ರಾಜ್ಯ ಸರ್ಕಾರದಲ್ಲಿ ಹೊರ ಗುತ್ತಿಗೆ ನೌಕರರಿಗೆ ಗೇಟ್ ಪಾಸ್‌, ಖಾಯಂ ನೇಮಕಾತಿಗೆ ಕ್ರಮ!

ರಾಜ್ಯ ಸರ್ಕಾರದಲ್ಲಿ ಹೊರ ಗುತ್ತಿಗೆ ನೌಕರರಿಗೆ ನೀಡುವ ಸಂಬಳದಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಹೊರಗುತ್ತಿಗೆ ನೌಕರರ ನೇಮಕಾತಿ ಸ್ಥಗಿತಗೊಳಿಸಿ, ಖಾಯಂ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಖಾಯಂ ನೇಮಕಾತಿ ನಡೆಯಲಿದೆ.

author-image
Chandramohan
STATE GOVERNMENT APPOINTMENT02

ರಾಜ್ಯ ಸರ್ಕಾರದಿಂದ ಖಾಯಂ ನೇಮಕಾತಿಗೆ ಕ್ರಮ

Advertisment


ಇಂದು ಆರು ಮಂದಿ ಸರ್ಕಾರಿ ನೌಕರರ ಪೈಕಿ ಒಬ್ಬರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಅನ್ನೋ ಶಾಕಿಂಗ್​​ ಮಾಹಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಂಕಿಅಂಶಗಳು ತಿಳಿಸಿವೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರ ಖಾಲಿ ಇರೋ 2.84 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲೇಬೇಕಾದ ಒತ್ತಡದಲ್ಲಿದೆ. 
ಸದ್ಯ ಸರ್ಕಾರ 5.88 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದು, ಅವರಲ್ಲಿ 96,844 ಜನರು ಹೊರಗುತ್ತಿಗೆ ಪಡೆದಿದ್ದಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೇಳಿದೆ. ಅದ್ರಲ್ಲೂ ವೈದ್ಯಕೀಯ ಶಿಕ್ಷಣ ಇಲಾಖೆಯೇ 15,824 ಹೊರಗುತ್ತಿಗೆ ಪಡೆದ ಉದ್ಯೋಗಿಗಳನ್ನು ಹೊಂದಿದೆ. ಶಿಕ್ಷಣ ಇಲಾಖೆಯಲ್ಲಿ ಹೆಚ್ಚು ಮಂದಿ ಹೊರಗುತ್ತಿಗೆ ನೌಕರರು ಇದ್ದಾರೆ.
ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಆಗೋವರೆಗೂ ಯಾವುದೇ ನೇಮಕಾತಿ ಬೇಡ ಎಂದು ಸರ್ಕಾರ ಈ ಹಿಂದೆ ಆದೇಶಿಸಿತ್ತು. ಹಾಗಾಗಿ ನವೆಂಬರ್ 2024 ರಿಂದ ಆಗಸ್ಟ್ 2025ರ ನಡುವೆ 9 ತಿಂಗಳ ಕಾಲ ಸರ್ಕಾರ ಯಾವುದೇ ಹೊಸ ನೇಮಕಾತಿ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಈಗ ಒಳಮೀಸಲಾತಿ ಜಾರಿ ಮಾಡಿದ್ದು, ಸರ್ಕಾರ ನೇಮಕಾತಿಗೆ ಮುಂದಾಗಿದೆ. ಇದು ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಗುಡ್​ನ್ಯೂಸ್​ ಆಗಿದೆ. 
ವೈದ್ಯಕೀಯ ಶಿಕ್ಷಣ ಇಲಾಖೆಯು 15,376 ಮಂದಿ ಮತ್ತು ಆರೋಗ್ಯ ಇಲಾಖೆ 11,424 ಹೊರಗುತ್ತಿಗೆ ನೌಕರರನ್ನು ಹೊಂದಿದೆ. ಹೊರಗುತ್ತಿಗೆ ನೌಕರರ ವೇತನಕ್ಕಾಗಿ ಸರ್ಕಾರ ಈ ವರ್ಷ 2,273 ಕೋಟಿ ಮೀಸಲಿಟ್ಟಿದೆ. ಒಟ್ಟಾರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದ ವೇತನ ಬಿಲ್ 85,860 ಕೋಟಿ ರೂ. ತಲುಪಲಿದೆ. ಇದು ಕಳೆದ ವರ್ಷಕ್ಕಿಂತ ಶೇ. 19ರಷ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಹೇಗಾದ್ರೂ ಈ ವರ್ಷದಲ್ಲೇ 96,844 ಹೊರಗುತ್ತಿಗೆ ಉದ್ಯೋಗಿಗಳ ಜಾಗದಲ್ಲಿ ಪರ್ಮನೆಂಟ್​​ ಎಂಪ್ಲಾಯ್​ಗಳ ನೇಮಕಾತಿ ಮಾಡಲು ಸರ್ಕಾರ ನಿರ್ಧರಿಸಿದೆ. 

cm siddaramaiah
ಸಿಎಂ ಸಿದ್ದರಾಮಯ್ಯ Photograph: (@siddaramaiah)


2023ರ ಚುನಾವಣೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಅಧಿಕಾರಕ್ಕೆ ಬಂದ 1 ವರ್ಷದೊಳಗೆ ಎಲ್ಲಾ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು. 2023 ಮತ್ತು 2024ರಲ್ಲಿ ಕೆಪಿಎಸ್‌ಸಿ ಮೂಲಕ 1,961 ಖಾಲಿ ಹುದ್ದೆ ಭರ್ತಿ ಮಾಡಿತ್ತು. ಹಾಗೆಯೇ 709 ಸಬ್-ಇನ್ಸ್‌ಪೆಕ್ಟರ್‌ಗಳು ಮತ್ತು 4,880 ಕಾನ್‌ಸ್ಟೆಬಲ್‌ಗಳನ್ನು ನೇಮಕ ಮಾಡಿಕೊಂಡಿತು. ಅದಾದ ನಂತರ ಇದುವರೆಗೂ ಯಾವುದೇ ನೇಮಕಾತಿ ಆಗಿಲ್ಲ. 
ಈಗ ಸಿದ್ದರಾಮಯ್ಯ ಸರ್ಕಾರ ನೇಮಕಾತಿ ಸ್ಥಗಿತ ಆದೇಶವನ್ನು ತೆಗೆದುಹಾಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರ ನೇಮಕಾತಿ ಪ್ರಾರಂಭಿಸಲಿದೆ. ಈ ವರ್ಷ ಕನಿಷ್ಠ 50% ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Karnataka state government recruitment
Advertisment