/newsfirstlive-kannada/media/media_files/2025/11/03/dk_shivakumar_venkateshwara-2025-11-03-07-55-44.jpg)
ನವೆಂಬರ್​ ಕ್ರಾಂತಿಗೆ ಕೌಂಟ್​​ಡೌನ್​, ಪಟ್ಟ ಬದಲಾಗುತ್ತಾ? ಇಲ್ವಾ? ಬದಲಾವಣೆ ಆಗುವ ಪಟ್ಟಕ್ಕೆ ವಾರಸ್ದಾರ್​​​ ಯಾರು? ಆಗೋದೇ ಇಲ್ಲ ಅಂದ್ರೆ ಡಿ.ಕೆ ಶಿವಕುಮಾರ್ ಮುಂದಿನ ನಡೆ ಏನು?. ಹೀಗೆ ನೂರಾರು ಪ್ರಶ್ನೆಗಳು ರಾಜ್ಯ ರಾಜಕೀಯದಲ್ಲಿ ಎದ್ದಿವೆ. ಇದರ ಮಧ್ಯೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ಎಂಬ ಪ್ರಾರ್ಥನೆ ವಿಪಕ್ಷ ಬಿಜೆಪಿಯಲ್ಲೂ ಮೊಳಗಿದೆ. ಇತ್ತ ಬಿಹಾರಿಗಳು ಡಿ.ಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.
ಸಿಎಂ ಖುರ್ಚಿಗೆ ಏರಲು ಡಿ.ಕೆ ಶಿವಕುಮಾರ್ ನವೆಂಬರ್‌ನಿಂದಲೇ ಪ್ರಯತ್ನ ಆರಂಭಿಸಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಸಿಎಂ ಸ್ಥಾನಕ್ಕೇರಲು ಶಿವಕುಮಾರ್ ಕಸರತ್ತು ನಡೆಸ್ತಿದ್ದಾರೆ ಎನ್ನಲಾಗ್ತಿದೆ. ಡಿಕೆ ಬಣ ಈಗಾಗಲೇ ಡಿಕೆಶಿಗೆ ಸಿಎಂ ಪಟ್ಟ ಕಟ್ಬೇಕು ಅಂತ ಹೇಳಿ ನೋಟಿಸ್ ಮೇಲೆ ನೋಟಿಸ್ ಪಡೆದುಕೊಂಡಿದೆ. ಇದೀಗ ಬಿಜೆಪಿಯಲ್ಲೂ ಡಿ.ಕೆ ಶಿವಕುಮಾರ್ ಪರ ಧ್ವನಿಯೊಂದು ಮೊಳಗಿದೆ.
/filters:format(webp)/newsfirstlive-kannada/media/media_files/2025/11/03/dk_shivakumar_muniraju-2025-11-03-07-55-59.jpg)
ವೆಂಕಟೇಶ್ವರನ ಮುಂದೆ ಶಾಸಕ ಮುನಿರಾಜು ಪ್ರಾರ್ಥನೆ
ಡಿಸಿಎಂ ಡಿ.ಕೆ ಶಿವಕುಮಾರ್ ನಿನ್ನೆ ಬೆಂಗಳೂರಿನ ಚಿಕ್ಕಬಾಣಾವರದ ರಾಮಚಂದ್ರ ದೇಗುಲ ಜೀರ್ಣೋದ್ಧಾರ, ಪುನಃ ಪ್ರತಿಷ್ಟಾಪನೆ, ವೆಂಕಟೇಶ್ವರಸ್ವಾಮಿ ನೂತನ ಸ್ಥಿರ ಬಿಂಬ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮುನಿರಾಜು ಕೂಡ ಉಪಸ್ಥಿತರಿದ್ದರು. ಇದೇ ವೇಳೆ ವೆಂಕಟೇಶ್ವರನ ಸನ್ನಿಧಿಯಲ್ಲಿ ಡಿ.ಕೆ ಶಿವಕುಮಾರ್ ಸಿಎಂ ಆಗಲಿ ಅಂತ ಬಿಜೆಪಿ ಶಾಸಕ ಮುನಿರಾಜು ಪ್ರಾರ್ಥಿಸಿದ್ದಾರೆ. ನಾನೊಬ್ಬ ಒಕ್ಕಲಿಗನಾಗಿ ಡಿ.ಕೆ ಶಿವಕುಮಾರ್ ಅವ್ರು ಸಿಎಂ ಆಗಲಿ ಅಂತ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.
ದೇವಸ್ಥಾನದಲ್ಲಿ ಜಾತಿ ಬಗ್ಗೆ ಮಾತು ಬೇಡ.. ನಾಗಲಕ್ಷ್ಮೀ ಚೌಧರಿ ಗರಂ
ಬಿಜೆಪಿ ಶಾಸಕ ಮುನಿರಾಜು ಮಾತಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜಕೀಯ ಹಾಗೂ ಜನಸೇವೆ ಮಾಡೋದ್ರಲ್ಲಿ ಜಾತಿ ವ್ಯವಸ್ಥೆ ಇಷ್ಟಪಡುವುದಿಲ್ಲ. ದೇವರ ಸನ್ನಿಧಿಯಲ್ಲಿ ಜಾತಿ ಬಗ್ಗೆ ಮಾತನಾಡ ಬಾರದು ಅಂತ ಅಸಮಾಧಾನ ಹೊರಹಾಕಿದ್ದಾರೆ.
/filters:format(webp)/newsfirstlive-kannada/media/media_files/2025/11/03/dk_shivakumar-2025-11-03-07-56-11.jpg)
ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ಎಂದ ಬಿಹಾರ ಸಮಾಜ
ನವೆಂಬರ್ ಕ್ರಾಂತಿಯ ಕಿಚ್ಚಿಗೆ ಬಿಹಾರ ಎಲೆಕ್ಷನ್​​ ಕೂಡ ತುಪ್ಪ ಸುರಿದಿದೆ. ಬಿಹಾರ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿರೋ ಬಿಹಾರದ ಮತದಾರರ ಮನವೊಲಿಸಲು ಇವತ್ತು ಡಿಕೆಶಿ ಹೆಬ್ಬಾಳದಲ್ಲಿ ಕಾರ್ಯಕ್ರಮ ಆಯೋಜಿಸಿದರು. ಈ ವೇಳೆ ಡಿ.ಕೆ ಶಿವಕುಮಾರ್ ಕಾರ್ಯವೈಖರಿ ಶ್ಲಾಘಿಸಿದ ಬಿಹಾರ ಸಮುದಾಯ, ಜೈಕಾರ ಹಾಕಿ ಸಿಎಂ ಆಗಬೇಕು ಅಂತ ಹಾರೈಸಿದೆ.
ಸಿದ್ದು-ಡಿಕೆ ಬಣದಲ್ಲಿ ಕುರ್ಚಿ ಕಿತ್ತಾಟ ನಡೆಯುತ್ತಿದೆ. ಇದೀಗ ಡಿಕೆ ಪರ ವಿಪಕ್ಷ ನಾಯಕರು ಬ್ಯಾಟ್ ಬೀಸಿದ್ದಾರೆ. ಬಿಹಾರಿಗಳು ಕನಕಪುರ ಕಲಿಯ ಮನದಾಸೆಗೆ ನೀರೆರಿದ್ದಾರೆ. ಇಷ್ಟೆಲ್ಲಾ ಒತ್ತಾಸೆಗಳ ಮಧ್ಯೆ ಹೈಕಮಾಂಡ್ ಡಿಕೆಗೆ ಸಿಎಂ ಪಟ್ಟ ಕಟ್ಟುತ್ತಾ? ಸಿದ್ದು ಕುರ್ಚಿ ಬಿಟ್ಟುಕೊಡ್ತಾರಾ? WHO KNOW.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us