/newsfirstlive-kannada/media/media_files/2026/02/11/congress-mla-foriegn-tour-2026-02-11-18-44-45.jpg)
ರಾಜ್ಯ ಬಜೆಟ್​ ಸಮೀಪಿಸ್ತಿದೆ. ಈ ನಡುವೆಯೇ ರಾಜ್ಯದ 25ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ಹಲ್​ಚಲ್​ ಸೃಷ್ಟಿಸಿದೆ. ಡಿಕೆ ಸಿಎಂ ಆಗಲು ಬೆಂಬಲಕ್ಕಾಗಿ ಶಾಸಕರಿಗೆ ವಿದೇಶ ಪ್ರವಾಸ ಮಾಡಿಸ್ತಿದ್ದಾರೆಂಬ ಚರ್ಚೆ ಕೇಳಿಬಂದಿತ್ತು. ಆದ್ರೆ ಹೊಸ ವಿಷಯ ಅಂದ್ರೆ ಈ ವಿದೇಶ ಪ್ರವಾಸದ ಬಗ್ಗೆ ಹಸ್ತ ಮನೆಯಲ್ಲೇ ಸ್ಪಷ್ಟ ಉತ್ತರವಿಲ್ಲ. ಶಾಸಕರು ತಮ್ಮ ದುಡ್ಡಲ್ಲಿ ಹೋದ್ರೇನು ಅಂತ ಸಿಎಂ ಇದಕ್ಕೂ ಖಾರವಾಗಿದ್ದಾರೆ.
ಶಾಸಕರ ವಿದೇಶ ಪ್ರವಾಸ.. ಸದ್ಯ ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಕಾಂಗ್ರೆಸ್​ ಪಾಳಯದಲ್ಲಿ ಕುರ್ಚಿ ವಿಚಾರ ಸಖತ್ ಸದ್ದು ಮಾಡ್ತಿದೆ. ಹೋದಲ್ಲಿ ಬಂದಲ್ಲಿ ಡಿಕೆ ಈ ಬಗ್ಗೆಯೇ ಮಾತಾಡೋ ಮೂಲಕ ವಿಚಾರವನ್ನ ಜೀವಂತವಾಗಿಡುತ್ತಿದ್ದಾರೆ. ಇದರ ಜೊತೆಗೆ ಶಾಸಕರ ವಿದೇಶ ಪ್ರವಾಸವೂ ಟಾಕ್​ ಆಫ್​ ರಾಜಕೀಯ ಪಡಸಾಲೆ ಆಗೋಗಿದೆ. ಅಲ್ಲದೇ ಈ ಪ್ರವಾಸದ ಬಗ್ಗೆ ಕೈ ಪಡೆಯೇ ಗೊಂದಲದ ಗೂಡಾಗಿದೆ.
ಶಾಸಕರ ವಿದೇಶ ಪ್ರವಾಸ ವಿಚಾರವಾಗಿ ಕಾಂಗ್ರೆಸ್‌ನಲ್ಲೇ ಸ್ಪಷ್ಟತೆ ಇಲ್ಲ
ರಾಜ್ಯದ 25 ಶಾಸಕರಿಗೆ ವಿದೇಶ ಪ್ರವಾಸ ಆಯೋಜನೆ ವಿಚಾರ ಭಾರೀ ಸಂಚಲನ ಸೃಷ್ಟಿಸಿದೆ. ಪುಟ್ಟರಂಗಶೆಟ್ಟಿ, ರಾಘವೇಂದ್ರ ಹಿಟ್ನಾಳ್, ಅನಿಲ್ ಚಿಕ್ಕಮಾದು ಸೇರಿದಂತೆ ಕಾಂಗ್ರೆಸ್​ನ ಹಲವು ಶಾಸಕರು ವಿದೇಶ ಪ್ರವಾಸ ಮಾಡ್ತಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ಕುಟುಂಬ ಸಮೇತ ಪ್ರವಾಸಕ್ಕೆ ಟಿಕೆಟ್ ಬುಕ್ ಮಾಡಿದ್ದು ಫೆಬ್ರವರಿ 18ರಂದು ಪ್ರವಾಸ ತೆರಳಲಿದ್ದಾರೆ. ಆದ್ರೆ ಇದು ಚರ್ಚೆಯಾಗಿದ್ದೇ ಬೇರೆ ವಿಚಾರಕ್ಕೆ.. ಅದರಲ್ಲೂ ಡಿಕೆ ಶಿವಕುಮಾರ್ ಸಿಎಂ ಆಗಲು ಬೆಂಬಲಕ್ಕಾಗಿ ಶಾಸಕರಿಗೆ ವಿದೇಶ ಪ್ರವಾಸ ಆಯೋಜಿಸಿದ್ದಾರೆ ಅಂತ ಗುಲ್ಲು ಎದ್ದಿತ್ತು. ಆದರೆ ವಿದೇಶ ಪ್ರವಾಸದ ವಿಚಾರದಲ್ಲಿ ಕಾಂಗ್ರೆಸ್‌ನಲ್ಲೇ ಸ್ಪಷ್ಟತೆ ಇಲ್ಲದಂತಾಗಿದೆ. ಈ ಬಗ್ಗೆ ಯಾರನ್ನ ಕೇಳಿದ್ರೂ ಹಾರಿಕೆಯ ಅಥವಾ ಜಾರಿಕೊಳ್ಳುವ ಉತ್ತರ ಕೊಡ್ತಿದ್ದಾರೆ.
ಅವರ ದುಡ್ಡಲ್ಲಿ ಹೋದ್ರೆ ತಪ್ಪೇನು ಎಂದ ಸಿದ್ದರಾಮಯ್ಯ
ಇನ್ನು ಶಾಸಕರು ಅವರ ದುಡ್ಡಲ್ಲಿ ಪ್ರವಾಸ ಹೋದ್ರೆ ತಪ್ಪೇನು ಅಂತ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅಲ್ಲದೇ ನನ್ನ ಗಮನಕ್ಕೆ ಇದು ಬಂದಿಲ್ಲ ಎಂದಿದ್ದಾರೆ. ಅಲ್ಲದೇ ಈ ವಿಚಾರವೇ ನಮಗೆ ಗೊತ್ತಿಲ್ಲ ಎಂದಿದ್ದಾರೆ.
ವಿದೇಶ ಪ್ರವಾಸಕ್ಕೂ ಡಿಕೆಶಿಗೂ ಸಂಬಂಧವಿಲ್ಲ ಎಂದ ಜಾರಕಿಹೊಳಿ
ವಿದೇಶ ಪ್ರವಾಸ, ಸರ್ಕಾರಿ ಕಾರ್ಯಕ್ರಮ ಅಂತ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಶಾಸಕರ ಫಾರಿನ್ ಟ್ರಿಪ್ ಹಾಗೂ ಡಿಕೆ ದೆಹಲಿ ಟ್ರಿಪ್ ವಿಚಾರವಾಗಿ ಸಚಿವ ಮಾತನಾಡಿದ್ದು, ಡಿಕೆಶಿ ದೆಹಲಿ ಪ್ರವಾಸ ಹೊಸದೇನಲ್ಲ ಅಂತಾನೂ ಹೇಳಿದ್ದಾರೆ.
ಸಚಿವ ವೆಂಕಟೇಶ್ ಕರೆದುಕೊಂಡು ಹೋಗ್ತಿದ್ದಾರೆಂದ ಪುಟ್ಟರಂಗಶೆಟ್ಟಿ
ಇನ್ನು ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ, ನಮ್ಮನ್ನು ಸಚಿವ ವೆಂಕಟೇಶ್ ಕರೆದುಕೊಂಡು ಹೋಗ್ತಾರೆ. ಪ್ರವಾಸದ ಬಗ್ಗೆ ಸಿಎಂ ಗಮನಕ್ಕೆ ಇರುತ್ತೆ. ಬಜೆಟ್ ಒಳಗೆ ಪ್ರವಾಸ ಮುಗಿಸಿ ವಾಪಸ್ ಬರುತ್ತೇವೆ ಎಂದಿದ್ದಾರೆ.
ಒಟ್ಟಾರೆ ಶಾಸಕರ ವಿದೇಶ ಪ್ರವಾಸ ಕಾಂಗ್ರೆಸ್ ಮನೆಯಲ್ಲಿ ಸಖತ್ ಸದ್ದು ಮಾಡ್ತಿದೆ. ಆದ್ರೆ ಈ ಬಗ್ಗೆ ಸಿಎಂಗೇ ಮಾಹಿತಿ ಇಲ್ಲ ಅಂದಿದ್ದು ಹಲವು ಪ್ರಶ್ನೆ ಉದ್ಭವವಾಗುವಂತೆ ಮಾಡಿವೆ.
/filters:format(webp)/newsfirstlive-kannada/media/media_files/2026/02/11/congress-mla-foriegn-tour-1-2026-02-11-18-47-31.jpg)
ಹರೀಶ್​ ಕಾಕೋಳ್​, ಪೊಲಿಟಿಕಲ್ ಬ್ಯೂರೋ, ನ್ಯೂಸ್​ ಫಸ್ಟ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us