/newsfirstlive-kannada/media/media_files/2025/11/27/ahinda-leaders-2025-11-27-18-01-55.jpg)
ಸಿದ್ದರಾಮಯ್ಯ ಬೆಂಬಲಕ್ಕೆ ನಿಲ್ಲಲು ಅಹಿಂದ ಸಚಿವರ ನಿರ್ಧಾರ
ಇನ್ನು, ಈ ಕುರ್ಚಿ ತಿಕ್ಕಾಟಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ.. ಡಿಕೆಶಿ ಅಸ್ತ್ರಕ್ಕೆ ಸಿದ್ದರಾಮಯ್ಯ ಬಣ ಪ್ರಬಲ ಬ್ರಹ್ಮಾಸ್ತ್ರ ಸಿದ್ಧಪಡಿಸಿದೆ.. ಹಳೇ ಅಸ್ತ್ರ ಅಹಿಂದಕ್ಕೆ ಸಾಣೆ ಹಿಡಿದ ಸಿಎಂ ಕ್ಯಾಂಪ್​​​, ಹೈಕಮಾಂಡ್​​ ಬಳಿ ಪ್ರದರ್ಶನಕ್ಕೆ ಪ್ಲಾನ್​​​ ಮಾಡಿದೆ.. ಸಿಎಂ ನಿವಾಸದಲ್ಲಿ ಅಹಿಂದ ನಾಯಕರ ರಹಸ್ಯ ಸಭೆ ನಡೆದಿದೆ.. ಇನ್ನೊಂದ್ಕಡೆ, ಅಹಿಂದ ಮತಬ್ಯಾಂಕ್​​ನ ವರದಿ ರವಾನಿಸಿದೆ..
ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಸಂಘರ್ಷ ತಾರಕಕ್ಕೇರಿದೆ.. ಈ ಬಿಕ್ಕಟ್ಟು ದೆಹಲಿ ಹೈಕಮಾಂಡ್ ಅಂಗಳ ತಲುಪಿ ವಾರಗಳು ಕಳೆದ್ರೂ ವಾರ್​​​ ಮಾತ್ರ ನಿಲ್ತಿಲ್ಲ.. ನಿನ್ನೆ ಉರುಳಿದ ಜಾತಿ ದಾಳದ ಬೆನ್ನಲ್ಲೆ ಅಹಿಂದ ಪಡೆ ಒಗ್ಗಟ್ಟಿನ ದರ್ಶನ ಮಾಡಿದೆ.. ಈ ಮೂಲಕ ಕದನ ಮತ್ತಷ್ಟು ಜಟಿಲಕ್ಕೆ ತಳ್ಳಿದೆ..
ಸಿಎಂ ಜೊತೆಗೆ ಅಹಿಂದ ಸಚಿವರ ರಹಸ್ಯ ಮಾತುಕತೆ!
ಹೈಕಮಾಂಡ್ ಮೇಲೆ ಒತ್ತಡ ಹೇರಲು ‘ಅಹಿಂದ’ ರೆಡಿ!
ಪಟ್ಟ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಯತ್ನಿಸ್ತಿದ್ರೆ, ಶತಾಯ ಗತಾಯ ಕಿತ್ತುಕೊಳ್ಳಲು ಡಿಕೆಶಿ ಯತ್ನಿಸ್ತಿದ್ದಾರೆ.. ಈ ಮಧ್ಯೆ ಡಿಕೆಶಿ ಅಸ್ತ್ರಕ್ಕೆ ಸಿದ್ದರಾಮಯ್ಯ ಬಣ ಪ್ರಬಲ ಬ್ರಹ್ಮಾಸ್ತ್ರವೊಂದನ್ನ ಸಿದ್ಧಪಡಿಸಿದ್ದು, ಹೈಕಮಾಂಡ್​​ ಮೇಲೇ ತೂರಿ ಬಿಟ್ಟು ಒತ್ತಡ ತರುವ ತಂತ್ರ ಹೆಣೆದಿದೆ.. ಸಿದ್ದರಾಮಯ್ಯ ತುರ್ತು ಬುಲಾಲ್ ಹಿನ್ನೆಲೆ, ಗೃಹ ಸಚಿವ ಪರಮೇಶ್ವರ್ ತರಾತುರಿಯಲ್ಲಿ ತಮ್ಮ ನಿವಾಸದಿಂದ ತೆರಳಿದ್ದು ಕಾಣಿಸ್ತು..
ಸಿಎಂ ಬೆನ್ನಿಗೆ ಬಂದ ಅಹಿಂದ ಪಡೆ!
ಸಿಎಂ ಸಿದ್ದರಾಮಯ್ಯ ಜೊತೆ ಅಹಿಂದ ಸಚಿವರ ರಹಸ್ಯ ಸಭೆ
ದೆಹಲಿಗೆ ತೆರಳುವುದಕ್ಕೂ ಮೊದಲು ಸಚಿವರ ಜೊತೆಗೆ ಚರ್ಚೆ
ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ನಡೆದ ಅಹಿಂದ ಸಭೆ
ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಮಹದೇವಪ್ಪ
ಸಂತೋಷ್ ಲಾಡ್, ಕೆ.ಎನ್.ರಾಜಣ್ಣ ಸೇರಿ ಹಲವರು ಭಾಗಿ
ಹೈಕಮಾಂಡ್ ಮೇಲೆ ಒತ್ತಡ ಹಾಕಲು ಮುಂದಾದ ಅಹಿಂದ
ಸಿಎಂ ಸಿದ್ದರಾಮಯ್ಯರನ್ನು ಮುಂದುವರಿಕೆ ಏಕೈಕ ಅಜೆಂಡಾ
ಸಿದ್ದರಾಮಯ್ಯ ಪರ ಹೈಕಮಾಂಡ್ ಮುಂದೆ ಪೆರೇಡ್​ ಪ್ಲಾನ್​
ಮುಖ್ಯವಾಗಿ ರಾಹುಲ್​ ಗಾಂಧಿ ಭೇಟಿಗೆ ಮುಂದಾದ ಸಚಿವರು
ಸಿಎಂ ಗಾದಿ ಬಿಡದಂತೆ ಸಿದ್ದರಾಮಯ್ಯ ಮೇಲೆ ಅಹಿಂದ ಪಟ್ಟು
ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ ಎಂದು ಸಿಎಂಗೆ ಅಭಯ
ಯಾವ ಕಾರಣಕ್ಕೂ ಮುಖ್ಯಮಂತ್ರಿ ಗಾದಿ ಬಿಟ್ಟು ಕೊಡಬೇಡಿ
ಸಿಎಂ ಜೊತೆ ಅಹಿಂದ ಸಚಿವರ ರಹಸ್ಯ ಮಾತುಕತೆ ನಡೆದಿದೆ. ದೆಹಲಿಗೆ ತೆರಳುವುದಕ್ಕೂ ಮೊದಲು ಅಹಿಂದ ಸಚಿವರ ಜೊತೆಗೆ ಸಿಎಂ ಚರ್ಚೆ ನಡೆಸಿದ್ದಾರೆ.. ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಸಂತೋಷ್ ಲಾಡ್, ಕೆ.ಎನ್ ರಾಜಣ್ಣ ಸೇರಿ ಹಲವರಿದ್ರು.. ಹೈಕಮಾಂಡ್ ಮೇಲೆ ಒತ್ತಡ ಹಾಕಲು ಮುಂದಾಗಿರುವ ಈ ಅಹಿಂದ ಪಡೆ, ಸಿಎಂ ಸಿದ್ದರಾಮಯ್ಯರನ್ನ ಮುಂದುವರೆಸುವಂತೆ ಏಕೈಕ ಅಜೆಂಡಾ ಹೊಂದಿದೆ.. ಸಿದ್ದರಾಮಯ್ಯ ಪರ ಹೈಕಮಾಂಡ್ ಮುಂದೆ ಪೆರೇಡ್​ಗೂ ಪ್ಲಾನ್​ ಮಾಡಿದೆ.. ಮುಖ್ಯವಾಗಿ ರಾಹುಲ್​ ಗಾಂಧಿ ಭೇಟಿಗೆ ಈ ಸಚಿವರ ತಂಡ ಪ್ಲಾನ್​​ ರೂಪಿಸಿದೆ.. ಅಲ್ಲದೆ, ಸಿಎಂ ಗಾದಿ ಬಿಡದಂತೆ ಸಿದ್ದರಾಮಯ್ಯ ಮೇಲೆ ಅಹಿಂದ ಸಚಿವರು ಪಟ್ಟು ಹಾಕಿದ್ದಾರೆ.. ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ.. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಗಾದಿ ಬಿಟ್ಟುಕೊಡಬೇಡಿ ಎಂದು ಒತ್ತಡ ಹಾಕಿದ್ದಾರೆ ಅಂತ ಗೊತ್ತಾಗಿದೆ..
/filters:format(webp)/newsfirstlive-kannada/media/media_files/2025/11/27/ahinda-leaders-1-2025-11-27-18-06-51.jpg)
ಇನ್ನು, ಸಿದ್ದರಾಮಯ್ಯಗೆ ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ತಿಳಿಸಿರುವ ಮಾಜಿ ಸಚಿವ ಕೆ.ಎನ್ ರಾಜಣ್ಣ, ನೀವು ಹೈಕಮಾಂಡ್ ಮುಂದೆ ತಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಬೇಕು.. ಬದಲಾವಣೆ ಅಂದ್ರೆ ಮುಂದಿನ ಚುನಾವಣೆಗಳ ಬಗ್ಗೆ ಹೇಳಿ ಅಂತ ಎಚ್ಚರಿಕೆ ಮಾತು ಆಡಿದ್ದಾರೆ..
ಸಿಎಂ ಭೇಟಿಗೂ ಮೊದಲೇ ಅಹಿಂದ ಸಚಿವರ ಬ್ರೇಕ್ ಫಾಸ್ಟ್ ಮೀಟಿಂಗ್ ಸಹ ಆಗಿದೆ.. ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಸತೀಶ್ ಜಾರಕಿಹೊಳಿ, ಮಹದೇವಪ್ಪ ಹಾಗೂ ಕೈ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ನಡುವೆ ರಹಸ್ಯ ಚರ್ಚೆ ಆಗಿದೆ..
ಡಿಕೆಶಿ ಅಸ್ತ್ರಕ್ಕೆ ಸಿದ್ದರಾಮಯ್ಯ ಬಣದಿಂದ ‘ಅಹಿಂದ’ ಬ್ರಹ್ಮಾಸ್ತ್ರ
ಡಿಸಿಎಂ ಡಿಕೆಶಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಲು ತೀರ್ಮಾನ!
ಇನ್ನು, ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಲು ಅಹಿಂದ ಸಚಿವರು ನಿರ್ಧರಿಸಿದ್ದಾರೆ ಅಂತ ಗೊತ್ತಾಗಿದೆ.. ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಡಿಕೆಶಿ ಸಹಿ ಸಂಗ್ರಹ ನಡೆಸ್ತಿದ್ದಾರೆ ಅಂತ ದೂರು ಸಿದ್ದಪಡಿಸಿದ್ದಾರೆ.
ಸಿದ್ದರಾಮಯ್ಯ ಪರ ಇರುವ ಅಹಿಂದ ಸಮುದಾಯ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.. ಅಹಿಂದ ವರ್ಗಗಳ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಅಹಿಂದ ಮತ ವಿಮುಖವಾಗಲಿದೆ ಅಂತ ಹೈಕಮಾಂಡ್​​ಗೆ ವರದಿ ರವಾನೆ ಆಗಿದೆ..
ಡಿಸಿಎಂ ಡಿಕೆಶಿ ರಿಂದ ಶಾಸಕರ ಸಹಿ ಸಂಗ್ರಹದಂತಹ ಪಕ್ಷ ವಿರೋಧಿ ಚಟುವಟಿಕೆ ಆಗ್ತಿದೆ ಅಂತ ಸಚಿವರು ದೂರುತ್ತಿದ್ದಾರೆ.. ಇತ್ತೀಚಿಗೆ ಕಾರಾಗೃಹಕ್ಕೆ ತೆರಳಿ ಡಿಕೆಶಿ ಸಹಿ ಸಂಗ್ರಹ ಮಾಡಿದ್ದಾರೆಂದು ಹೈಕಮಾಂಡ್​ ಮುಂದೆ ಸಾಕ್ಷಿಯಾಗಿ ಮುಂದಿಡಲು ತೀರ್ಮಾನಿಸಿದ್ದಾರೆ..
ಅಹಿಂದ ಅಸ್ತ್ರದ ಮೂಲಕವೇ ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದ್ದು, ಅಹಿಂದ ಬಿಟ್ಟರೆ ಕಾಂಗ್ರೆಸ್​​ಗೆ ರಾಜ್ಯದಲ್ಲಿ ಭವಿಷ್ಯವಿಲ್ಲ ಅನ್ನೋದನ್ನ ವಾದಿಸ್ತಿದೆ.. ಸದ್ಯದ ಬೆಳವಣಿಗೆಗೆ ಹೊಸ ಟ್ವಿಸ್ಟ್​​ ಕೊಡುವ ಸಾಧ್ಯತೆ ಇದೆ..
ಸಿದ್ದು ಬಣ.. ‘ಅಹಿಂದ’ ಬಾಣ!
ಹೈಕಮಾಂಡ್​ಗೆ ಕ್ಷೇತ್ರಾವಾರು ಅಹಿಂದ ಮತಗಳ ವರದಿ ರವಾನೆ
ರಾಜ್ಯದ 224 ಕ್ಷೇತ್ರಗಳಲ್ಲಿ ಅಹಿಂದ ಮತ ಪ್ರಮಾಣದ ಮಾಹಿತಿ
224ರ ಪೈಕಿ 19 ಕ್ಷೇತ್ರಗಳಲ್ಲಿ ಶೇ.80ರಷ್ಟು ಅಹಿಂದ ಮತದಾರರು
42 ಕ್ಷೇತ್ರಗಳ ಮತದಾರರಲ್ಲಿ ಶೇ.80ರಷ್ಟು ಅಹಿಂದ ನಿರ್ಣಾಯಕ
83ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶೇ.70ರಷ್ಟು ಅಹಿಂದ ವರ್ಗದ ಮತ
49 ಕ್ಷೇತ್ರಗಳಲ್ಲಿ ಶೇ.60ಕ್ಕಿಂತ ಹೆಚ್ಚು, 22 ಕ್ಷೇತ್ರಗಳಲ್ಲಿ ಶೇ.50 ಮತ
ರಾಜ್ಯದ 5 ಕ್ಷೇತ್ರಗಳಲ್ಲಿ ಶೇ.90ಕ್ಕೂ ಹೆಚ್ಚು ಅಹಿಂದ ಮತದಾರರು
ಸಿದ್ದರಾಮಯ್ಯ ಸ್ಥಾನಕ್ಕೆ ಚ್ಯುತಿ ತಂದ್ರೆ ಅಹಿಂದ ಮತ ಚದುರಲಿದೆ
ರಾಜ್ಯದ ಅಹಿಂದ ಸಮುದಾಯಗಳು ಬಹಳಷ್ಟು ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕವಾಗಿದ್ದಾರೆ ಎಂಬ ಅಂಕಿಅಂಶಗಳ ವರದಿಯನ್ನು ಕಾಂಗ್ರೆಸ್ ಹೈಕಮ್ಯಾಂಡ್ ಮುಂದೆ ಇಡಲು ಸಿದ್ದರಾಮಯ್ಯ ಹಾಗೂ ಬೆಂಬಲಿಗರು ನಿರ್ಧರಿಸಿದ್ದಾರೆ. ಈಗ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೇ, ಅಹಿಂದ ಮತಗಳು ಕಾಂಗ್ರೆಸ್ ಗೆ ಬರಲ್ಲ. ಬೇರೆ ಪಕ್ಷಗಳತ್ತ ವಾಲುತ್ತಾವೆ ಎಂಬ ಎಚ್ಚರಿಕೆಯ ಸಂದೇಶವನ್ನು ಕಾಂಗ್ರೆಸ್ ಹೈಕಮ್ಯಾಂಡ್ ಗೆ ನೀಡಲು ನಿರ್ಧರಿಸಿದ್ದಾರೆ.
ಹರೀಶ್​​ ಕಾಕೋಳ್​​​, ಪೊಲಿಟಿಕಲ್​​​ ಬ್ಯೂರೋ, ನ್ಯೂಸ್​ಫಸ್ಟ್​​
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us