/newsfirstlive-kannada/media/media_files/2025/08/18/ramya-dk-shivakumar022-2025-08-18-13-56-11.jpg)
ಕನ್ನಡ ಸಿನಿಮಾ ಲೋಕದ ಸ್ಟಾರ್ ಹೀರೋಯಿನ್ ರಮ್ಯಾ ಇತ್ತೀಚೆಗೆ ಸಾರ್ವಜನಿಕವಾಗಿ ಆಗ್ಗಾಗ್ಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕವಾಗಿ ಮಹಿಳೆಯರ ಪರ ಧ್ವನಿ ಎತ್ತುತ್ತಿದ್ದಾರೆ. ಮಹಿಳೆಯರ ಹಕ್ಕು, ಸ್ವಾತಂತ್ರ್ಯದ ಪರವಾಗಿ ದಿಟ್ಟವಾಗಿ ಮಾತನಾಡುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕವೂ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಅಭಿಮಾನಿಗಳ ಅಶ್ಲೀಲ ಕಾಮೆಂಟ್, ಜೀವ ಬೆದರಿಕೆಯ ವಿರುದ್ಧ ಕಾನೂನು ಸಮರ ಸಾರಿದ್ದರು. ನೇರವಾಗಿ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಗೆ ಬಂದು ಲಿಖಿತ ದೂರು ಸಲ್ಲಿಸಿದ್ದರು. ಆ ದೂರಿನ ತನಿಖೆ ನಡೆಸಿದ್ದ ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರು ಈಗಾಗಲೇ ಆರೇಳು ಮಂದಿಯನ್ನು ಬಂಧಿಸಿದ್ದಾರೆ. ಇನ್ನೂಳಿದವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಊರು ಬಿಟ್ಟು ಹೋಗಿದ್ದಾರೆ ಎಂದು ರಮ್ಯಾ ಮೊನ್ನೆಯಷ್ಟೇ ಹೇಳಿದ್ದರು.
ಇನ್ನೂ ಇವತ್ತು ಮತ್ತೆ ನಟಿ, ರಾಜಕಾರಣಿ ರಮ್ಯಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಹೆಬ್ಬಾಳ ಪ್ಲೈ ಓವರ್‌ನಲ್ಲಿ ನಾಗವಾರ ಕಡೆಯಿಂದ ಮೇಖ್ರಿ ಸರ್ಕಲ್ ಗೆ ಬರುವ ವಾಹನಗಳಿಗಾಗಿ ಲೂಪ್ ರಾಂಪ್ ಅನ್ನು ಬಿಡಿಎ ನಿರ್ಮಿಸಿದೆ. ಇದನ್ನು ಇಂದು ಉದ್ಘಾಟಿಸಲಾಗಿದೆ. ಇದರ ಉದ್ಘಾಟನೆಗೆ ಇವತ್ತು ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಬಂದಿದ್ದರು. ಡಿಕೆಶಿ ಪ್ಲೈ ಓವರ್ ಮೇಲೆ ತಮ್ಮ ನೆಚ್ಚಿನ ಯಜೆಡಿ ಬೈಕ್ ಅನ್ನು ಡ್ರೈವ್ ಮಾಡಿಕೊಂಡು ಬಂದರು. ಬಳಿಕ ಪ್ಲೈ ಓವರ್ ಮೇಲೆ ಕಾಮಗಾರಿ ಪರಿಶೀಲಿಸುತ್ತಿದ್ದಾಗ, ಧೀಡೀರನೇ ನಟಿ ರಮ್ಯಾ ಎದುರುಗಡೆ ಬಂದಿದ್ದಾರೆ. ತಕ್ಷಣವೇ ಡಿ.ಕೆ.ಶಿವಕುಮಾರ್ ರಮ್ಯಾ ಕಡೆಗೆ ಹೋಗಿ ರಮ್ಯಾಗೆ ನಗುಮುಖದಲ್ಲಿ ಅಪ್ಪುಗೆ ನೀಡಿದ್ದಾರೆ. ಬಳಿಕ ರಮ್ಯಾ , ಡಿ.ಕೆ.ಶಿವಕುಮಾರ್ ಅವರ ಕೈ ಕುಲುಕಿ ಒಂದು ಕ್ಷಣ ಇಬ್ಬರು ಪರಸ್ಪರ ವಿಶ್ ಮಾಡಿದ್ದಾರೆ. ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ರಮ್ಯಾ ತಲೆಯ ಮೇಲೆ ಕೈ ಇಟ್ಟು , ತಲೆ ಸವರಿದ್ದಾರೆ. ರಮ್ಯಾ, ಡಿ.ಕೆ.ಶಿವಕುಮಾರ್, ಅವರನ್ನು ಆ್ಯಂಕಲ್ ಎಂದೇ ಕರೆಯುತ್ತಾರೆ. ನಟಿ ರಮ್ಯಾ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾದ ವಿಡಿಯೋ ನ್ಯೂಸ್ ಫಸ್ಟ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದರ ಯೂ ಟ್ಯೂಬ್ ಲಿಂಕ್ ಇಲ್ಲಿದೆ , ನೋಡಿ.
ನಟಿ ರಮ್ಯಾ ಹಾಗೂ ಡಿಕೆಶಿ ಸೋದರ ಡಿ.ಕೆ.ಸುರೇಶ್ ಇಬ್ಬರೂ ಒಂದೇ ಭಾರಿಗೆ ಲೋಕಸಭೆ ಪ್ರವೇಶಿಸಿದವರು. 2013 ರಲ್ಲಿ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಒಮ್ಮೆಲ್ಲೇ ಲೋಕಸಭಾ ಉಪಚುನಾವಣೆ ನಡೆದಿತ್ತು. ಆ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ರಮ್ಯಾ ಹಾಗೂ ಡಿ.ಕೆ.ಸುರೇಶ್ ಇಬ್ಬರು ಭರ್ಜರಿ ಗೆಲುವು ಸಾಧಿಸಿ ಮೊದಲ ಭಾರಿಗೆ 2013 ರಲ್ಲಿ ಲೋಕಸಭೆ ಪ್ರವೇಶಿದ್ದರು. ಬಳಿಕ ಡಿ.ಕೆ.ಸುರೇಶ್ 2014, 2019 ರಲ್ಲೂ ಗೆಲುವು ಸಾಧಿಸಿದ್ದರು. ಆದರೇ, ರಮ್ಯಾಗೆ 2014 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜನರು ಮತ್ತೆ ಕೈ ಹಿಡಿಯಲಿಲ್ಲ. 2019 ರಲ್ಲಿ ನಟಿ ಸುಮಲತಾ ಅಂಬರೀಷ್ ಸ್ಪರ್ಧಿಸಿದ್ದರಿಂದ ರಮ್ಯಾ, ಮಂಡ್ಯದ ಕಡೆಗೆ ತಲೆ ಹಾಕಲಿಲ್ಲ.
ಡಿ.ಕೆ.ಸುರೇಶ್ ಹಾಗೂ ನಟಿ ರಮ್ಯಾ ಪಾರ್ಲಿಮೆಂಟ್ ಪ್ರವೇಶಿಸಿದ್ದ ಕ್ಷಣ.
ಮೂರು ವರ್ಷದ ಹಿಂದೆ ಇದೇ ರಮ್ಯಾ, ಡಿಕೆ ಶಿವಕುಮಾರ್ ವಿರುದ್ದವೂ ಮಾತನಾಡಿದ್ದರು. ಸಚಿವ ಎಂ.ಬಿ.ಪಾಟೀಲ್ ಪರವಾಗಿ ನಟಿ ರಮ್ಯಾ ಮಾತನಾಡಿದ್ದರು. ಇದು ಡಿಕೆಶಿ ಗ್ಯಾಂಗ್ ನ ಅಸಮಾಧಾನಕ್ಕೆ ಕಾರಣವಾಗಿತ್ತು. ಬಳಿಕ ಸಾರ್ವಜನಿಕವಾಗಿ ರಮ್ಯಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿ ರಾಯಚೂರಿಗೆ ಬಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿರನ್ನು ಭೇಟಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ