/newsfirstlive-kannada/media/media_files/2025/09/10/ut-khadar-vs-basavaraj-horatti-2025-09-10-08-32-54.jpg)
ವಿಧಾನಸಭೆ ವರ್ಸಸ್​ ವಿಧಾನಪರಿಷತ್ ಸಭಾಪತಿಗಳ ಮಧ್ಯೆ ಯುದ್ಧ ಶುರುವಾಗಿದೆ. ತಮ್ಮ ವಿರುದ್ಧ ಅಸಮಾಧಾನ ಹೊರಹಾಕಿದ್ದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಗೆ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಪತ್ರದ ಮೂಲಕ ತಿರುಗೇಟು ನೀಡಿದ್ದಾರೆ.
ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಈ ಪತ್ರದ್ದೇ ಚರ್ಚೆ. ಇವರಿಬ್ಬರ ಕದನದ್ದೇ ತಲ್ಲಣ.. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಸ್ಚೀಕರ್ ಯು.ಟಿ.ಖಾದರ್​ಗೆ ಬರೆದ ಪತ್ರ ಸಾಕಷ್ಟು ಚರ್ಚೆ ಆಗ್ತಾ ಇದೆ. ಆದರೆ ಹೊರಟ್ಟಿ ಬರೆದ ಪತ್ರಕ್ಕೆ ಯು.ಟಿ.ಖಾದರ್ ಉತ್ತರ ನೀಡಿ ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನ ತಳ್ಳಿಹಾಕಿದ್ದಾರೆ.
ಇದನ್ನೂ ಓದಿ:ಉಪರಾಷ್ಟ್ರಪತಿ ಚುನಾವಣೆ.. NDA ಅಭ್ಯರ್ಥಿ ಸಿ.ಪಿ ರಾಧಕೃಷ್ಣನ್​ಗೆ ಭರ್ಜರಿ ಗೆಲುವು
ಸ್ಪೀಕರ್ ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಾರೆ. ಈವರೆಗೆ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ ಎಂದು ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದರು. ಇದರಿಂದ ಸ್ಪೀಕರ್ ವರ್ಸಸ್ ಸಭಾಪತಿ ನಡುವಿನ ಅಸಮಾಧಾನ ಸ್ಫೋಟಗೊಂಡಿದೆ. ಅಷ್ಟಕ್ಕೂ ಏನಿದು ಇಬ್ಬರು ಹಿರಿಯ ನಾಯಕರ ಸಮರ ಅಂತ ನೋಡೋದಾದ್ರೆ...
ಹೊರಟ್ಟಿ vs ಖಾದರ್
ಪತ್ರ ಬರೆದ ಸಭಾಪತಿ ಹೊರಟ್ಟಿ, ಪುಸ್ತಕ ಮೇಳ, ಲೇಸರ್ ಲೈಟ್ ಅಳವಡಿಕೆಗೂ ಯಾವುದೇ ಅಭಿಪ್ರಾಯ ಪಡೆದಿಲ್ಲ. ಸಿಪಿಎ ಕಾಮನ್ ವೆಲ್ತ್ ಸಮ್ಮೇಳನ ಆಯೋಜನೆಯ ರೂಪುರೇಷೆಗೂ ನಮ್ಮ ಅಭಿಪ್ರಾಯ ಕೇಳಿಲ್ಲ. ಯಾವುದೇ ಕಾರ್ಯಕ್ರಮ ನಡೆದರೂ ಸೌಜನ್ಯಕ್ಕೂ ಮುಂಚೆಯೇ ಏನೂ ಹೇಳುವುದಿಲ್ಲ. ಇವೆಲ್ಲವನ್ನೂ ಇಲ್ಲಿಯವರೆಗೆ ಸಹಿಸಿಕೊಂಡು ಬಂದಿದ್ದೇನೆ. ಇನ್ನುಮುಂದೆ ಆಗಲ್ಲ ಎಂದು ಭಾವಿಸುತ್ತೇನೆಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಆದರೆ ಇದಕ್ಕೆ ಉತ್ತರ ನೀಡಿರುವ ಸ್ಚೀಕರ್ ಯು.ಟಿ.ಖಾದರ್, ಪ್ರತಿಯೊಂದು ಕಾರ್ಯಕ್ರಮವನ್ನು ತಮ್ಮ ಗಮನಕ್ಕೆ ತಂದಿದ್ದೇನೆ. ಪುಸ್ತಕ ಮೇಳ ಉದ್ಘಾಟನೆಯಲ್ಲಿ ಇಬ್ಬರು ಭಾಗಿಯಾಗಿದ್ದೆವು. ಲೇಸರ್ ಲೈಟ್ ಅಳವಡಿಕೆ ಸರ್ಕಾರ ಮತ್ತು ಲೋಕೋಪಯೋಗಿ ಇಲಾಖೆಯಿಂದ ನಡೆದಿದೆ. 11 ಸಿಪಿಎ ಸಮ್ಮೇಳನದ ಬಗ್ಗೆ ಇದುವರೆಗೂ ಪ್ರತ್ಯೇಕ ಸುದ್ದಿಗೋಷ್ಠಿ ಮಾಡಿಲ್ಲ. ಪತ್ರಕರ್ತರ ಪ್ರಶ್ನೆಗೆ ಮಾತ್ರ ಉತ್ತರಿಸಿ ಮಾಹಿತಿ ನೀಡಲಾಗಿದೆ. 66ನೇ ಕಾಮನ್‌ವೆಲ್ತ್ ಪಾರ್ಲಿಮೆಂಟ್‌ರಿ ಕಾನ್ಪರೆನ್ಸ್ ವಿಚಾರದಲ್ಲಿ ಕಾರ್ಯಕ್ರಮಕ್ಕೆ ಬಂದ ಆಹ್ವಾನಕ್ಕೆ ಇಬ್ಬರು ಒಪ್ಪಿಗೆ ನೀಡಿದ್ದೇವೆ. ಪ್ರವಾಸದ ಕಾರ್ಯಕ್ರಮದ ಬಗ್ಗೆ ತಮ್ಮ ಅಧಿಕಾರಿಗಳ ಮೂಲಕ ತಮಗೆ ವಿವರಿಸಲಾಗಿದೆ. ವಿಧಾನ ಮಂಡಲ ಆಯೋಜಿಸುವ ಪ್ರತಿ ಕಾರ್ಯಕ್ರಮವನ್ನು ನಿಮ್ಮೊಂದಿಗೆ ಚರ್ಚಿಸಲಾಗಿದೆ. ಆದರೂ ತಮ್ಮ ಪತ್ರವನ್ನ ಸಕಾರಾತ್ಮಕವಾಗಿ ನಿರ್ವಹಿಸುತ್ತೇನೆ. ಇನ್ಮುಮುಂದೆ ಸಣ್ಣ ನ್ಯೂನ್ಯತೆ ಇದ್ದರೂ ಸಮನ್ವಯತೆಯಿಂದ ನಿರ್ವಹಿಸೋಣ ಎಂದು ಪ್ರತ್ಯುತ್ತರ ನೀಡಿ ವಿವಾದಕ್ಕೆ ಬ್ರೇಕ್ ಹಾಕುವ ಯತ್ನ ಮಾಡಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಎಂಎಲ್‌ಸಿಗಳ ತೀವ್ರ ಆಕ್ರೋಶ, ಅಸಮಾಧಾನ ತಣಿಸಲು ಸಿಎಂ ಹೇಳಿದ್ದೇನು?
ಒಟ್ನಲ್ಲಿ ಸ್ಚೀಕರ್ vs ಸಭಾಪತಿ ನಡುವ ಲೇಟರ್ ವಾರ್ ಸಾಕಷ್ಟು ಚರ್ಚೆ ಆಗುತ್ತಿದ್ದು ಇದಕ್ಕೆಲ್ಲ ಬ್ರೇಕ್ ಹಾಕಲು ಸ್ವತಃ ಯು.ಟಿ.ಖಾದರ್ ಪತ್ರ ಬರೆದು ತಮ್ಮ ವಿರುದ್ಧ ಆರೋಪಗಳನ್ನು ತಿರಸ್ಕರಿದ್ದಾರೆ. ಜೊತೆಗೆ ಹಿರಿಯರಾದ ಹೊರಟ್ಟಿ ಮಾತನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವುದಾಗಿ ಹೇಳಿದ್ದು ವಿವಾದ ಅಂತ್ಯವಾಗುವ ಲಕ್ಷಣ ಕಾಣ್ತಿದೆ.
ವಿಶೇಷ ವರದಿ: ಮಂಜುನಾಥ ಪೊಲಿಟಿಕಲ್ ಬ್ಯೂರೋ ನ್ಯೂಸ್​ ಫಸ್ಟ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us