/newsfirstlive-kannada/media/post_attachments/wp-content/uploads/2024/08/Samantha_Nag.jpg)
ಒಂದು ಕಾಲದ ಟಾಲಿವುಡ್ನ ಸೂಪರ್ ಜೋಡಿ ನಟ ನಾಗಚೈತನ್ಯ ಮತ್ತು ನಟಿ ಸಮಂತಾ. ಇವರು ಡಿವೋರ್ಸ್ ಮಾಡಿಕೊಂಡು ಬರೋಬ್ಬರಿ 3 ವರ್ಷಗಳು ಕಳೆದಿವೆ. ಯಾವ ಕಾರಣಕ್ಕೆ ಇಬ್ಬರು ಸೆಪರೇಟ್ ಆದ್ರೂ ಅನ್ನೋ ವಿಚಾರ ಇನ್ನೂ ಗೊತ್ತಿಲ್ಲ. ಸಮಂತಾಗೆ ನಾಗಚೈತನ್ಯ ಮಾತ್ರ ಸರಿಯಾದ ಆಯ್ಕೆ ಆಗಿರಲಿಲ್ಲ ಅನ್ನೋದು ಮಾತ್ರ ಟಾಲಿವುಡ್ ಮಂದಿಯ ಅಭಿಪ್ರಾಯ.
ಇತ್ತ ನಾಗಚೈತನ್ಯ ನಟಿ ಶೋಭಿತಾ ಧೂಳಿಪಾಲ ಜತೆ 2ನೇ ಮದುವೆಗೆ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಆಪ್ತರ ಸಮ್ಮುಖದಲ್ಲಿ ಇಬ್ಬರ ಎಂಗೇಜ್ಮೆಂಟ್ ಕೂಡ ಆಗಿದೆ. ಅತ್ತ ನಟಿ ಸಮಂತಾ ತನ್ನ ಸಿನಿ ಕರಿಯರ್ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ವೆಬ್ ಸಿರೀಸ್, ಸಿನಿಮಾ, ರಿಯಾಲಿಟಿ ಶೋ ಎಂದು ಎಲ್ಲೆಡೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದರ ಮಧ್ಯೆ ಸಮಂತಾ, ನಾಗಚೈತನ್ಯ ಬ್ರೇಕಪ್ಗೆ ಮಾಜಿ ಸಿಎಂ ಕೆಸಿಆರ್ ಪುತ್ರ ಕೆಟಿಆರ್ ಕಾರಣ ಎಂದು ಸಚಿವೆ ಕೊಂಡ ಸುರೇಖಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಬ್ರೇಕಪ್ಗೆ ರಾಜಕೀಯ ಟ್ವಿಸ್ಟ್
ನಾಗ ಚೈತನ್ಯ, ಸಮಂತಾ ಡಿವೋರ್ಸ್ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಸ್ಟಾರ್ ಜೋಡಿ ವಿಚ್ಛೇದನಕ್ಕೆ ಮಾಜಿ ಸಚಿವ ಕೆಟಿಆರ್ ಕಾರಣ ಎಂದು ಸಚಿವೆ ಕೊಂಡ ಸುರೇಖಾ ನೀಡಿರುವ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸುರೇಖಾ ಹೇಳಿಕೆಯನ್ನು ಟಾಲಿವುಡ್ ಹಿರಿಯ ನಟ ನಾಗಾರ್ಜುನ ಖಂಡಿಸಿದ್ದಾರೆ.
ಹೇಳಿಕೆ ವಾಪಸ್ ಪಡೆಯಿರಿ ಎಂದ ನಾಗ್
ರಾಜಕೀಯ ಏನೇ ಇರಲಿ, ನಮ್ಮ ಕುಟುಂಬವನ್ನು ಮಧ್ಯೆ ತರಬೇಡಿ. ಸಚಿವೆ ಸುರೇಖಾ ನೀಡಿರುವ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಮ್ಮ ಕುಟುಂಬವನ್ನು ರಾಜಕೀಯದಿಂದ ದೂರ ಇಡಿ. ಇವರು ನೀಡಿದ ಹೇಳಿಕೆ ಬೇಸ್ಲೆಸ್, ಇದರಲ್ಲಿ ಯಾವುದೇ ಹುರುಳಿಲ್ಲ. ಸುರೇಖಾ ಅವರು ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು. ನಮಗೆ ಅವಮಾನ ಮಾಡಬೇಡಿ ಎಂದು ನಟ ನಾಗಾರ್ಜುನ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಬ್ರೇಕಪ್ಗೆ ಅಸಲಿ ಕಾರಣವೇನು?
ಸ್ಯಾಮ್, ನಾಗ್ ಮಧ್ಯೆ ಕೆಮೆಸ್ಟ್ರಿ ಚೆನ್ನಾಗಿತ್ತು. ಆದ್ರೂ ಈ ಜೋಡಿ ಡಿವೋರ್ಸ್ ಮಾಡಿಕೊಂಡಿತ್ತು. ಮಗು ಮಾಡಿಕೊಳ್ಳುವ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರದ ಹೊರತಾಗಿ ಅಸಲಿ ಕಾರಣವೇನು? ಎಂದು ಎಲ್ಲೂ ರಿವೀಲ್ ಆಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ