/newsfirstlive-kannada/media/media_files/2025/08/25/dks-versus-bkh-2025-08-25-16-03-34.jpg)
MLC ಬಿ.ಕೆ.ಹರಿಪ್ರಸಾದ್ ರಿಂದ ರಾಹುಲ್ ಗಾಂಧಿ ಭೇಟಿ
ಇದು ಏನ್​ ಆಗುತ್ತೋ ಗೊತ್ತಿಲ್ಲ.. ಆದ್ರೆ, ಸಿಎಂ ಮತ್ತು ಡಿಸಿಎಂ ಡಿಕೆ ಬಣ ಬಡಿದಾಟ ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದಿದೆ.. ನಾಳೆ ರಾಹುಲ್​​​ ಗಾಂಧಿಯನ್ನ ಖರ್ಗೆ ಭೇಟಿ ಆಗ್ತಿದ್ದಾರೆ.. ಆದ್ರೆ, ಅದಕ್ಕೂ ಮೊದಲೇ ಮಂಗಳೂರಿನಿಂದ ಬಿ.ಕೆ.ಹರಿಪ್ರಸಾದ್​ ದಿಢೀರ್​​ ಡೆಲ್ಲಿ ಆಗಮಿಸಿ ರಾಹುಲ್​​​ ಭೇಟಿ ಮಾಡಿದ್ದಾರೆ.. ರಾಜ್ಯದ ಬೆಳವಣಿಗೆಗಳ ರಿಪೋರ್ಟ್​ ಮಾಡಿದ್ದಾರೆ.. ಇನ್ನೊಂದ್ಕಡೆ ಕುದುರೆ ವ್ಯಾಪಾರ ಆರೋಪ ಬಲಗೊಳ್ತಿದೆ..
ಕಾಂಗ್ರೆಸ್​​ ಅಂಗಳ ಈಗ ಕುಸ್ತಿ ಅಖಾಡವಾಗಿದೆ.. ಜಗಜಟ್ಟಿಗಳ ನಡುವೆ ತಂತ್ರ-ರಣತಂತ್ರಗಳ ಪ್ರಯೋಗ ಆಗ್ತಿದೆ.. ಕಾಂಗ್ರೆಸ್​ ಹೈಕಮಾಂಡ್​​ ಎಲ್ಲವನ್ನೂ ಡೆಲ್ಲಿಯಿಂದಲೇ ಸೂಕ್ಷ್ಮ ದರ್ಶಕ ಹಿಡಿದು ನೋಡ್ತಿದೆ.. ಈ ಎಲ್ಲಾ ಬೆಳವಣಿಗಳ ನಡುವೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್​, ಸೈಲೆಂಟ್ ಆಟ ರಾಜ್ಯ ಕಾಂಗ್ರೆಸ್​ನಲ್ಲಿ ಅಚ್ಚರಿ ಮತ್ತು ಕುತೂಹಲಕ್ಕೆ ಕಾರಣವಾಗಿದೆ..
ಸಿದ್ದು-ಡಿಕೆಶಿ ಬಣಗಳ ನಡುವೆ ಸಿಂಹಾಸನಕ್ಕೆ ಬಡಿದಾಟ!
ಸೈಲೆಂಟ್​​ ಆಗೇ ರಾಹುಲ್​ಗೆ ಹರಿಪ್ರಸಾದ್​ ರಿಪೋರ್ಟ್​​!
ಕರ್ನಾಟಕದ ಪಾಲಿಟಿಕ್ಸ್​​ಗೆ ಮೇಜರ್​ ಟ್ವಿಸ್ಟ್​ ಅಂದ್ರೆ ಇದೊಂದು ಭೇಟಿ.. 10 ಜನಪಥ್​​ನ ನಿಷ್ಠ ಬಿ.ಕೆ ಹರಿಪ್ರಸಾದ್​ ಇಟ್ಟ ಹೆಜ್ಜೆ ಹುಬ್ಬೇರಿಸಿದೆ.. ಮಂಗಳೂರು ಪ್ರವಾಸದಲ್ಲಿದ್ದ ಹರಿಪ್ರಸಾದ್​​​, ದಿಢೀರ್​​​ ದೆಹಲಿಗೆ ಬಂದು ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.. ಹರಿಪ್ರಸಾದ್​​ ಮೂಲಕ ರಾಜಕೀಯ ಚಟುವಟಿಕೆಗಳ ಬಗ್ಗೆ ರಾಹುಲ್​​​ ರಹಸ್ಯ ರಿಪೋರ್ಟ್​​ ಪಡೆದಿದ್ದಾರೆ ಎನ್ನಲಾಗಿದೆ..
ರಾಹುಲ್​​ಗೆ ಹರಿಪ್ರಸಾದ್​ ರಿಪೋರ್ಟ್​!
ಹರಿಪ್ರಸಾದ್​​ಗೆ ಸಮಯಕೊಟ್ಟು ಅಚ್ಚರಿ ಮೂಡಿಸಿದ ರಾಹುಲ್
ರಾಜ್ಯದ ವಿದ್ಯಮಾನಗಳ ವರದಿ ಒಪ್ಪಿಸಿದ ಹೈಕಮಾಂಡ್​​​ನ ನಿಷ್ಠ
ಶೀಘ್ರ ಎಲ್ಲಾ ಗೊಂದಲಗಳಿಗೆ ಬ್ರೇಕ್ ಹಾಕುವಂತೆ ಬಿಕೆ ಮನವಿ
ಡಿಕೆಶಿ ಬಣದ ದೆಹಲಿ ಭೇಟಿ ಹೆಚ್ಚಾದ್ರೆ ಸಿಎಂ ಬಣದಿಂದ ಒತ್ತಡ
ಈ ಎರಡು ಬಣಗಳ ಒತ್ತಡ ಹೆಚ್ಚಾದಲ್ಲಿ ಪಕ್ಷಕ್ಕೆ ಹೆಚ್ಚು ಡ್ಯಾಮೇಜ್
ಹೀಗಾಗಿ ಶೀಘ್ರವೇ ಅಂತಿಮ ತೀರ್ಮಾನಕ್ಕೆ ಬಂದು ಬ್ರೇಕ್​​​ ಹಾಕಿ
ಡಿಕೆಶಿ ಭೇಟಿಗೆ ಟೈಂ ಕೊಡದ ರಾಹುಲ್, ಹರಿಪ್ರಸಾದ್​​ಗೆ ಕೊಟ್ಟಿದ್ದು ಅಚ್ಚರಿ ಮೂಡಿಸಿದೆ.. ಹೈಕಮಾಂಡ್​​​ನ ನಿಷ್ಠ ಹರಿಪ್ರಸಾದ್, ರಾಜಕೀಯ ವಿದ್ಯಮಾನಗಳ ರಿಪೋರ್ಟ್​​ ನೀಡಿದ್ದಾರೆ.. ಶೀಘ್ರವೇ ಎಲ್ಲಾ ಗೊಂದಲಗಳಿಗೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದಾರೆ.. ಡಿಕೆ ಶಿವಕುಮಾರ್ ಬಣದ ದೆಹಲಿ ಭೇಟಿ ಹೆಚ್ಚಾದ್ರೆ ಸಿಎಂ ಸಿದ್ದರಾಮಯ್ಯನವರ ಬಣದಿಂದಲೂ ಒತ್ತಡ ಹೆಚ್ಚಾಗಬಹುದು. ಇದರಿಂದ ಪಕ್ಷಕ್ಕೆ ಹೆಚ್ಚು ಡ್ಯಾಮೇಜ್ ಆಗಲಿದೆ.. ಹೀಗಾಗಿ ಶೀಘ್ರವೇ ಅಂತಿಮ ತೀರ್ಮಾನಕ್ಕೆ ಬಂದು ಬಣ ರಾಜಕೀಯಕ್ಕೆ ಬ್ರೇಕ್ ಹಾಕಬೇಕು ಅಂತ ಮನವಿ ಮಾಡಿದ್ದಾರೆ ಅಂತ ಗೊತ್ತಾಗಿದೆ..
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪರಿಷತ್​​​ ಸದಸ್ಯ ಬಿಕೆ ಹರಿಪ್ರಸಾದ್​​​, ಎಲ್ಲವೂ ಸುಭೀಕ್ಷೆಯಾಗಿದೆ ಅಂತಷ್ಟೇ ಹೇಳಿ ತೆರಳಿದ್ರು..
/filters:format(webp)/newsfirstlive-kannada/media/post_attachments/wp-content/uploads/2023/12/B-K-hariprasad.jpg)
ಕಾಂಗ್ರೆಸ್​ನೊಳಗೆ ನಡೀತಿದ್ಯಂತೆ ಕುದುರೆ ವ್ಯಾಪಾರ!
ಶಾಸಕರ ಖರೀದಿ, ಬಿಜೆಪಿಯ ಸಂಸ್ಕೃತಿ ಡಿಕೆಶಿ ಡಿಚ್ಚಿ
ಇನ್ನು, ಕಾಂಗ್ರೆಸ್​​ನಲ್ಲೇ ಗದ್ದುಗೆ ಏರಲು ಕುದುರೆ ವ್ಯಾಪಾರ ನಡೆಯುತ್ತಿದೆ ಅಂತ ಬಿಜೆಪಿ ಗಂಭೀರ ಆರೋಪ ಮಾಡಿದೆ.. ನಿನ್ನೆ ಛಲವಾದಿ ನಾರಾಯಣಸ್ವಾಮಿ ಆಡಿದ್ದ ಮಾತಿಗೆ ವಿಜಯಪುರದಲ್ಲಿ ಸಂಸದ ಕಾರಜೋಳ, ವಿಪಕ್ಷ ನಾಯಕ ಅಶೋಕ್​​ ಧ್ವನಿಗೂಡಿಸಿದ್ದಾರೆ..
ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಆರೋಪಕ್ಕೆ ಅದು ಬಿಜೆಪಿ ಸಂಸ್ಕೃತಿ ಅದೇ ಅವರ ಪ್ರವೃತ್ತಿ ಅಂತ ಡಿಸಿಎಂ ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ..
ಒಟ್ಟಾರೆ, ಕಾಂಗ್ರೆಸ್​​ ಬಣ ಬಡಿದಾಟ ಜೋರಾಗ್ತಿದ್ರೆ, ಬಿಜೆಪಿ ಕಾದುನೋಡುವ ತಂತ್ರ ಅನುಸರಿಸ್ತಿದೆ.. ಒಂದ್ವೇಳೆ, ಕುದುರೆ ವ್ಯಾಪಾರಕ್ಕೆ ಸಾಕ್ಷಿಯ ಬಲ ಸಿಕ್ಕರೇ ಇ.ಡಿ ಎಂಟ್ರಿ ಆಗುವ ಸಾಧ್ಯತೆ ಇದ್ದು, ಕಾಂಗ್ರೆಸ್​​​ ರಾಷ್ಟ್ರಮಟ್ಟದಲ್ಲಿ ಮತ್ತೊಂದು ಅವಮಾನಕ್ಕೆ ತುತ್ತಾಗಲಿದೆ..
ಪೊಲಿಟಿಕಲ್​ ಬ್ಯೂರೋ, ನ್ಯೂಸ್​ಫಸ್ಟ್​
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us