತ್ರಿವರೆಗೂ ಖಾನಾಪುರ ಠಾಣೆಯಲ್ಲಿ ವಿಚಾರಣೆ ನಡೆಸಿದ ಪೊಲೀಸರು ಸಿ.ಟಿ.ರವಿಯನ್ನು ಬೆಂಗಳೂರಿಗೆ ಕರೆತಂದಿದ್ದಾರೆ. ಇವತ್ತು ಬೆಳಗ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಇನ್ನು ಕೋರ್ಟ್​ಗೆ ಹಾಜರುಪಡಿಸುವ ಮುನ್ನ ಪೊಲೀಸರು ಸಿ.ಟಿ ರವಿಗೆ ವೈದ್ಯಕೀಯ ಪರೀಕ್ಷೆ ನಡೆಸಿದರು.

ವಿಧಾನಪರಿಷತ್ ಸಹಕಾರ ತತ್ವ, ಬದ್ಧತೆಯುಳ್ಳ ಸದಸ್ಯರನ್ನು ಹೊಂದಿರುವ ಮನೆಯಾಗಿದೆ. ಒಂದು ಕಡೆ ಸೋತವರ ಪುನರ್ವಸತಿ ಕೇಂದ್ರ ಎಂಬ ಅಪಖ್ಯಾತಿಗೆ ಒಳಗಾಗಿದ್ದು ಮತ್ತೊಂದೆಡೆ ಅಶ್ಲೀಲ ಕಚ್ಚಾಟದ ಅಖಾಡವಾಗಿ ಬದಲಾಗಿದೆ. ವಿದ್ಯಾವಂತರು, ಜ್ಞಾನಿಗಳಿಂದ ತುಂಬಿರುತ್ತಿದ್ದ ಪರಿಷತ್ತು ಈಗ ಅಶ್ಲೀಲ, ಅವಾಚ್ಯ ನಿಂದನೆಗಳ ಸುರಿಮಳೆ ಸುರಿಸುವ ಸದನವಾಗಿ ಮಾರ್ಪಟ್ಟಿದ್ದು ಮಾತ್ರ ವಿಪರ್ಯಾಸವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment