/newsfirstlive-kannada/media/media_files/2025/09/19/yellow-line-bmrcl-metro-5th-train-2025-09-19-18-44-45.jpg)
ಬೆಂಗಳೂರಿಗೆ ಕೋಲ್ಕತ್ತಾದಿಂದ ಹೊರಟ ಮತ್ತೊಂದು ಮೆಟ್ರೋ ಟ್ರೇನ್
ಬೆಂಗಳೂರಿನ ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಅನ್ನು ಬಿಎಂಆರ್‌ಸಿಎಲ್ ನೀಡಿದೆ. ಶೀಘ್ರದಲ್ಲೇ ಯೆಲ್ಲೋ ಮಾರ್ಗಕ್ಕೆ 5ನೇ ರೈಲು ಬರಲಿದೆ . 5ನೇ ರೈಲು ಎಂಟ್ರಿಯಿಂದ ಕಾಯುವ ಸಮಯ ಇಳಿಕೆ ಆಗಲಿದೆ. ಸದ್ಯ ಯೆಲ್ಲೋ ಲೇನ್ ಮಾರ್ಗದಲ್ಲಿ 4 ರೈಲುಗಳು ಸಂಚಾರ ಮಾಡುತ್ತಿವೆ. ಪ್ರತಿ ರೈಲು ನಡುವೆ 19 ನಿಮಿಷ ಅಂತರ ಇದೆ. 5 ನೇ ರೈಲು ಎಂಟ್ರಿ ಆದ ಮೇಲೆ 15 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡಲಿದೆ. ಕೋಲ್ಕತ್ತಾದಿಂದ 5 ನೇ ಮೆಟ್ರೋ ರೈಲು ಬೋಗಿಗಳು ಬೆಂಗಳೂರಿಗೆ ರವಾನೆಯಾಗಿವೆ. ಸೆಪ್ಟೆಂಬರ್ ಕೊನೆಯ ವಾರ ಅಥನಾ ಅಕ್ಟೋಬರ್ ಮೊದಲ ವಾರ ಮೆಟ್ರೋ ಬೋಗಿಗಳು ಬೆಂಗಳೂರು ತಲುಪಲಿವೆ. ರೈಲು ಬಂದ ನಂತರ ಅದರ ತಾಂತ್ರಿಕ ಪರೀಕ್ಷೆ ನಡೆಯಲಿದೆ. ಅಕ್ಟೋಬರ್ ತಿಂಗಳಿನಿಂದಲೇ ಐದನೇ ರೈಲು ಸಂಚಾರ ಆರಂಭಿಸುವ ಸಾಧ್ಯತೆ ಇದೆ.
ಆಗಸ್ಟ್ ತಿಂಗಳಲ್ಲಿ ಮೂರು ರೈಲುಗಳಿಂದ ಯೆಲ್ಲೋ ಮಾರ್ಗ ಸಂಚಾರ ಆರಂಭಿಸಿತ್ತು. ಆರಂಭದಲ್ಲಿ 25 ನಿಮಿಷಕ್ಕೊಂದು ರೈಲು ಸಂಚಾರ ಮಾಡುತ್ತಿತ್ತು. ಸೆಪ್ಟೆಂಬರ್ 10 ರಂದು ನಾಲ್ಕನೇ ರೈಲು ಸಂಚಾರ ಆರಂಭಿಸಿತ್ತು . ಅದಾದ ಬಳಿಕ ಈಗ 19 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡುತ್ತಿದೆ. ಈಗ ಐದನೇ ರೈಲು ಯೆಲ್ಲೋ ಮಾರ್ಗಕ್ಕೆ ಎಂಟ್ರಿ ಕೊಟ್ಟರೇ, ಪ್ರತಿ 15 ನಿಮಿಷಕ್ಕೊಂದು ಮೆಟ್ರೋ ಟ್ರೇನ್ ಸಂಚಾರ ಮಾಡಲಿವೆ. ಬೆಂಗಳೂರಿನ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೂ ಬಿಎಂಆರ್‌ಸಿಎಲ್ ಯೆಲ್ಲೋ ಲೇನ್ ಸಂಚಾರ ಮಾಡುತ್ತೆ. ಈ ಮಾರ್ಗದಲ್ಲೇ ಪ್ರಸಿದ್ದ ಟೆಕ್ ಕಂಪನಿಗಳೂ ಇವೆ. ವಿಪ್ರೊ, ಇನ್ಪೋಸಿಸ್, ಬಯೋಕಾನ್, ಡೆಲ್ಟಾ ಸೇರಿದಂತೆ ಅನೇಕ ಟೆಕ್ ಕಂಪನಿಗಳೂ ಇವೆ. ಟೆಕ್ ಕಂಪನಿಯ ಉದ್ಯೋಗಿಗಳು ಈಗ ಮೆಟ್ರೋದಲ್ಲಿ ಸಂಚಾರ ಮಾಡುತ್ತಿದ್ದಾರೆ.
ಇದರಿಂದಾಗಿ ಬೊಮ್ಮಸಂದ್ರ, ಬೊಮ್ಮನಹಳ್ಳಿ, ಅತ್ತಿಬೆಲೆ ಮಾರ್ಗದಲ್ಲೂ ಸ್ಪಲ್ಪ ಮಟ್ಟಿಗೆ ಟ್ರಾಫಿಕ್ ಜಾಮ್ ಕಡಿಮೆಯಾಗಿದೆ. ಹೆಚ್ಚಿನ ರೈಲುಗಳು ಸಂಚಾರ ನಡೆಸಿದರೇ, ಟ್ರಾಫಿಕ್ ಜಾಮ್ ಮತ್ತಷ್ಟು ಕಡಿಮೆಯಾಗಲಿದೆ. ಐದು ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚರಿಸುವಂತೆ ಮಾಡಲು ಹೆಚ್ಚಿನ ಮೆಟ್ರೋ ರೈಲು ಬೋಗಿಗಳನ್ನು ಬಿಎಂಆರ್‌ಸಿಎಲ್ ತರಿಸಿಕೊಳ್ಳುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.