/newsfirstlive-kannada/media/media_files/2026/02/11/congress-mla-foriegn-tour-2026-02-11-18-44-45.jpg)
ಎತ್ತಿಗೆ ನೀರಂದ್ರೆ ಅಲರ್ಜಿ, ಕೋಣಕ್ಕೆ ಅದೇ ಸಮೃದ್ಧಿ.. ಕಾಂಗ್ರೆಸ್​​ನಲ್ಲಿ ಜೋಡೆತ್ತುಗಳ ದಿಕ್ಕು ಗುರಿ ಬದಲಾಗಿದೆ.. ಎತ್ತು ಏರಿಗೆಳೀತಿದೆ, ಕೋಣ ನೀರಿನೆಡೆ ಸೆಳೀತಿದೆ. ಒಂದೆಡೆ ಕಾಂಗ್ರೆಸ್ ನಾಯಕರು ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಆದರೇ, ರಾಜ್ಯದಲ್ಲಿ ಸಿಎಂ ಕುರ್ಚಿಯ ಚರ್ಚೆ ಮಾತ್ರ ನಿಲ್ಲುತ್ತಿಲ್ಲ. ಇದೆಲ್ಲದರ ಮಧ್ಯೆ ಕಾಂಗ್ರೆಸ್ ಪಕ್ಷದ 27 ಶಾಸಕರು ವಿದೇಶ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ನಾಳೆಯಿಂದ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ಆರಂಭವಾಗಲಿದೆ. 5 ದಿನಗಳ ಕಾಲ ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸಾಕಷ್ಟು ಗೊಂದಲದ ಮಧ್ಯೆ ಕೈ ಪಕ್ಷದ ಶಾಸಕರ ವಿದೇಶ ಪ್ರವಾಸ ಕುತೂಹಲಕ್ಕೆ ಕಾರಣವಾಗಿದೆ.
ವಿಧಾನ ಪರಿಷತ್ ಸದಸ್ಯರು ಸೇರಿದಂತೆ 30 ಶಾಸಕರು ವಿದೇಶ ಪ್ರವಾಸಕ್ಕೆ ಹೊರಡುತ್ತಿದ್ದಾರೆ. ಫೆಬ್ರವರಿ 17 ರಂದು ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸ ಹೊರಡುವರು. ಮಾರ್ಚ್ 3 ರಂದು ಕರ್ನಾಟಕಕ್ಕೆ ವಾಪಸಾಗಲಿದೆ. ಮಾರ್ಚ್ 6 ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುವರು. ಅದಕ್ಕೂ ಮುನ್ನ ಕಾಂಗ್ರೆಸ್ ಶಾಸಕರು ಕರ್ನಾಟಕಕ್ಕೆ ವಾಪಸಾಗುವರು.
ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳಿಗೆ ಕಾಂಗ್ರೆಸ್ ಶಾಸಕರು ಪ್ರವಾಸ ತೆರಳುತ್ತಿದ್ದಾರೆ. ಇದು ಸಿಎಂ ಆಪ್ತ ಬಳಗದ ಸಚಿವ ಕೆ.ವೆಂಕಟೇಶ್ ಅವರು ಆಯೋಜಿಸಿರುವ ವಿದೇಶ ಪ್ರವಾಸ ಎಂದು ಹೇಳಲಾಗಿತ್ತು. ಆದರೇ, ಕೆ.ವೆಂಕಟೇಶ್ ನಮ್ಮ ಪಶು ಸಂಗೋಪನಾ ಇಲಾಖೆಯಿಂದ ಯಾವುದೇ ಪ್ರವಾಸ ಆಯೋಜಿಸಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಬಗ್ಗೆ ಕಾಂಗ್ರೆಸ್ ಹೈಕಮ್ಯಾಂಡ್‌ಗೆ ಮಾಹಿತಿ ನೀಡಲಾಗಿದೆ. ಕಾಂಗ್ರೆಸ್ ಹೈಕಮ್ಯಾಂಡ್ ಕೂಡ ವಿದೇಶ ಪ್ರವಾಸಕ್ಕೆ ಒಪ್ಪಿಗೆ ನೀಡಿದೆ.
ನಾಳೆಯಿಂದ ವಿದೇಶ ಪ್ರವಾಸ ಕೈಗೊಳ್ಳುವ ಶಾಸಕರ ಪಟ್ಟಿ ಹೀಗಿದೆ.
1. ಕೆ. ವೆಂಕಟೇಶ್, ಪಶುಸಂಗೋಪನಾ ಸಚಿವರು. 2. ಪುಟ್ಟರಂಗಶೆಟ್ಟಿ, ಶಾಸಕರು, 3. ಎಚ್.ಡಿ. ತಮ್ಮಯ್ಯ, ಶಾಸಕರು, 4. ಹಂಪನಗೌಡ ಬಾದರ್ಲಿ, ಶಾಸಕರು, 5. ದೇವೇಂದ್ರಪ್ಪ, ಶಾಸಕರು, 6. ಯಶವಂತರಾಯಗೌಡ ಪಾಟೀಲ್, ಶಾಸಕರು, 7. ಬಿ.ಎಂ. ನಾಗರಾಜ್, ಶಾಸಕರು, 8. ಜೆ.ಟಿ. ಪಾಟೀಲ್, ಶಾಸಕರು, 9. ಅಲ್ಲಂಪ್ರಭು ಪಾಟೀಲ್, ಶಾಸಕರು, 10. ಬಸನಗೌಡ ದದ್ದಲ್, ಶಾಸಕರು, 11. ಎ.ಆರ್. ಕೃಷ್ಣಮೂರ್ತಿ, ಶಾಸಕರು, 12. ಬಸನಗೌಡ ತುರುವಿಹಾಳ್, ಶಾಸಕರು, 13. ಬಿ.ಬಿ ಚಿಮ್ಮನಕಟ್ಟಿ, ಶಾಸಕರು, 14. ಮಹಾಂತೇಶ ಕೌಜಲಗಿ, ಶಾಸಕರು, 15. ರಾಘವೇಂದ್ರ ಹಿಟ್ನಾಳ್, ಶಾಸಕರು, 16. ವಸಂತ್ ಕುಮಾರ್, MLC ಮತ್ತು KPCC ಕಾರ್ಯಾಧ್ಯಕ್ಷ , 17. ಶರಣಗೌಡ ಬಯ್ಯಾಪುರ, MLC, 18. ತಿಮ್ಮಯ್ಯ, MLC, 19. ರಘುಮೂರ್ತಿ, ಶಾಸಕರು, 20. ಅನಿಲ್ ಚಿಕ್ಕಮಾದು, ಶಾಸಕರು
ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ವಿದೇಶಕ್ಕೆ ಪ್ರವಾಸ ಹೋಗುತ್ತಾರೆ. ಸಾಮಾಜಿಕ, ಧಾರ್ಮಿಕ ವಿಚಾರದ ಬಗ್ಗೆ ಅಧ್ಯಯನ ನಡೆಸಲು ಎಲ್ಲರೂ ಹೋಗುತ್ತಿದ್ದಾರೆ. ನನ್ನನ್ನು ಯಾರು ಕರೆಯಬೇಕು ಅಂತ ಏನಿಲ್ಲ. ನಾನೇನೂ ಆ ಸ್ಥಿತಿಯಲ್ಲಿ ಸದ್ಯಕ್ಕೆ ಇಲ್ಲ. ಎಲ್ಲರೂ ಕರೆಯುವುದಕ್ಕೆ ನಾನೇನೂ ಮಗುನಾ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಶಾಸಕರು ಟೂರ್ ಹೋಗುವುದು ಗಂಭೀರ ವಿಚಾರವೇನಲ್ಲ. ಟೂರ್ ಹೋದರೇ, ಕೆಲವೊಂದು ವಿಚಾರಗಳು ಅಭಿವೃದ್ದಿ ಆಗುತ್ತೆ ಎಂದು ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us