newsfirstkannada.com

3ನೇ ಬಾರಿಗೆ ವಾರಾಣಸಿಯಿಂದ ನಮೋ ‘ಲೋಕ’ ಪರೀಕ್ಷೆ.. ಯಾವ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಕೆ ಮಾಡ್ತಿದ್ದಾರೆ ಗೊತ್ತಾ?

Share :

Published May 14, 2024 at 7:53am

Update May 14, 2024 at 8:24am

  ನಾಮಪತ್ರ ಸಲ್ಲಿಕೆ ವೇಳೆ 18 ಕೇಂದ್ರ ಸಚಿವರು, 12 ಸಿಎಂಗಳು ಸಾಥ್‌

  7ನೇ ಮತ್ತು ಅಂತಿಮ ಹಂತದಲ್ಲಿ ನಡೆಯಲಿದೆ ವಾರಾಣಸಿ ಮತದಾನ

  ಭರ್ಜರಿ ಶಕ್ತಿಪ್ರದರ್ಶನ ಮಾಡಿ ಜನರ ಮನಗೆಲ್ಲುವ ಪ್ರಯತ್ನದಲ್ಲಿ PM

ಲೋಕಸಭಾ ಕದನದ ಹೈವೋಲ್ಟೇಜ್ ಕ್ಷೇತ್ರ ವಾರಾಣಸಿ. ಈ ಕ್ಷೇತ್ರದಿಂದ ಪ್ರಧಾನಿ ಮೋದಿ 3ನೇ ಬಾರಿ ಕಣಕ್ಕಿಳಿಯುತ್ತಿದ್ದಾರೆ. ನಿನ್ನೆ ಭರ್ಜರಿ ರೋಡ್‌ ಶೋ ನಡೆಸಿರೋ ನಮೋ ಇವತ್ತು ತಮ್ಮ ಕರ್ಮಭೂಮಿಯಲ್ಲಿ ಶಕ್ತಿಪ್ರದರ್ಶನ ಮಾಡಲಿದ್ದಾರೆ. ಜೊತೆಗೆ ಲೋಕಸಮರಕ್ಕೆ ತಮ್ಮ ಉಮೇದುವಾರಿಕೆಯನ್ನ ಸಲ್ಲಿಕೆ ಮಾಡಲಿದ್ದಾರೆ.

ಮೋದಿ ತವರು ಗುಜರಾತ್‌ ಆದ್ರೆ ಅವರ ರಾಜಕೀಯ 2ನೇ ತವರು ವಾರಣಾಸಿ. ಬಾಬಾ ಭೋಲೆನಾಥ್‌ನ ಸನ್ನಿಧಿಯಿಂದಲೇ ಮೋದಿ ಸಂಸತ್‌ವರೆಗೂ ಪ್ರವೇಶಿಸಿದ್ದಾರೆ. ಹೀಗಾಗಿ ಮೋದಿ ಇದೇ ಕ್ಷೇತ್ರವನ್ನು ತಮ್ಮ ಕರ್ಮಭೂಮಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಇದೀಗ ವಾರಾಣಸಿಯಿಂದ ಪ್ರಧಾನಿ ಮೋದಿ ಮತ್ತೆ ರಾಜಕೀಯದ ಅದೃಷ್ಟದ ಪರೀಕ್ಷೆಗೆ ಇಳಿಯಲಿದ್ದಾರೆ.

ಇದನ್ನೂ ಓದಿ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ನಿಧನ

ಇವತ್ತು ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ

ಭಕ್ತಿ ಭಾವದ ಬೀಡು ಉತ್ತರಪ್ರದೇಶದ ವಾರಾಣಸಿ ನಿನ್ನೆ ಕೇಸರಿ ಬಣ್ಣದಿಂದ ಕಂಗೊಳಿಸುತ್ತಿತ್ತು.. ಎತ್ತ ನೋಡಿದ್ರೂ ಕೇಸರಿ ಮಯ. ಬಿಜೆಪಿ ಬಾವುಟಗಳು, ಮೋದಿ ಭಾವಚಿತ್ರಗಳು, ನಗರದ ಹಲವೆಡೆ ರಾರಾಜಿಸುತ್ತಿದ್ದವು. ಹೀಗೆ ವಧುವಣ ಗಿತ್ತಿಯಂತೆ ಶೃಂಗಾರಗೊಂಡಿದ್ದ ವಾರಾಣಸಿಯಲ್ಲಿ ಪ್ರಧಾನಿ ಮೋದಿ ಅಬ್ಬರ ಜೋರಾಗಿತ್ತು. ನಿನ್ನೆ ಸುಮಾರು 6 ಕಿಲೋ ಮೀಟರ್‌ ರೋಡ್ ಶೋ ನಡೆಸಿದ್ರು.. ಲೋಕಸಭಾ ಚುನಾವಣೆಗೆ ಭರಾಟೆಯ ಮತಬೇಟೆಯಾಡಿದ್ರು. ಇದೀಗ ಅದ್ಧೂರಿ ಪ್ರಚಾರದ ಬಳಿಕ ಇವತ್ತು ಮೋದಿ ವಾರಾಣಸಿ ಕ್ಷೇತ್ರದ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ..

ಇವತ್ತು ‘ನಮೋ’ ನಾಮಪತ್ರ

 • ಜೂ. 1ರಂದು ವಾರಾಣಸಿ ಲೋಕಸಭಾ ಕ್ಷೇತ್ರದ ಚುನಾವಣೆ
 • ಏಳನೇ ಮತ್ತು ಅಂತಿಮ ಹಂತದಲ್ಲಿ ನಡೆಯಲಿದೆ ಮತದಾನ
 • ಇಂದು ವಾರಾಣಸಿ ಕ್ಷೇತ್ರದ ಅಭ್ಯರ್ಥಿಯಾಗಿ ಮೋದಿ ನಾಮಪತ್ರ
 • ಬೆ. 11.40ರ ಅಭಿಜಿತ್ ಮುಹೂರ್ತದಲ್ಲಿ ನಾಮೀನೇಷನ್ ಫೈಲ್‌
 • ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆಗೆ 18 ಕೇಂದ್ರ ಸಚಿವರು
 • ಯೋಗಿ ಆದಿತ್ಯನಾಥ್ ಸೇರಿ 12 ರಾಜ್ಯಗಳ ಸಿಎಂಗಳು ಸಾಥ್‌

ಇದನ್ನೂ ಓದಿ: ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 5 ದಿನ ವರುಣಾರ್ಭಟ.. ಭಾರೀ ಮಳೆಗೆ ವಿಶ್ವಮಾನವ ಟ್ರೈನ್ ಮೇಲೆ ಬಿದ್ದ ಮರ 

ಇನ್ನೂ ಇವತ್ತು ಗಂಗಾ ಸಪ್ತಮಿಯಾಗಿದ್ದು ಬಹಳ ವಿಶೇಷವಾದ ದಿನ.. ನಂಬಿಕೆಗಳ ಪ್ರಕಾರ, ಈ ದಿನ ಮಾಡಿದ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಾಧಿಸುವುದರ ಜೊತೆಗೆ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ. ಹೀಗಾಗಿ ಮೋದಿ ಇವತ್ತೇ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.. ಈ ಮೂಲಕ ಮತ್ತೊಮ್ಮೆ ವಾರಾಣಸಿಯಿಂದ ಗೆದ್ದು ಬರುವ ಶಪಥಗೈದಿದ್ದಾರೆ. ಭರ್ಜರಿ ಶಕ್ತಿಪ್ರದರ್ಶನ ಮಾಡಿ ಜನರ ಮನಗೆಲ್ಲಲು ಪ್ರಯತ್ನಿಸಿರುವ ಮೋದಿಗೆ ಮತದಾರ ಮನ ವಾಲಿದ್ಯಾ? ಇಲ್ವಾ ಅನ್ನೋದು ಜೂನ್ 4ಕ್ಕೆ ಗೊತ್ತಾಗಲಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3ನೇ ಬಾರಿಗೆ ವಾರಾಣಸಿಯಿಂದ ನಮೋ ‘ಲೋಕ’ ಪರೀಕ್ಷೆ.. ಯಾವ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಕೆ ಮಾಡ್ತಿದ್ದಾರೆ ಗೊತ್ತಾ?

https://newsfirstlive.com/wp-content/uploads/2024/05/MODI_NAMINATIONS_1.jpg

Load More