ಕಾಂಗ್ರೆಸ್​​ನಲ್ಲಿ ಭಾರೀ ಸಂಚಲನ ಮೂಡಿಸಿದ ಪ್ರತ್ಯೇಕ ಸಭೆ: 2 ಸಮುದಾಯಗಳ ನಾಯಕರ ರಹಸ್ಯ ಮಾತುಕತೆ ಬಗ್ಗೆ ಚರ್ಚೆ

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೇ, ಕಾಂಗ್ರೆಸ್ ಪಕ್ಷದಲ್ಲಿ 2 ಸಮುದಾಯಗಳ ನಾಯಕರು 2 ಪ್ರತೇಕ ರಹಸ್ಯ ಸಭೆ ನಡೆಸಿದ್ದಾರೆ. ಇದು ಭಾರಿ ಸಂಚಲನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹೈಕಮ್ಯಾಂಡ್‌ ಬಗ್ಗೆಯೂ ಶಾಸಕರು ಅಸಮಾಧಾನಗೊಂಡಿದ್ದಾರೆ.

author-image
Chandramohan
MB PATIL AND PARAMESHWAR
Advertisment


ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗೆ ಪೂರ್ಣ ವಿರಾಮ ಬಿದ್ದಿಲ್ಲ. ಅಧಿವೇಶನ ಮುಗಿದಿದ್ದು, ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಸಿದ್ದತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ  ಎರಡು ಸಮುದಾಯದ ನಾಯಕರು ಪ್ರತ್ಯೇಕವಾಗಿ ಸಭೆ ನಡೆಸಿ, ರಹಸ್ಯ ಚರ್ಚೆ ಮಾಡಿರೋದು ಕಾಂಗ್ರೆಸ್​ನಲ್ಲಿ ಸಂಚಲನ ಸೃಷ್ಟಿಸಿದೆ. ಜೊತೆಗೆ ಕಾಂಗ್ರೆಸ್​​ನೊಳಗೆ ಆಂತರಿಕ ಬೇಗುದಿಯೂ ಶುರುವಾಗಿದೆ.
ಕಾಂಗ್ರೆಸ್​​ನಲ್ಲಿ ಭಾರೀ ಸಂಚಲನ ಮೂಡಿಸಿದ ಪ್ರತ್ಯೇಕ ಸಭೆ
2 ಸಮುದಾಯಗಳ ನಾಯಕರ ರಹಸ್ಯ ಮಾತುಕತೆ ಬಗ್ಗೆ ಚರ್ಚೆ
 ಬಿಟ್ಟರೂ ಬಿಡದೀ ಮಾಯೆ ಎಂಬ ರಾಜ್ಯ ಕಾಂಗ್ರೆಸ್​​​ನಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕಿಡಿ ಸ್ಫೋಟಗೊಳ್ಳುವ ಲಕ್ಷಣ ಗೋಚರಿಸಿದೆ. ಸಂಕ್ರಾಂತಿ ಬಳಿಕ ತಣ್ಣಾಗಿದ್ದ ಕ್ರಾಂತಿ ಕಿಚ್ಚು.. ವಿಶೇಷ  ಜಂಟಿ ಅಧಿವೇಶನ ಮುಗಿಯುತ್ತಿದ್ದಂತೆ.. ಧಗಧಗಿಸುವ ಸುಳಿವು ಸಿಕ್ಕಿದೆ. ಕಾಂಗ್ರೆಸ್​​ ಪಕ್ಷದಲ್ಲಿನ ಎರಡು ಸಮುದಾಯಗಳ ನಾಯಕರು ಪ್ರತ್ಯೇಕವಾಗಿ ಸಭೆ ಕರೆದು.. ರಹಸ್ಯವಾಗಿ ನಡೆಸಿರುವ ಮಾತುಕತೆ... ಹಸ್ತದ ಪಾಳಯದಲ್ಲಿ ಸಂಚಲನವನ್ನು ಸೃಷ್ಟಿಸಿದೆ.
ವಿಶೇಷ ಅಧಿವೇಶನದ ಹೊತ್ತಲ್ಲೇ ನಡೆದಿದ್ದ ಲಿಂಗಾಯತ ಹಾಗೂ ದಲಿತ ನಾಯಕರ ಸಭೆ ಹಲವು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ. ನಾಯಕತ್ವ ಬದಲಾವಣೆ ಚರ್ಚೆ.. ದಲಿತ ಸಿಎಂ ಕೂಗಿನ ನಡುವೆಯೇ ನಡೆದಿರುವ ಈ ಎರಡು ಸಭೆಗಳಲ್ಲಿ ಹಲವು ಮಹತ್ವದ ವಿಷ್ಯಗಳು ಚರ್ಚೆ ಆಗಿವೆ ಎಂದು ಉನ್ನತ ಮೂಲಗಳಿಂದ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಡಬಲ್ ಮೀಟಿಂಗ್ ರಹಸ್ಯ!
ಮೀಟಿಂಗ್ 1 : ದಲಿತ ಸಚಿವರ ಸಭೆ            
ದಲಿತ ಸಿಎಂ ಕೂಗಿನ ನಡುವೆ ದಲಿತ ನಾಯಕರು ಮೀಟಿಂಗ್​
ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ನಡೆದ ದಲಿತ ನಾಯಕರ ಸಭೆ
ಸಚಿವ ಹೆಚ್​​.ಸಿ. ಮಹದೇವಪ್ಪ, ಸಚಿವ ಕೆ.ಹೆಚ್. ಮುನಿಯಪ್ಪ, 
K.N.ರಾಜಣ್ಣ ಸೇರಿ 20ಕ್ಕೂ ಹೆಚ್ಚು ದಲಿತ ನಾಯಕರ ರಹಸ್ಯ ಚರ್ಚೆ
ಬಜೆಟ್​​ನಲ್ಲಿ ತಮಗೆ ಪ್ರಾತಿನಿಧ್ಯದ, ನಾಯಕತ್ವ ವಿಚಾರದ ಬಗ್ಗೆ ಚರ್ಚೆ 
ಸಿಎಂ ಬದಲಾವಣೆಗೆ ಮುಂದಾದಲ್ಲಿ ದಲಿತಸಿಎಂ ಕ್ಲೈಮ್ ಮಾಡ್ಬೇಕು
ದಲಿತಸಿಎಂ ಕ್ಲೈಮ್ ಮಾಡುವ ಕುರಿತು ಚರ್ಚೆ ಎಂಬ ಗುಸುಗುಸು
ದಲಿತ ಸಿಎಂ ಕೂಗಿನ ನಡುವೆ ದಲಿತ ನಾಯಕರು, ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಚಿವ ಹೆಚ್​​.ಸಿ. ಮಹದೇವಪ್ಪ, ಸಚಿವ ಕೆ.ಹೆಚ್. ಮುನಿಯಪ್ಪ, K.N.ರಾಜಣ್ಣ ಸೇರಿ 20ಕ್ಕೂ ಹೆಚ್ಚು ದಲಿತ ನಾಯಕರು ರಹಸ್ಯ ಚರ್ಚೆ ನಡೆಸಿದ್ದಾರೆ. ಬಜೆಟ್​​ನಲ್ಲಿ ತಮಗೆ ಪ್ರಾತಿನಿಧ್ಯ, ನಾಯಕತ್ವ ವಿಚಾರ. ಹೈಕಮಾಂಡ್​​ ಸಿಎಂ ಬದಲಾವಣೆಗೆ ಮುಂದಾದಲ್ಲಿ ದಲಿತಸಿಎಂ ಕ್ಲೈಮ್ ಮಾಡ್ಬೇಕು ಎಂಬೆಲ್ಲ ಚರ್ಚೆಗಳು ನಡೆದಿವೆ ಎನ್ನಲಾಗ್ತಿದೆ.

ಡಬಲ್ ಮೀಟಿಂಗ್ ರಹಸ್ಯ!
ಮೀಟಿಂಗ್ 2 : ಲಿಂಗಾಯತ ನಾಯಕರ ಸಭೆ
ಇತ್ತ ಸದ್ದಲ್ಲದೆ ಸಭೆ ನಡೆಸಿದ ಲಿಂಗಾಯತ ಸಮುದಾಯದ ನಾಯಕರು
ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಖಾಸಗಿ ಹೋಟೆಲ್​ನಲ್ಲಿ ನಡೆದ ಸಭೆ
ಲಿಂಗಾಯತ ನಾಯಕರ ಸಭೆಯಲ್ಲಿ ಮಹತ್ವ ವಿಚಾರಗಳ ಬಗ್ಗೆ ಚರ್ಚೆ
ಸಂಪುಟ ಪುನಾರಚನೆ ವೇಳೆ ನಮಗೆ ಆದ್ಯತೆ ನೀಡುವಂತೆ ಕೇಳಬೇಕು
ಹೀಗೆ ಹಲವು ಮಹತ್ವದ ವಿಚಾರಗಳು ಚರ್ಚಿಸಿರುವ ನಾಯಕರು

ಇನ್ನು ಇತ್ತ ಸದ್ದಿಲ್ಲದೆ ಲಿಂಗಾಯತ ಸಮುದಾಯದ ನಾಯಕರೂ ಸಭೆ ನಡೆಸಿದ್ದಾರೆ. ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಖಾಸಗಿ ಹೋಟೆಲ್​ನಲ್ಲಿ ನಡೆದ ಸಭೆಯಲ್ಲಿ ಮಹತ್ವ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಸಂಪುಟ ಪುನಾರಚನೆ ವೇಳೆ ನಮಗೆ ಆದ್ಯತೆ.. ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಲಿಂಗಾಯತ ನಾಯಕರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತ್ಯೇಕ ಸಭೆ.. ರಹಸ್ಯ ಚರ್ಚೆ ಬಗ್ಗೆ ಎರಡೂ ಸಮುದಾಯದ ಪ್ರಮುಖ ನಾಯಕರೂ ಸುಳಿವು ಬಿಟ್ಟುಕೊಟ್ಟಿಲ್ಲ.. ಸಚಿವ ಎಂಬಿ.ಪಾಟೀಲ್​​.. ಜನರಲ್ ಆಗಿ ಚರ್ಚೆ ಮಾಡಿದ್ದೇವೆ. ಸಿಎಂ ಬದಲಾವಣೆ ಬಗ್ಗೆ ಚರ್ಚೆ ಮಾಡಿಲ್ಲ ಎಂದು ನುಣಿಚಿಕೊಂಡ್ರೆ.. ಇನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್​​, SCPTSP ಹಣದ ಲೆಕ್ಕಾಚಾರದ ಬಗ್ಗೆ ಚರ್ಚೆ ಮಾಡಿದ್ವಿ ಎಂದ್ರು..

‘ನಮಗೆ ಎಲ್ಲದರಲ್ಲೂ ಪ್ರಾತಿನಿಧ್ಯ ಸಿಗ್ಬೇಕು’ ಎಂದ ಎಂ.ಬಿ.ಪಾಟೀಲ್‌

ಪಕ್ಷದ ವಿರುದ್ಧವೇ ‘ಕೈ’ ಶಾಸಕರ, ಪರಿಷತ್ ಸದಸ್ಯರ ಅಸಮಾಧಾನ
 ಕಾಂಗ್ರೆಸ್​​ ಪಾಳಯದಲ್ಲಿ ಪ್ರತ್ಯೇಕ ಸಭೆಗಳು.. ರಹಸ್ಯ ಚರ್ಚೆಗಳು ಒಂದೆಡೆಯಾದ್ರೆ.. ಮತ್ತೊಂದೆಡೆ ಸ್ವಪಕ್ಷದ ವಿರುದ್ಧವೇ ಕೈ ಶಾಸಕರು, ಪರಿಷತ್​ ಸದಸ್ಯರು ಅಸಮಾಧಾನಗೊಂಡಿದ್ದಾರೆ. ನಾಯಕತ್ವದ ಗೊಂದಲದ ಬಗ್ಗೆ ನಮ್ಮ ಮನೆಯಲ್ಲಿ, ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಯಾರೂ ಇಲ್ವಾ ಎಂದು ವಿಧಾನಪರಿಷತ್ನ ಮೊಗಸಾಲೆಯಲ್ಲಿ  ಪಕ್ಷದ ಆಂತರಿಕ ವಿಚಾರವನ್ನು ಚರ್ಚಿಸಿರುವ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.
ಮೇಲ್ನೋಟಕ್ಕೆ ರಾಜ್ಯ ಕಾಂಗ್ರೆಸ್​​ನಲ್ಲಿ ನಾಯಕತ್ವದ ಬದಲಾವಣೆ ಗದ್ದಲ.. ತಣ್ಣಗಾದಂತೆ ಕಾಣ್ತಿದ್ರೂ.. ಭೂಮಿಯೊಳಗಿನ ಜಾಲ್ವಾಮುಖಿಯಂತೆ ಒಳಗೊಳಗೇ ಕುದಿಯುತ್ತಿದೆ.. ಅದು ಸ್ಫೋಟಗೊಳ್ಳೋದಕ್ಕೂ ಮೊದ್ಲೇ, ಕಾಂಗ್ರೆಸ್​​ ಹೈಕಮಾಂಡ್​​ ಮೌನ ಮುರಿದು ತುಟಿಬಿಚ್ಚುತ್ತಾ, ಗೊಂದಲ ನಿವಾರಣೆ ಮಾಡುತ್ತಾ ಅನ್ನೋದನ್ನ ಕಾದುನೋಡ್ಬೇಕಿದೆ.

‘ಕೈ’ ಒಳಗೆ ಅಸಮಾಧಾನದ ಬೇಗುದಿ!
1. ಕಾಂಗ್ರೆಸ್ ಪಕ್ಷದೊಳಗೆ  ರಾಜ್ಯದ ಮಟ್ಟಿಗೆ ಆಂತರಿಕ ಗೊಂದಲವಿದೆ
2. ನಾಯಕತ್ವ ಬದಲಾವಣೆಗೆ ಕೆಲವರ ಪಟ್ಟು, ಮುಂದುವರಿಕೆಗೂ ಪಟ್ಟು   
3. ಸಮಸ್ಯೆಗಳನ್ನ ತಗೊಂಡು ಸಿಎಂ ಬಳಿ ಹೋದ್ರೆ, ಡಿಸಿಎಂ ಬಣಕ್ಕೆ ಬೇಸರ
4. ಡಿಸಿಎಂ ಡಿಕೆಶಿ ಬಳಿ ಹೋದ್ರೆ, ಸಿಎಂ ಸಿದ್ದರಾಮಯ್ಯ ಬಣಕ್ಕೆ ಅಸಮಾಧಾನ
5. ಇದರ ಮಧ್ಯೆ ನಮ್ಮ ಸಮಸ್ಯೆ ಬಗೆಹರಿಸುವವರು ಯಾರು ಅನ್ನೋ ಪ್ರಶ್ನೆ?
6. ಎಐಸಿಸಿ ಅಧ್ಯಕ್ಷ ಖರ್ಗೆ ನಮ್ಮವರೇ, ಆದ್ರೂ ಸ್ಪಷ್ಟ ನಿಲುವು ಪ್ರಕಟಿಸುತ್ತಿಲ್ಲ
7. AICC ಅಧ್ಯಕ್ಷರಾಗಿ ಮಲ್ಲಿಕಾರ್ಜುನ್​ ಖರ್ಗೆ ಅವರೇ ಕೈ ಚೆಲ್ಲಿದ್ರೆ ನಮ್ಮ ಗತಿಯೇನು?
8. ಹೈಕಮಾಂಡ್ ಮಟ್ಟದಲ್ಲಿ ಮಲ್ಲಿಕಾರ್ಜುನ್​ ಖರ್ಗೆ ಮಾತು ನಡೆಯುತ್ತಿಲ್ವಾ? 
9. ಹೈಕಮಾಂಡ್ ಮಟ್ಟದಲ್ಲಿ ವೇಣುಗೋಪಾಲ್  ಮಾತು ನಡೆಯುತ್ತಿದ್ಯಾ?
10. ಈಗಾಗಲೇ ವಿಧಾನಸಭೆಯ ಅವಧಿ 2 ವರ್ಷ 8 ತಿಂಗಳುಗಳು ಕಳೆದಿದೆ
11. ರಾಜ್ಯ ಸಾರ್ವತ್ರಿಕ ವಿಧಾನಸಭೆಯ ಚುನಾವಣೆ ಸಮೀಪವಾಗುತ್ತಿದೆ
12. ಗೊಂದಲ ಇತ್ಯರ್ಥಪಡಿಸುವವರೇ ಮೌನವಾದ್ರೆ ಏನ್​ ಮಾಡಬೇಕು?
13. ಎಲ್ಲದಕ್ಕೂ ಹೈ ನಾಯಕರು ಇತಿಶ್ರೀ ಹಾಡಲೇಬೇಕು ಎಂದು ಪಟ್ಟು

ಹರೀಶ್​​ ಮತ್ತು ಮಧುಸೂದನ್​ ನ್ಯೂಸ್​ಫಸ್ಟ್​​ ಬೆಂಗಳೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dr G Parameshwar CONGRESS MLA ASHOK PATTANA CM CHAIR FIGHTING IN CONGRESS MB Patil Congress
Advertisment