Advertisment

ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಉದ್ಯಮಿ ಕಿರಣ್ ಮಜುಂದಾರ್ ಷಾ ಟೀಕೆ : ಸರ್ಕಾರದಿಂದ ಟೀಕೆಗೆ ಆಕ್ಷೇಪ

ಬಯೋಕಾನ್ ಕಂಪನಿಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಬೆಂಗಳೂರಿನ ರಸ್ತೆಗುಂಡಿಗಳು, ಕಸ ಸೇರಿದಂತೆ ಮೂಲಸೌಕರ್ಯ ಕೊರತೆ ಬಗ್ಗೆ ಮತ್ತೆ ಕಿಡಿಕಾರಿದ್ದಾರೆ. ಸರ್ಕಾರವೇಕೆ ಬೆಂಗಳೂರಿಗೆ ಮೂಲಸೌಕರ್ಯ ಒದಗಿಸುತ್ತಿಲ್ಲ ಎಂದು ಬೇರೆ ದೇಶದಿಂದ ಬಂದವರು ಕೇಳಿದ್ದರು ಎಂದಿದ್ದಾರೆ. ಆದರೇ, ಶಾ ಟೀಕೆಗೆ ಸರ್ಕಾರ ಆಕ್ಷೇಪಿಸಿದೆ.

author-image
Chandramohan
KIRAN MAJUMDAR SHAH VERSUS MB PATIL

ಉದ್ಯಮಿ ಕಿರಣ್ ಮಜುಂದಾರ್ ಶಾ ಮತ್ತು ಸಚಿವ ಎಂ.ಬಿ.ಪಾಟೀಲ್‌

Advertisment
  • ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಕಿರಣ್ ಮಜುಂದಾರ್ ಶಾ ಟೀಕೆ
  • ಕಿರಣ್ ಮಜುಂದಾರ್ ಶಾ ಟೀಕೆಗೆ ರಾಜ್ಯ ಸರ್ಕಾರದ ಆಕ್ಷೇಪ
  • ಕಿರಣ್ ಮಜುಂದಾರ್ ಶಾ ಟೀಕೆ ಮಾಡುವ ಉದ್ದೇಶ ಏನು ಎಂದ ಎಂ.ಬಿ.ಪಾಟೀಲ್‌

ಮತ್ತೆ ಬೆಂಗಳೂರು ರಸ್ತೆ ಮತ್ತು ಕಸದ ಬಗ್ಗೆ ಉದ್ಯಮಿ ಕಿರಣ್ ಮಜುಂದರ್ ಶಾ ಕಿಡಿಕಾರಿದ್ದಾರೆ.  ತಮ್ಮ ಎಕ್ಸ್ ಖಾತೆಯಲ್ಲಿ ತಮಗಾದ ಘಟನೆಯ ಬಗ್ಗೆ ಪ್ರಸ್ತಾಪಿಸಿ ಸಿಎಂ, ಮತ್ತು ಸಚಿವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಬಯೋಕಾನ್ ಪಾರ್ಕ್‌ಗೆ ಭೇಟಿ ನೀಡಿದ ವಿದೇಶಿ ಉದ್ಯಮಿಯೊಬ್ಬರು ಇಲ್ಲಿನ ರಸ್ತೆಗಳು ಏಕೆ ಇಷ್ಟೊಂದು ಕೆಟ್ಟದಾಗಿವೆ ಮತ್ತು ಸುತ್ತಲೂ ಇಷ್ಟೊಂದು ಕಸ ಏಕೆ ಇದೆ? ಸರ್ಕಾರ ಹೂಡಿಕೆಯನ್ನು ಬೆಂಬಲಿಸಲು ಬಯಸುವುದಿಲ್ಲವೇ? ನಾನು ಚೀನಾದಿಂದ ಬಂದಿದ್ದೇನೆ, ಭಾರತದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳಿಗೆ ಅನುಕೂಲಕರವಾಗಿದ್ದಾಗ  ಭಾರತವು ತನ್ನ ಕ್ರಮವನ್ನು ಏಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ?’ ಎಂದು ಕೇಳಿದ್ದಾರೆ ಎಂದು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

Advertisment



ಕಿರಣ್ ಮಜುಂದಾರ್ ಶಾ  ಬಗ್ಗೆ ಸಚಿವ ಎಂ.ಬಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಿರಣ್ ಮಜುಂದಾರ್ ಅವರು ಬೆಂಗಳೂರಿಗೆ ಸಾಕಷ್ಟು ಬಯೋ ಟೆಕ್ನಾಲಜಿ ಕಾಣಿಕೆ ಕೊಟ್ಟಿದ್ದಾರೆ. ಬೆಂಗಳೂರು ಕೂಡ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಮಳೆಯಿಂದ ರಾಜ್ಯದಲ್ಲಿ ನ್ಯಾಷನಲ್ ಹೈವೇ, ಸ್ಟೇಟ್ ಹೈವೇ, ಅಂಗನವಾಡಿಗಳಲ್ಲೂ ಅನಾಹುತ ಆಗಿವೆ. ನಾನು ಕೂಡ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಮೂಲಭೂತ ಸೌಕರ್ಯಗಳ ಹಾನಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಬೆಂಗಳೂರಿನ‌ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಇದಕ್ಕಾಗಿಯೇ ಒಂದು ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಹಾಗಾಗಿ ಗುಂಡಿ ಸಂಪೂರ್ಣವಾಗಿ ಮುಚ್ಚಲು ಸ್ವಲ್ಪ ಸಮಯ ಬೇಕು. ಬೆಂಗಳೂರಿಗೆ ಬೇರೆ ಕಡೆಗಳಿಂದ ಸಾಕಷ್ಟು ಮಂದಿ ಬಂದು‌ ನೆಲೆಸಿದ್ದಾರೆ. ನಾವು ನಮ್ಮ ಕೆಲಸವನ್ನು ಮಾಡ್ತಿದ್ದೇವೆ. ಪದೇ ಪದೇ ಕಿರಣ್ ಮಜುಂದಾರ್‌  ಶಾ ಮಾತಾಡುವ ಉದ್ದೇಶವಾದರೂ ಏನು ? ಎಂದು ಪ್ರಶ್ನಿಸಿದ್ದಾರೆ. 
 ಮೋಹನ್ ದಾಸ್ ಪೈಗೂ ಕರ್ನಾಟಕ ರಾಜ್ಯ ಎಲ್ಲವನ್ನೂ ಕೊಟ್ಟಿದೆ. ಬೇರೆ ರಾಜ್ಯಗಳ ಮಂತ್ರಿಗಳು ಈ ಕಡೆ ಬನ್ನಿ ಅಂದರೆ ಯಾರು ಹೋಗ್ತಾರೆ ? ಇನ್ನೂ ಬೇರೆ ಕಡೆಗಳಿಂದಲೇ ಈ ಕಡೆ ಉದ್ಯಮಿಗಳು ಬರುತ್ತಾರೆ. ರಾಜ್ಯದಿಂದ ಯಾರೂ ಕೂಡ ಹೊರಗೆ ಹೋಗುವುದಿಲ್ಲ. ಬಿಜೆಪಿಯವರು ಇದ್ದಾಗ ಏನು ಬದನೆಕಾಯಿ ಮಾಡಿದ್ದಾರಾ ?. ಮಳೆಗಾಲದಲ್ಲಿ ಟಾರ್ ಹಾಕಬಾರದು. ಈಗ ಅನಿವಾರ್ಯವಾಗಿ ಗುಂಡಿ ಮುಚ್ಚಲೇಬೇಕು ಎಂದು ಕೈಗಾರಿಕಾ ಖಾತೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. 


ಇನ್ನೂ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ಟೀಕೆಗೆ ಬೆಂಗಳೂರು ನಗರಾಭಿವೃದ್ದಿ ಖಾತೆ ಸಚಿವ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಪ್ರತ್ಯುತ್ತರ ನೀಡಿದ್ದಾರೆ. ಬೆಂಗಳೂರು ಅವಕಾಶ, ಐಡೆಂಟಿಟಿ ಮತ್ತು ಸಕ್ಸಸ್ ಅನ್ನು ಮಿಲಿಯನ್ ಗಟ್ಟಲೇ ಜನರಿಗೆ ನೀಡಿದೆ. ಬೆಂಗಳೂರಿನ ಅಭಿವೃದ್ದಿಗೆ ಸಾಮೂಹಿಕ ಪ್ರಯತ್ನ ಬೇಕೇ ಹೊರತು ನಿರಂತರ ಟೀಕೆಯಲ್ಲ ಎಂದು ಹೇಳಿದ್ದಾರೆ. 

Advertisment




ಇನ್ನೂ ಕಿರಣ್ ಮಜುಂದಾರ್ ಶಾ ಟೀಕೆಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಪ್ರತ್ಯುತ್ತರ ನೀಡಿದ್ದಾರೆ. ಬೆಂಗಳೂರಿನ ಯಾವ ಭಾಗವನ್ನು ಅವರು ನೋಡಿದ್ದಾರೋ ನನಗೆ ಗೊತ್ತಿಲ್ಲ. ಕೆಲಸಗಳು ಪ್ರಗತಿಯಲ್ಲಿವೆ. ನಾವು ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದೇವೆ. ಮೂಲಸೌಕರ್ಯ ಬೆಳವಣಿಗೆಗೆ ಯಾವುದು ಅಗತ್ಯವೋ ಅದನ್ನು ನಾವು ಮಾಡುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 



ವಿಧಾನಸೌಧದಲ್ಲಿ ಮಲ್ಲೇಶ್ವರದ  ಬಿಜೆಪಿ ಶಾಸಕ  ಅಶ್ವತ್ಥ್ ನಾರಾಯಣ್ ಮಾತನಾಡಿದ್ದಾರೆ.    ಅಧಿಕಾರ ದುರ್ಬಳಕೆ, ಪ್ರತಿದಿನ ಭ್ರಷ್ಟಾಚಾರ, ಹಣ ಮಾಡ್ಕೊಳ್ಳೋಕೆ ಸಮಯ ಕೊಟ್ಟಿದ್ದಾರೆ. ಬೆಂಗಳೂರಲ್ಲಿ ಎಲ್ಲೂ ನೋಡಿದ್ರು ಕತ್ತಲು, ಕಸ, ಗುಂಡಿ, ಅವ್ಯವಸ್ಥೆ. ಎಲ್ಲವೂ ದುಬಾರಿ ಮಾಡಿ ಮೆಟ್ರೋದಲ್ಲಿ ದರ ಏರಿಕೆ ಮಾಡಿ, ಬೆಂಗಳೂರು  ಅನ್ನೇ  ನಿರ್ನಾಮ ಮಾಡಿದ್ದಾರೆ. ಕಿರಣ್ ಮಜುಂದಾರ್ ಷಾ, ಮೋಹನ್ ದಾಸ್ ಪೈ ಸಾಕಷ್ಟು ಬಾರಿ ಹೇಳಿದ್ದಾರೆ. ಆದರೆ ಇವರಿಗೆ ಸರ್ಕಾರ ಬೆದರಿಸುವ ಕೆಲಸ ಮಾಡ್ತಿದ್ದಾರೆ. ನೀವೆಲ್ಲರೂ ಬಿಜೆಪಿಯವರು, ಬೇಕಿದ್ರೆ ಇರೀ,  ಇಲ್ಲ ಅಂದರೆ ಜಾಗ ಖಾಲಿ ಮಾಡು ಅಂತಿದ್ದಾರೆ. ನಿಜಕ್ಕೂ ನಮಗೆ ಅವಮಾನ, ನಾಡಿನ ಜನಕ್ಕೆ ಅನ್ಯಾಯ ಮಾಡ್ತಿದ್ದಾರೆ. ಇವರಿಂದ ಬೆಂಗಳೂರಿನ ಎಲ್ಲರೂ ಹತಾಶರಾಗಿದ್ದಾರೆ. ನಮ್ಮನ್ನು ಕಷ್ಟಕ್ಕೆ ಸಿಲುಕಿಸಿ, ಕಷ್ಟದಲ್ಲಿ ಜೀವನ ನಡೆಸೋ ರೀತಿ ಮಾಡಿದ್ದಾರೆ. ಈಗಾಲಾದರೂ  ಒಳ್ಳೆಯ ಕೆಲಸ ಮಾಡಿ ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಹೇಳಿದ್ದಾರೆ. 
ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.  ಹಿಂದೆ ನಮ್ಮ ಕಾಲದಲ್ಲೂ ಮಜುಂದಾರ್ ಷಾ, ಮೋಹನ್  ದಾಸ್ ಪೈ ಎಲ್ಲರೂ ಸರ್ಕಾರಕ್ಕೆ ಚಾಟಿ ಬೀಸಿದ್ರು. ಅವಾಗ ನೀವು ಎಷ್ಟು ಮಾತಾಡಿದ್ರಿ..? ಅವತ್ತು ನಾವು ಯಾರು ಉದ್ಯಮಿಗಳನ್ನು ಹೊರಗೆ ಹೋಗಿ ಎಂದಿಲ್ಲ.  ಆದರೆ ನೀವು ಇವತ್ತು ಧಮ್ಕಿ ಹಾಕ್ತಿದ್ದಾರೆ. ಮೋಹನ್‌ದಾಸ್ ಪೈ ಗೆ ನಟ್ ಬೋಲ್ಟ್ ಟೈಟ್ ಮಾಡುವ ಪ್ರಯತ್ನ ಮಾಡ್ತಿದ್ದೀರಿ ಎಂದು ಯಲಹಂಕ ಕ್ಷೇತ್ರದ ಶಾಸಕ ಎಸ್‌.ಆರ್‌.ವಿಶ್ವನಾಥ್ ಹೇಳಿದ್ದಾರೆ. 

Advertisment


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Kiran majumdar shah criticises Bangalore infrastructure
Advertisment
Advertisment
Advertisment