/newsfirstlive-kannada/media/media_files/2025/10/19/bgm_dcc_bank-2025-10-19-07-44-30.jpg)
ಬೆಳಗಾವಿ ಡಿಸಿಸಿ ಬ್ಯಾಂಕ್​​​ ಚುನಾವಣೆ ರಣಕಣದಲ್ಲಿ ಸತೀಶ್ ಜಾರಕಿಹೊಳಿ ಕೈ ಮೇಲಾಗಿದೆ. ಕತ್ತಿ-ಸವದಿ ಮಾಡಿದ ತಂತ್ರ-ರಣತಂತ್ರಗಳು ಮಕಾಡೆ ಮಲಗಿವೆ. ನಿನ್ನೆ 16 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಬಣ ಗೆಲುವಿನ ನಗೆ ಬೀರಿದೆ. 16 ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ 7 ಸ್ಥಾನಗಳಲ್ಲಿ ಸತೀಶ್ ಜಾರಕಿಹೊಳಿ ಬಣದ ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ರು. ನಿನ್ನೆ ನಡೆದ ಚುನಾವಣೆಯಲ್ಲಿ 4 ನಿರ್ದೇಶಕರ ಸ್ಥಾನಗಳನ್ನ ಸತೀಶ್ ಬಣ ಗೆದ್ದು ಬೀಗಿದೆ. ಈ ಮೂಲಕ 16 ನಿರ್ದೇಶಕ ಸ್ಥಾನಗಳ ಪೈಕಿಿ 11 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾಗಿ ಹೇಳಿಕೊಂಡಿದ್ದಾರೆ. ಇತ್ತ ರಮೇಶ್ ಕತ್ತಿ ಮತ್ತು ಲಕ್ಷ್ಮಣ್ ಸವದಿ ಬಣ ಕೇವಲ 5 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ ಎಂಬ ಮಾಹಿತಿ ಇದೆ. ಹುಕ್ಕೇರಿಯಲ್ಲಿ ರಮೇಶ್ ಕತ್ತಿಗೆ ಗೆಲುವು ಸಿಕ್ಕಿದ್ರೆ, ಅಥಣಿಯಲ್ಲಿ ಲಕ್ಷ್ಮಣ ಸವದಿ ಗೆಲುವು ಸಾಧಿಸಿದ್ದಾರೆ ಅಂತ ತಿಳಿದುಬಂದಿದೆ.
ಬೆಳಗಾವಿಯ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಗೆಲುವು ಸಾಧಿಸ್ತಿದ್ದಂತೆ ಸತೀಶ್ ಜಾರಕಿಹೊಳಿ ಕ್ಯಾಂಪ್‌ನಲ್ಲಿ ಗೆಲುವಿನ ಹರ್ಷ ಮನೆ ಮಾಡಿದೆ. ಡಿಸಿಸಿ ಬ್ಯಾಂಕ್‌ನ ಏಳು ಸ್ಥಾನಗಳಲ್ಲಿ ನಾಲ್ಕು ಸ್ಥಾನ ಗೆದ್ದಿದ್ದೇವೆ. ರಾಮದುರ್ಗ, ಹುಕ್ಕೇರಿಯಲ್ಲಿ ಸೋಲಾಗಿದೆ. ಲಕ್ಷ್ಮಣ ಸವದಿ ಅವರು ಎಲ್ಲರೂ ಒಂದೇ ಗುಂಪಿನವರು ಅಂತಾ ಹೇಳಿ ಬೀಜ ಬಿತ್ತಿದ್ದಾರೆ. ಕೈಯಲ್ಲಿ ಚೀಟಿ ಹಿಡಿದು ಅಧ್ಯಕ್ಷ ನಮ್ಮವರು ಆಗ್ತಾರೆ ಅಂತಾ ಹೇಳಿದ್ದಾರೆ. ಆದ್ರೆ, ಇದೆಲ್ಲಾ ವರ್ಕೌಟ್ ಆಗಲ್ಲ ಅಂತ ಸಚಿವ ಸತೀಶ್ ಜಾರಕಿಹೊಳಿ, ಕತ್ತಿ ಮತ್ತು ಸವದಿ ವಿರುದ್ಧ ಕಿಡಿಕಾರಿದ್ದಾರೆ.
ಡಿಸಿಸಿ ಬ್ಯಾಂಕ್ ಪೂರ್ಣ ಪ್ರಮಾಣದ ಅಧಿಕಾರ ನಮಗೆ ಸಿಕ್ಕಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತೋಷ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, 29ವರ್ಷದ ನಂತರ ಮತ್ತೆ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿದೆ. ಜಿಲ್ಲೆಯ ಮಹಾ ಜನತೆ, ರೈತರಿಗೆ, ಶಾಸಕರಿಗೆ ಧನ್ಯವಾದ. 16 ಸ್ಥಾನಗಳ ಪೈಕಿ 13 ಸ್ಥಾನ ಗೆದಿದ್ದೇವೆ. ನಮ್ಮಲ್ಲಿ ಸ್ವಲ್ಪ ಅಸಮಾಧಾನ ಇದ್ದವು ಅವನ್ನ ಸರಿ ಮಾಡಿಕೊಳ್ತೇವಿ. ರಾಜು ಕಾಗೆ, ಗಣೇಶ್ ಹುಕ್ಕೇರಿ ನಮ್ಮ ಬಣಕ್ಕೆ ಸಪೋರ್ಟ್ ಮಾಡ್ತಾರೆ. ನಾವು ಇದ್ರೇ ಬ್ಯಾಂಕ್ ಅಂತಿದ್ದರು. ಅಂತವರಿಗೆ ಬ್ಯಾಂಕ್ ಸದೃಢ ಮಾಡಿ ಉತ್ತರ ಕೊಡ್ತೇವಿ. ನಾವು ಸುಮ್ಮನೆ ಇದೀವಿ ಅಂದ್ರೇ ನಮ್ಮ ವಿಕ್ನೆಸ್ ಅಲ್ಲ. ಸಮಯ ಬಂದಾಗ ಎಲ್ಲರಿಗೂ ಉತ್ತರ ಕೊಡುತ್ತೇನೆ . ನಾನು 50 ಕೋಟಿ ಬೆಟ್ಟಿಂಗ್ ಕಟ್ಟುತ್ತೇನೆ. ನಮ್ಮವರೇ ಅಧ್ಯಕ್ಷರಾಗ್ತಾರೆ. ಲಕ್ಷ್ಮಣ ಸವದಿ ಬೇಕಾದ್ರೇ 50 ಕೋಟಿ ಬೆಟ್ಟಿಂಗ್ ಕಟ್ಟಲಿ. ನಮ್ಮವರು ಆಗದಿದ್ರೇ ಆಸ್ತಿ ಮಾರಿ 50 ಕೋಟಿ ಕೊಡ್ತೇನಿ ಎಂದು ಸವಾಲ್​ ಹಾಕಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.