/newsfirstlive-kannada/media/media_files/2025/11/23/mallikarjuna-kharge-2025-11-23-17-45-14.jpg)
ದೆಹಲಿಯಲ್ಲಿ ಮಾತನಾಡಿ ಸೆಟಲ್ ಮಾಡುತ್ತೇವೆ ಎಂದ ಖರ್ಗೆ
ನಾನು ದೆಹಲಿಗೆ ಹೋದ ಮೇಲೆ ಇಂಪಾರ್ಟೆಂಟ್ ಜನರನ್ನ ಕರೆಸಿ ಮಾತನಾಡುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿ ಹೇಳಿದ್ದಾರೆ. ಬೆಂಗಳೂರು ಏರ್ ಪೋರ್ಟ್ ಗೆ ಹೊರಡುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಸಿಎಂ , ಡಿಸಿಎಂ ಸೇರಿದಂತೆ ಎಲ್ಲರನ್ನೂ ಕರೆಸಿ ಮಾತನಾಡಿ ಸೆಟಲ್ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮೂರು ನಾಲ್ಕು ಜನರನ್ನ ಕರೆಸಿ ಮಾತನಾಡುತ್ತೇನೆ. ಯಾವ ರೀತಿ ಮುಂದೆ ನಡೆಯಬೇಕು ಅಂತ ತೀರ್ಮಾನ ಮಾಡ್ತೇನೆ . ಸಿಎಂ, ಡಿಸಿಎಂ ಸೇರಿದಂತೆ ಅವರನ್ನೆಲ್ಲಾ ಕರೆಸಿ ಮಾತನ್ನಾಡಿ ಸೆಟಲ್ ಮಾಡ್ತೇವೆ . ನಾನು ಎಲ್ಲರನ್ನೂ ಕರೆಸಿ ಚರ್ಚೆ ಮಾಡ್ತೇನೆ . ರಾಹುಲ್ ಗಾಂಧಿ ಕೂಡ ಸಭೆಯಲ್ಲಿ ಇರುತ್ತಾರೆ. ಸಿಎಂ, ಡಿಸಿಎಂ ಇಬ್ಬರೂ ಇರುತ್ತಾರೆ. ಹೈಕಮಾಂಡ್ ಅಂದರೆ ಟೀಂ . ಹೈಕಮ್ಯಾಂಡ್ ಏಕಾಂಗಿ ಅಲ್ಲ . ಹೈಕಮಾಂಡ್ ಟೀಂ ಕುಳಿತು ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೆ ಎಂದು ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಮೂಲಕ ಈ ವಾರದ ಅಂತ್ಯದೊಳಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದೊಳಗಿನ ಬಿಕ್ಕಟ್ಟು ಅಂತ್ಯಗೊಳಿಸುವ ಸ್ಪಷ್ಟ ಸೂಚನೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ.
ಇಂದು ದೆಹಲಿಗೆ ತೆರಳಿದ ಬಳಿಕ ಮಧ್ಯಾಹ್ನ 3 ಗಂಟೆಗೆ ರಾಹುಲ್ ಗಾಂಧಿ ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಚರ್ಚೆ ನಡೆಸುವ ನಿರೀಕ್ಷೆ ಇದೆ. ಬಳಿಕ ನಾಳೆ ಅಥವಾ ನಾಡಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ರನ್ನು ದೆಹಲಿಗೆ ಕರೆಸಿಕೊಂಡು ಹೈಕಮ್ಯಾಂಡ್ ಸಿಎಂ ಸ್ಥಾನದ ಬಗ್ಗೆ ತನ್ನ ತೀರ್ಮಾನ ತಿಳಿಸುವ ನಿರೀಕ್ಷೆ ಇದೆ.
/filters:format(webp)/newsfirstlive-kannada/media/media_files/2025/11/23/siddaramaiah-mallikarjuna-kharge-2025-11-23-09-05-23.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us