/newsfirstlive-kannada/media/post_attachments/wp-content/uploads/2024/06/renukaswami2.jpg)
ನಟ ದರ್ಶನ್​ ಅಂಡ್ ಗ್ಯಾಂಗ್​​ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದೆ. ಹತ್ಯೆ ಮಾಡಿದ ಮಾಡಿದ ಮಾರನೇ ದಿನ ನಟ ದರ್ಶನ್​ ಮೈಸೂರಿನಲ್ಲಿ ಡೆವಿಲ್ ಚಿತ್ರದ ಶೂಟಿಂಗ್​​​ನಲ್ಲಿ ಭಾಗಿಯಾಗಿದ್ದರು. ಬಂಧನ ಆಗುವ ವೇಳೆ ಮೈಸೂರಿನಲ್ಲಿ ಇದ್ದ ಕಾರಣ ಇಂದು ಮೈಸೂರಿಗೆ ದರ್ಶನ್ ಕರೆತಂದು ಸ್ಥಳ ಮಹಜರು ಮಾಡಿಸಲು ಪೊಲೀಸರು ಸಜ್ಜಾಗಿದ್ದಾರೆ.
ನಟ ದರ್ಶನ್ ಅಂಡ್ ಗ್ಯಾಂಗ್​ನಿಂದ ಅಮಾಯಕನ ಹತ್ಯೆ ನಡೆದಿದ್ದು ಪೊಲೀಸರು ಸ್ಥಳ ಮಹಜರು ಮೂಲಕ ಸಾಕ್ಷ್ಯಗಳನ್ನು ಕಲೆ ಹಾಕ್ತಿದ್ದಾರೆ. ಹತ್ಯೆ ನಡೆದ ಜಾಗ ಪಟ್ಟಣಗೆರೆ ಶೆಡ್, ಶವ ಎಸೆದಿದ್ದ ಸುಮನಹಳ್ಳಿ ಬ್ರಿಡ್ಜ್, ಚಿತ್ರದುರ್ಗದಲ್ಲಿ ಸ್ಥಳ ಮಹಜರು ನಡೆಸಿರುವ ಪೊಲೀಸರು ಮೈಸೂರಿನಲ್ಲಿ ಸ್ಥಳ ಮಹಜರು ನಡೆಲು ಸಿದ್ಧತೆ ನಡೆಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಸಂಬಂಧ ಮೈಸೂರಿನಲ್ಲಿ ಸ್ಥಳ ಮಹಜರು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಇಂದು ಮೈಸೂರಿನಲ್ಲೂ ಸ್ಥಳ ಮಹಜರು ನಡೆಸಲಿದ್ದಾರೆ. ಜೂನ್ 8ರ ರಾತ್ರಿ ರೇಣುಕಾಸ್ವಾಮಿ ಹತ್ಯೆಯ ಬಳಿಕ ನಟ ದರ್ಶನ್​ ಮೈಸೂರಿಗೆ ತೆರಳಿದ್ದ. ಡೆವಿಲ್ ಚಿತ್ರದ ಶೂಟಿಂಗ್​​​​​ನಲ್ಲಿ ಭಾಗಿಯಾಗಿದ್ದ. ಜೂನ್ 9ರ ಬೆಳಗ್ಗೆ ಪೊಲೀಸರು ಮೈಸೂರಿಗೆ ತೆರಳಿ ದರ್ಶನ್​ ಬಂಧಿಸಿದ್ದರು. ಹೀಗಾಗಿ ಮೈಸೂರಿನಲ್ಲಿ ಸ್ಥಳ ಮಹಜರು ನಡೆಸಲು ಪೊಲೀಸರು ಸಜ್ಜಾಗಿದ್ದಾರೆ.
ಮೈಸೂರಿನಲ್ಲೇ ​​ಕೊಲೆ ಕೇಸ್ ಮುಚ್ಚಿ ಹಾಕುವ ಬಗ್ಗೆ ಚರ್ಚೆ
ರೇಣುಕಾ ಹತ್ಯೆ ಬಳಿಕ ಮೈಸೂರಿಗೆ ತೆರಳಿದ್ದ ನಟ ದರ್ಶನ್ ಇಟ್ಟಿಗೆಗೂಡಿನ ಱಡಿಸನ್ ಬ್ಲೂ ಹೋಟೆಲ್​​ನಲ್ಲಿ ವಾಸ್ತವ್ಯ ಹೂಡಿದ್ದ. ಅಲ್ಲಿಂದಲೇ ಮೃತದೇಹ ವಿಲೇವಾರಿಗೆ ಸೂಚಿಸಿದ್ದ ದರ್ಶನ್ ಮೂವರು ಆರೋಪಿಗಳು ಶರಣಾಗುವ ಮುನ್ನವೇ ಮಾತುಕತೆ ನಡೆಸಿದ್ದ, ಮೈಸೂರಿನಿಂದಲೇ ​​ಕೊಲೆ ಕೇಸ್ ಮುಚ್ಚಿ ಹಾಕುವ ಬಗ್ಗೆ ಆಪ್ತರು ಹಾಗೂ ಗಣ್ಯರ ಜೊತೆ ಚರ್ಚೆ ನಡೆಸಿದ್ದ ಎನ್ನಲಾಗಿದೆ. ಬಳಿಕ ಏನೂ ಆಗಿಯೇ ಇಲ್ಲ ಎಂಬಂತೆ ಜಿಮ್‌ನಲ್ಲಿ ವರ್ಕೌಟ್ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಕುವೆಂಪು ನಗರದ ಗೋಲ್ಡ್ ಜಿಮ್ ಸೇರಿ ಹಲವೆಡೆ ಮಹಜರು ನಡೆಯಲಿದೆ. ಆ ವೇಳೆ ನಟ ದರ್ಶನ್​ ಬಳಸಿದ್ದ ಕಾರನ್ನೂ ಕೂಡ ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗ್ತಿದೆ.
ರೇಣುಕಾ ಹತ್ಯೆ ಬಳಿಕ ದರ್ಶನ್ ಡೆವಿಲ್ ಶೂಟಿಂಗ್​​​ನಲ್ಲಿ ಭಾಗಿಯಾಗಿದ್ದ ದರ್ಶನ್ ಶೂಟಿಂಗ್​​ನಲ್ಲಿದ್ದರೂ ದರ್ಶನ್​ಗೆ ಕೌರ್ಯದ ಬಗ್ಗೆ ಯೋಚನೆ ಮಾಡ್ತಿದ್ದರು ಎನ್ನಲಾಗಿದೆ. ಸದಾ ಮೊಬೈಲ್ ನೋಡುತ್ತಾ ಚಿಂತೆಯಲ್ಲಿ ಮುಳುಗಿದ್ದರು ಎನ್ನಲಾಗಿದೆ. ಹೀಗಾಗಿ ಇಂದು ಮೈಸೂರಿನಲ್ಲಿ ಸ್ಥಳ ಮಹಜರು ನಡೆಯಲಿದ್ದು ಮತ್ತಷ್ಟು ಮಾಹಿತಿಗಳು ಲಭ್ಯ ಆಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ