ರಾಜ್ಯಪಾಲರನ್ನು ಅಡ್ಡಗಟ್ಟಿದ ಬಿ.ಕೆ.ಹರಿಪ್ರಸಾದ್ : ಜುಬ್ಬಾ ಹರಿದ ಭದ್ರತಾ ಸಿಬ್ಬಂದಿ

ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಇಂದು ಹೈಡ್ರಾಮಾವೇ ನಡೆದು ಹೋಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌, ಸರ್ಕಾರ ನೀಡಿದ್ದ ಭಾಷಣವನ್ನು ಪೂರ್ತಿ ಓದದೇ ಬರಿ ಒಂದು ಸಾಲಿನಲ್ಲಿ ಭಾಷಣ ಮಂಡಿಸಿ ಸದನದಿಂದ ನಿರ್ಗಮಿಸಿದ್ದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದ್ದರು.

author-image
Chandramohan
bk hari prasad cloth torned
Advertisment

ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿಲ್ಲ. ಬದಲಿಗೆ ಭಾಷಣವನ್ನು ಮಂಡಿಸಿ, ವಿಧಾನಮಂಡಲದಿಂದ ನಿರ್ಗಮಿಸಿದ್ದಾರೆ.  ಒಂದು ಸಾಲಿನ ಭಾಷಣವನ್ನು ಮಂಡಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಧಾನಮಂಡಲದಿಂದ ನಿರ್ಗಮಿಸಿದ್ದರು. 

ಇದರಿಂದ ಕೆರಳಿದ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ರಾಜ್ಯಪಾಲ ಥಾವರ್ ಚಂದ್  ಗೆಹ್ಲೋಟ್ ಅವರ ಎದುರು ನಿಂತು ನೀವು ಭಾಷಣವನ್ನು ಪೂರ್ತಿಯಾಗಿ ಓದಿ ಹೋಗಬೇಕೆಂದು ಆಗ್ರಹಿಸಿದ್ದರು.  ಈ ವೇಳೆ ರಾಜ್ಯಪಾಲರ  ಭದ್ರತಾ ಸಿಬ್ಬಂದಿ  ಬಿ.ಕೆ.ಹರಿಪ್ರಸಾದ್ ಅವರ ಪಕ್ಕಕ್ಕೆ ಸರಿಸಿ ರಾಜ್ಯಪಾಲರಿಗೆ ಮುಂದೆ ಹೋಗಲು ದಾರಿ ಮಾಡಿಕೊಡಲು ಯತ್ನಿಸಿದ್ದರು. ಈ ವೇಳೆ ಬಿ.ಕೆ.ಹರಿಪ್ರಸಾದ್ ಅವರ ಬಿಳಿ ಜುಬ್ಬಾದ ಕೆಳ ಭಾಗ ಸ್ವಲ್ಪ ಹರಿದಿದೆ. 
ಬಿಜೆಪಿ ಸದಸ್ಯರೇ ಹಿಂದಿನಿಂದ ತಮ್ಮ ಜುಬ್ಬಾವನ್ನು ಹರಿದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ರಾಜ್ಯಪಾಲ ಹುದ್ದೆಯಲ್ಲಿರುವ ಅಧಿಕಾರ, ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಕೊಟ್ಟು ಮಧ್ಯಪ್ರದೇಶಕ್ಕೆ ವಾಪಸ್ ಹೋಗಬೇಕು ಎಂದು ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ. 

bk hari prasad cloth torned (1)





ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Legislative Assembly special assembly session
Advertisment