/newsfirstlive-kannada/media/media_files/2025/09/06/ration-cards-2025-09-06-18-58-40.jpg)
ರಾಜ್ಯದಲ್ಲಿ 12.68 ಲಕ್ಷ ಆಕ್ರಮ ರೇಷನ್ ಕಾರ್ಡ್ ಪತ್ತೆ
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗಳನ್ನು ನೀಡಲು ಕೆಲವೊಂದು ಮಾನದಂಡಗಳಿವೆ. ಬಡವರು ಮತ್ತು ಅರ್ಹರಿಗೆ ಮಾತ್ರವೇ ಬಿಪಿಎಲ್ ಕಾರ್ಡ್ ಗಳನ್ನು ನೀಡಬೇಕು. ಆ ಮೂಲಕ ಪಡಿತರ ಹಾಗೂ ಇತರ ಸೌಲಭ್ಯಗಳನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರವೇ ತಲುಪುವಂತೆ ಮಾಡಲು ಬಿಪಿಎಲ್( Below poverty line) ಕಾರ್ಡ್ ಗಳನ್ನ ನೀಡಲಾಗುತ್ತಿದೆ. ಆದರೇ, ಬಡವರು ಅಲ್ಲದವರು, ಬಡತನ ರೇಖೆಗಿಂತ ಕೆಳಗಿಲ್ಲದವರು ಕೂಡ ಬಿಪಿಎಲ್ ಕಾರ್ಡ್ ಗಳನ್ನು ಪಡೆದು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಬರೋಬ್ಬರಿ 8 ಲಕ್ಷ ಮಂದಿ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹೇಳಿದೆ. ಹೀಗಾಗಿ ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕ್ರಮ ಕೈಗೊಂಡಿದೆ.
ಇನ್ನೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ರಾಜಧಾನಿಯಲ್ಲಿ ಒಂದು ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಲಾಗುತ್ತೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೋಟ್ಯಾಧಿಪತಿಗಳು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವುದನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪತ್ತೆ ಹಚ್ಚಿದೆ. ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್ ಗಳ ಮೇಲೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗ ಹದ್ದಿನ ಕಣ್ಣಿಟ್ಟಿ ಪತ್ತೆ ಹಚ್ಚಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ವಿಶೇಷ ಕಾರ್ಯಾಚರಣೆ ನಡೆಸಿ, 12,68,097 ಅನುಮಾನಾಸ್ಪದ ರೇಷನ್ ಕಾರ್ಡ್ ಗಳನ್ನು ಪತ್ತೆ ಹಚ್ಚಿದೆ. ಈ ಪೈಕಿ 8 ಲಕ್ಷ ರೇಷನ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಇದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಶೀಘ್ರದಲ್ಲಿಯೇ ಸರ್ಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸಲಿದೆ.
ಅಕ್ರಮ ಕಾರ್ಡ್ ಪತ್ತೆ
ವಿವಿಧ ಕಂಪನಿಗಳಲ್ಲಿ ಡೈರೆಕ್ಟರ್ ಆಗಿರುವ 19,690 ಮಂದಿ ಕಾನೂನುಬಾಹಿರವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. 25 ಲಕ್ಷ ರೂ.ಗಿಂತ ಅಧಿಕ ವಹಿವಾಟು ಮೀರಿರುವ 2,684 ಮಂದಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಮೃತಪಟ್ಟವರ ಹೆಸರು ಮತ್ತು ನಕಲಿ ಕಾರ್ಡ್ ಬಳಸಿ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡಿತರ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ನಿಗದಿಗಿಂತ ಹೆಚ್ಚುವರಿಯಾಗಿ 14 ಲಕ್ಷ ರೇಷನ್ ಕಾರ್ಡ್ ನೀಡಿರೋದು ಪತ್ತೆಯಾಗಿದೆ.
ಅನುಮಾನಾಸ್ಪದ ಕಾರ್ಡ್ ಗಳು
ಇ-ಕೆವೈಸಿ ಮಾಡಿಸದೆ ಇರುವವರ ಸಂಖ್ಯೆ-6,16,196
1.20 ಲಕ್ಷ ರೂಪಾಯಿಗಿಂತ ಅಧಿಕ ಆದಾಯ ಹೊಂದಿದವರು- 5,13,613
ಅಂತಾರಾಜ್ಯ ಪಡಿತರ ಚೀಟಿದಾರರು-57,864
7.5 ಎಕರೆಗಿಂತ ಜಾಸ್ತಿ ಇರುವವರು- 33,456
6 ತಿಂಗಳಿಂದ ರೇಷನ್ ಪಡೆಯದವರು- 19,893
ಕಂಪನಿಗಳಲ್ಲಿ ಡೈರೆಕ್ಟರ್ ಆಗಿರುವವರ BPL ಕಾರ್ಡ್- 19,690
25 ಲಕ್ಷ ರೂ. ವಹಿವಾಟು ಮೀರಿದವರ BPL ಕಾರ್ಡ್-2,684
ಮೃತ ಸದಸ್ಯರ ಹೆಸರಲ್ಲಿ ರೇಷನ್ ಕಾರ್ಡ್ - 1446
ಹೀಗಾಗಿ ಈ ಎಲ್ಲ ಕಾರ್ಡ್ ಗಳು ಆಕ್ರಮ ಎಂಬ ತೀರ್ಮಾನಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಬಂದಿದೆ. ಈ ಆಕ್ರಮ ಕಾರ್ಡ್ ಗಳನ್ನು ರದ್ದುಪಡಿಸುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ, ಬಳಿಕ ರದ್ದುಪಡಿಸಲಾಗುತ್ತೆ.
/filters:format(webp)/newsfirstlive-kannada/media/media_files/2025/09/06/ration-cards-02-2025-09-06-19-00-10.jpg)
ಕೇಂದ್ರ ಸರ್ಕಾರ ಕೋಟ್ಯಂತರ ಜನರು ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ. ದೇಶದಲ್ಲಿರುವ ಬಡವರ ಸಂಖ್ಯೆ ಕಳೆದ 10 ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಹೇಳುತ್ತೆ. ಆದರೇ, ರಾಜ್ಯದಲ್ಲಿ ಮಾತ್ರ ಸರ್ಕಾರ ಹೇಳುವ ಅಧಿಕೃತ ಬಡವರ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಿಪಿಎಲ್ ಕಾರ್ಡ್ ಗಳಿವೆ. ಹೀಗಾಗಿ ಆಕ್ರಮ ಪಡಿತರ ಕಾರ್ಡ್ ಗಳನ್ನು ಪತ್ತೆ ಹಚ್ಚಿ ರದ್ದುಪಡಿಸಲು ಆಹಾರ ಇಲಾಖೆ ಕ್ರಮ ಕೈಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us