/newsfirstlive-kannada/media/media_files/2025/09/19/sc-dismiss-petition-against-banu-2025-09-19-13-30-53.jpg)
ಭಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಫ್ತಾಕ್ ಆಯ್ಕೆ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಸುಪ್ರೀಂಕೋರ್ಟ್‌ನ ಜಸ್ಟೀಸ್ ವಿಕ್ರಮನಾಥ್ ಅವರ ಪೀಠವು ಮೇಲ್ಮನವಿ ಅರ್ಜಿಯನ್ನು ಇಂದು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.
ನ್ಯಾಯಮೂರ್ತಿ ವಿಕ್ರಮ್ ನಾಥ್ ರಿಂದ ಅರ್ಜಿದಾರರಿಗೆ ಪಶ್ನೆಯೊಂದನ್ನು ಕೇಳಿದ್ದರು.
ಈ ಅರ್ಜಿಯನ್ನು ಸಲ್ಲಿಸಿರುವ ಉದ್ದೇಶವೇನು? ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ಇದು ಸಂವಿಧಾನದ ವಿಧಿ 25 ರ ಅಡಿಯಲ್ಲಿ ನನ್ನ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಆದರೇ, ನ್ಯಾಯಮೂರ್ತಿ ವಿಕ್ರಮನಾಥ್ ಅವರು ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ತಮ್ಮ ಆದೇಶವನ್ನು ತಿಳಿಸಿದ್ದರು.
ಆಗ ಅರ್ಜಿದಾರರ ಪರ ವಕೀಲರು ಮೈ ಲಾರ್ಡ್, ದಯವಿಟ್ಟು ಮೂರು ನಿಮಿಷಗಳ ಕಾಲ ನನ್ನ ವಾದ ಆಲಿಸಿ ಎಂದು ಮನವಿ ಮಾಡಿಕೊಂಡರು. ಅದಕ್ಕೆ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ಈ ದೇಶದ ಪೀಠಿಕೆ ಏನು ಗೊತ್ತಾ ನಿಮಗೆ ಎಂದು ಪ್ರಶ್ನಿಸಿದ್ದರು.
ಆದರೇ, ಅರ್ಜಿದಾರರ ಪರ ವಕೀಲ ಸುರೇಶ್ ಪ್ರತಿಕ್ರಿಯಿಸಿ, ಜಾತ್ಯಾತೀತ. ಆದರೇ, ನನ್ನ ಆದರೆ ನನ್ನ ಧಾರ್ಮಿಕ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ವಾದಿಸಿದ್ದರು. ಆಗ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು, ಇದು ರಾಜ್ಯ ಸರ್ಕಾರದ ಕಾರ್ಯಕ್ರಮ. ರಾಜ್ಯವು ಎ, ಬಿ ಮತ್ತು ಸಿ ನಡುವೆ ಹೇಗೆ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ಹೇಳಿದ್ದರು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಯನ್ನು ಜಸ್ಟೀಸ್ ವಿಕ್ರಮನಾಥ್ ಅವರ ಪೀಠವು ವಜಾಗೊಳಿಸಿತು.
ಇದರಿಂದಾಗಿ ಸಾಹಿತಿ ಭಾನು ಮುಷ್ತಾಕ್ ಅವರು ಮೈಸೂರು ದಸರಾವನ್ನು ನಿಗದಿಯಂತೆ ಉದ್ಘಾಟಿಸುವ ಹಾದಿ ಸುಗಮವಾಗಿದೆ. ಹೈಕೋರ್ಟ್, ಸುಪ್ರೀಂಕೋರ್ಟ್, ಭಾನು ಮುಷ್ತಾಕ್ ರಿಂದ ದಸರಾ ಉದ್ಘಾಟಿಸುವ ಆಹ್ವಾನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿವೆ. ರಾಜ್ಯ ಕಾಂಗ್ರೆಸ್ ಸರ್ಕಾರದ ತೀರ್ಮಾನದಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಂಗ ನಿರಾಕರಿಸಿದೆ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್, ಭಾನು ಮುಷ್ತಾಕ್ ಆಯ್ಕೆಯಿಂದ ನಿಮ್ಮ ಯಾವ ಹಕ್ಕಿದೆ ಧಕ್ಕೆ ಬಂದಿದೆ ಎಂಬ ಪ್ರಶ್ನೆಯನ್ನು ಅರ್ಜಿದಾರರಿಗೆ ಕೇಳಿದ್ದು ವಿಶೇಷ. ಜೊತೆಗೆ ನಮ್ಮ ದೇಶವು ಜಾತ್ಯಾತೀತ ತತ್ವಕ್ಕೆ ಬದ್ದವಾಗಿರುವ ದೇಶ ಎಂದು ಹೇಳಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.