/newsfirstlive-kannada/media/media_files/2025/10/03/yallalinga-murder-case02-2025-10-03-17-06-41.jpg)
ವಿದ್ಯಾರ್ಥಿ ಯಲ್ಲಾಲಿಂಗ ಕೇಸ್ ಆರೋಪಿಗಳೆಲ್ಲಾ ಖುಲಾಸೆ!
ರಾಜ್ಯದಲ್ಲಿ 2015 ರಲ್ಲಿ ಸದ್ದು ಮಾಡಿದ್ದ ಕೊಪ್ಪಳ ಜಿಲ್ಲೆಯ ಯಲ್ಲಾಲಿಂಗ ಎಂಬ ಯುವಕನ ಕೊಲೆ ಕೇಸ್ ತೀರ್ಪು ಇಂದು ಕೊಪ್ಪಳ ನ್ಯಾಯಾಲಯದಲ್ಲಿ ಪ್ರಕಟವಾಗಿದೆ. ಕೊಲೆ ನಡೆದ ಹತ್ತು ವರ್ಷದ ನಂತರ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಕೇಸ್ ತೀರ್ಪು ಪ್ರಕಟವಾಗಿದೆ. ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೊಲೆ ಕೇಸ್ ತೀರ್ಪು ನೀಡಿದ್ದು, ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. 2015ರ ಜನವರಿ 11 ರಂದು ಯಲ್ಲಾಲಿಂಗನ ಕೊಲೆಯಾಗಿತ್ತು. ಕೊಪ್ಪಳ ನಗರದ ರೇಲ್ವೆ ನಿಲ್ದಾಣದಲ್ಲಿ ಯಲ್ಲಾಲಿಂಗನ ಶವಪತ್ತೆಯಾಗಿತ್ತು. ಶಿವರಾಜ್ ತಂಗಡಗಿ ಆಪ್ತ ಹನುಮೇಶ್ ನಾಯಕ್ ಸೇರಿ 9 ಜನರ ವಿರುದ್ದ ಕೊಲೆ ಪ್ರಕರಣ ದಾಖಲಾಗಿತ್ತು. ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಹನುಮೇಶ್ ನಾಯಕ್, ಹನುಮೇಶ್ ನಾಯಕ್ ಪುತ್ರ ಮಹಾಂತೇಶ್ ನಾಯಕ್,ಮನೋಜ್ ಪಾಟೀಲ್, ಬಾಳನಗೌಡ, ಕಾಡ ಮಂಜ, ನಂದೀಶ್ , ಪರಶುರಾಮ್, ಯಮನೂರಪ್ಪ ಸೇರಿ 9 ಜನರ ವಿರುದ್ದ ಕೇಸ್ ದಾಖಲಾಗಿತ್ತು. ಈಗ ಎಲ್ಲ ಆರೋಪಿಗಳು ಈ ಕೊಲೆ ಕೇಸ್ ನಿಂದ ನಿರ್ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ. ಆರೋಪಿಗಳು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.
ಈಗಾಗಲೇ ಆರೋಪಿಗಳು ಜಾಮೀನು ಪಡೆದು ಜೈಲಿನಿಂದ ಹೊರಗೆ ಇದ್ದರು. ಇಂದು ಎಲ್ಲ ಆರೋಪಿಗಳು ಕೋರ್ಟ್ ಗೆ ಹಾಜರಾಗಿದ್ದರು. ಜಿಲ್ಲಾ ನ್ಯಾಯಾಧೀಶರಾದ ಚಂದ್ರಶೇಖರ ತೀರ್ಪು ಪ್ರಕಟಿಸಿದ್ದರು. 9 ಜನರು ನಿರಪರಾಧಿಗಳೆಂದು ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ಕೊಲೆ ಕೇಸ್ ನಲ್ಲಿ ಕೋರ್ಟ್ ನಿಂದ ಖುಲಾಸೆಯಾದ ಆರೋಪಿಗಳು
ತೀರ್ಪಿನ ನಂತರ ಹೇಳಿಕೆ ನೀಡಿದ ಆರೋಪಿಗಳ ಪರ ವಕೀಲ ಗಂಗಾಧರ, ಇದೊಂದು ಆತ್ಮಹತ್ಯೆ ಪ್ರಕರಣ ಎಂದು ತೀರ್ಪು ನೀಡಲಾಗಿದೆ. ನ್ಯಾಯಾಲಯ ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದ್ದಾರೆ. 76 ಸಾಕ್ಷಿಗಳು ಈ ಕೇಸ್ ನಲ್ಲಿದ್ದರು. ಹಲವು ಸಾಕ್ಷಿಗಳು ನಿರಾಧಾರವಾಗಿದ್ದವು.
ಕೇಸ್ ನಲ್ಲಿ ಹನುಮೇಶ್ ನಾಯಕ ಹಾಗೂ ಅವರ ಕುಟುಂಬದ ಪಾತ್ರವಿಲ್ಲ . ಯಲ್ಲಾಲಿಂಗ ಕೇಸ್ ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ. ಯಲ್ಲಾಲಿಂಗ ಅಣ್ಣ ವೀರಭದ್ರಪ್ಪ ನೀಡಿದ ಹೇಳಿಕೆಯಿಂದ ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ. ರೈಲ್ವೆ ಪೋಸ್ಟ್ ಮಾರ್ಟಂ ವರದಿಯಲ್ಲೂ ರೈಲ್ವೆ ಗಾಯದಿಂದ ಸಾವು ಸಂಭವಿಸಿದೆ ಎಂಬ ವರದಿ ಬಂದಿದೆ. ಇದೊಂದು ರಾಜಕೀಯ ಷಡ್ಯಂತ್ರ. ಹಾಗಾಗಿ 10 ವರ್ಷ ಇಡೀ ಕುಟುಂಬು ನೋವು ಅನುಭವಿಸಿದೆ . ಡಿಜಿ-ಐಜಿಪಿ ಅವರ ಆದೇಶ ಪತ್ರದಲ್ಲಿ ಹನುಮೇಶ್ ನಾಯಕ್ ಕುಟುಂಬದ ಪಾತ್ರ ಇಲ್ಲ ಎಂದು ಬಂದಿತ್ತು. ಆದರೂ ಸಿಐಡಿ ತನಿಖೆ ಮಾಡಲಾಗಿತ್ತು. ಇದೊಂದು ದೊಡ್ಡ ರಾಜಕೀಯ ಪಿತೂರಿ. ಮೂರು ವರ್ಷಗಳ ನ್ಯಾಯಾಂಗ ಬಂಧನವಾಗಿತ್ತು. ರಾಜಕೀಯವಾಗಿ ಇವರನ್ನು ಮುಗಿಸಲಾಗಿತ್ತು ಎಂದು ಹನುಮೇಶ ನಾಯಕ ಪರ ವಕೀಲ ಗಂಗಾಧರ ಹೇಳಿದ್ದಾರೆ.
ಇನ್ನೂ ಕೋರ್ಟ್ ತೀರ್ಪಿನ ಬಳಿಕ ಹನುಮೇಶ್ ನಾಯಕ್ ಹೇಳಿಕೆ ನೀಡಿದ್ದಾರೆ. ಇಡೀ ಕುಟುಂಬಕ್ಕೆ ನೋವು ಕೊಟ್ಟಿದ್ದಾರೆ. ನಾವು ತಪ್ಪು ಮಾಡಿದ್ರೆ ನಾವು ಸರ್ವನಾಶವಾಗಲಿ. ಇಲ್ಲ ಅವರು ಸರ್ವನಾಶವಾಗಲಿ . ಆ ಧರ್ಮಸ್ಥಳ ಮಂಜುನಾಥನೇ ಎಲ್ಲವನ್ನೂ ನೋಡಿಕೊಳ್ಳಲಿ ಎಂದು ಹನುಮೇಶ ನಾಯಕ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.