/newsfirstlive-kannada/media/media_files/2025/11/26/nirmalananda-swamiji-wishes-dks-should-become-cm-2025-11-26-19-20-07.jpg)
ಡಿಕೆಶಿ ಸಿಎಂ ಆಗಲಿ ಎಂಬ ಅಭಿಲಾಷೆ ನಮ್ಮದು ಎಂದ ನಿರ್ಮಲಾನಾಂದನಾಥ ಸ್ವಾಮೀಜಿ
ಸದ್ಯ ರಾಜಕೀಯ ಬೆಳವಣಿಗೆಯನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ನಮ್ಮವರೊಬ್ಬರು ಸಿಎಂ ಆಗ್ತಾರೆ ಅಂತ ಅಂದುಕೊಂಡಿದ್ದೇವೆ. ಈಗ ಎರಡೂವರೆ ವರ್ಷ ಆದ ಮೇಲೆ ನಮ್ಮ ಸಮುದಾಯವರು, ಸಿಎಂ ಆಗುತ್ತಾರೆ ಎಂದುಕೊಂಡಿದ್ದೇವೆ. ಡಿಕೆಶಿ ಎರಡೂವರೆ ವರ್ಷ ಆದ ಮೇಲೆ ಸಿಎಂ ಆಗಬೇಕು ಅನ್ನುವ ಆಸೆ ನಮಗೂ ಇದೆ. ಇನ್ನುಳಿದ ಎರಡೂವರೆ ವರ್ಷ ಡಿಕೆಶಿ ಸಿಎಂ ಆಗಬೇಕೆನ್ನುವ ಅಭಿಲಾಷೆ ನಮಗೂ ಇದೆ ಎಂದು ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಮಠದಲ್ಲಿ ಅದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಸಿಎಂ ಸ್ಥಾನದ ಆಕಾಂಕ್ಷಿ ಆಗಿರುವ ಡಿಕೆಶಿ, ಪ್ರಸ್ತುತ ಡಿಸಿಎಂ ಆಗಿದ್ದಾರೆ. ಈ ವಿಚಾರ ಡಿಕೆಶಿ ನಮ್ಮ ಜೊತೆ ಮಾತನಾಡಿಲ್ಲ. ಸಾವಿರಾರು ಭಕ್ತರು ಕರೆ ಮಾಡುತ್ತಾರೆ. 3 ಪಕ್ಷಗಳಲ್ಲೂ ಒಳ್ಳೆಯ ನಾಯಕರಿದ್ದಾರೆ . ಡಿಕೆಶಿ ಶಿಸ್ತಿನ ಸಿಪಾಯಿ. ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ . ಡಿಕೆಶಿ ಸಿಎಂ ಆಗಬೇಕು . ಭಕ್ತರು ನಮ್ಮ ಜೊತೆ ಹೇಳಿಕೊಂಡಿದ್ದಾರೆ. ಡಿಕೆಶಿ ಸಿಎಂ ಆಗಬೇಕೆಂದು ಭಕ್ತರು ಆಸೆ ವ್ಯಕ್ತಪಡಿಸಿದ್ದಾರೆ . ಎರಡೂವರೆ ಎರಡೂವರೆ ಅಧಿಕಾರ ಹಂಚಿಕೆ ವಿಚಾರ ಜನರು ಚರ್ಚೆ ಮಾಡುತ್ತಿದ್ದಾರೆ . ಡಿಕೆಶಿಗೆ ರಾಜಕೀಯ ಒಳಸುಳಿ ಗೊತ್ತಿದೆ . ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಆದ್ರೆ ಅಭಿವೃದ್ಧಿ ಕುಂಠಿತವಾಗುತ್ತದೆ . ಅಭಿವೃದ್ಧಿ ಮಾರಕವಾಗುತ್ತದೆ. ನಮ್ಮ ರಾಜ್ಯದ ಹಿತದೃಷ್ಟಿಯಿಂದ, ಹೈಕಮಾಂಡ್ ಸಮಸ್ಯೆ ಬಗೆಹರಿಸಲಿ ಎಂದು ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2025/02/Adichunchanagiri-Mahasansthan-Math.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us