Advertisment

ಕರೂರ್‌ ಕಾಲ್ತುಳಿತ ದುರಂತದ ಬಗ್ಗೆ ನಟ ವಿಜಯ ಮೊದಲ ಹೇಳಿಕೆ ಬಿಡುಗಡೆ: ಹೇಳಿದ್ದೇನು ಗೊತ್ತಾ?

ಕರೂರ್ ಕಾಲ್ತುಳಿತ ದುರಂತದ ಬಗ್ಗೆ ನಟ ವಿಜಯ ಮೊದಲ ಹೇಳಿಕೆಯನ್ನು ಇಂದು ಬಿಡುಗಡೆ ಮಾಡಿದ್ದಾರೆ. ದುರಂತ ನಡೆದ ಮೂರು ದಿನದ ಬಗ್ಗೆ ನಟ ವಿಜಯ ಮೌನ ಮುರಿದಿದ್ದಾರೆ. ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಸದ್ಯದಲ್ಲೇ ಎಲ್ಲ ಸತ್ಯ ಹೊರ ಬರಲಿದೆ. ಶೀಘ್ರದಲ್ಲೇ ಗಾಯಾಳುಗಳನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ.

author-image
Chandramohan
Vijay Rally (3)

ಕರೂರು ಕಾಲ್ತುಳಿತ ದುರಂತದ ಬಗ್ಗೆ ಮೌನ ಮುರಿದ ನಟ ವಿಜಯ್

Advertisment
  • ಕರೂರು ಕಾಲ್ತುಳಿತ ದುರಂತದ ಬಗ್ಗೆ ಮೌನ ಮುರಿದ ನಟ ವಿಜಯ್
  • ಘಟನೆಯಿಂದ ತೀವ್ರವಾಗಿ ನೊಂದಿದ್ದೇನೆ ಎಂದ ನಟ ವಿಜಯ್
  • ನನ್ನ ಮೇಲೆ ದ್ವೇಷ ತೀರಿಸಿಕೊಳ್ಳಿ, ಅಭಿಮಾನಿಗಳನ್ನು ಟಾರ್ಗೆಟ್ ಮಾಡಬೇಡಿ
  • ತಪ್ಪು ಮಾಡದಿದ್ದರೂ ನಮ್ಮ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದ ನಟ ವಿಜಯ್


ಕಳೆದ ಶನಿವಾರ ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ನಟ ಹಾಗೂ ಟಿವಿಕೆ ಪಕ್ಷದ ನಾಯಕ ವಿಜಯ ಈಗ ಮೌನ ಮುರಿದು ಮಾತನಾಡಿದ್ದಾರೆ. ತಮ್ಮ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 
ಈ ಸಮಯದಲ್ಲಿ ರಾಜಕೀಯ ಮಾಡೋದು ಸರಿಯಲ್ಲ, ನನ್ನ ಮೇಲೆ ಕೋಪವಿದ್ದರೇ, ನೇರವಾಗಿ ತೀರಿಸಿಕೊಳ್ಳಿ. ಶೀಘ್ರದಲ್ಲೇ ಎಲ್ಲ ಸತ್ಯ ಹೊರಗೆ ಬರುತ್ತೆ. ಘಟನೆಯಿಂದ ನನಗೆ ತುಂಬ ನೋವಾಗಿದೆ. ಶೀಘ್ರ ಗಾಯಾಳುಗಳನ್ನ ಭೇಟಿಯಾಗಿ ಸಾಂತ್ವನ ಹೇಳುತ್ತೇನೆ . ಯಾವುದೇ ತಪ್ಪು ಮಾಡದಿದ್ದರೂ, ನಮ್ಮ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ನಟ ವಿಜಯ ಹೇಳಿದ್ದಾರೆ. 
ನಟ ವಿಜಯ ಮಾತನಾಡಿರುವ ಟ್ವೀಟರ್ ವಿಡಿಯೋ ಲಿಂಕ್  ಅನ್ನು ಇಲ್ಲಿ ನೀಡಿದ್ದೇವೆ. ತಾವು ನೋಡಬಹುದು. 

Advertisment


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

tvk vijay rally stampede
Advertisment
Advertisment
Advertisment