Advertisment

2026-27 ರಲ್ಲಿ 1.32 ಲಕ್ಷ ಕೋಟಿ ರೂ. ಸಾಲ ಪಡೆಯಲು ನಿರ್ಧಾರ- ಒಟ್ಟು ಸಾಲ 8.24 ಲಕ್ಷ ಕೋಟಿ ರೂ.ಗೆ ಏರಿಕೆ!

ರಾಜ್ಯ ಸರ್ಕಾರದಿಂದ ವರ್ಷದಿಂದ ವರ್ಷಕ್ಕೆ ಪಡೆಯುವ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರದ ಸಾಲದ ಪ್ರಮಾಣ 7 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಈಗ 2026-27 ರಲ್ಲಿ 1.32 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಲಾಗುತ್ತಿದೆ. ಒಟ್ಟು ಸಾಲ 8.24 ಲಕ್ಷ ಕೋಟಿ ರೂ.ಗೆ ಏರಿಕೆಯಾಗುತ್ತಿದೆ.

author-image
Chandramohan
state govt loans
Advertisment

2026-27 ರಲ್ಲಿ ರಾಜ್ಯ ಸರ್ಕಾರವು 1,32190 ಕೋಟಿ ರೂಪಾಯಿ ಸಾಲ ಪಡೆಯಲು ನಿರ್ಧರಿಸಿದೆ. ಕೇಂದ್ರ ಸರ್ಕಾರದಿಂದ 6,810 ಕೋಟಿ ರೂಪಾಯಿ, ಓಪನ್ ಮಾರ್ಕೆಟ್ ನಿಂದ 1,22,340 ಕೋಟಿ ರೂಪಾಯಿ, ಎಲ್‌ಐಸಿ, ಎನ್‌ಎಸ್‌ಎಸ್‌ಎಫ್‌, ಎನ್‌ಸಿಡಿಸಿ, ಆರ್‌ಐಡಿಎಫ್ ನಿಂದ 2,850 ಕೋಟಿ ರೂಪಾಯಿ, ಮಿಸಲೇನಿಯಸ್‌ ಬಂಡವಾಳ ಸ್ವೀಕೃತಿಯ ಮೂಲಕ 23 ಕೋಟಿ ರೂಪಾಯಿ, ಲೋನ್ ರಿಕವರಿ ಮತ್ತು ಅಡ್ವಾನ್ಸ್ ಮೂಲಕ 167 ಕೋಟಿ ರೂಪಾಯಿ ಸಾಲ ಸೇರಿದಂತೆ ಒಟ್ಟಾರೆ 2026-27 ನೇ ಸಾಲಿಗೆ 1.32 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. 
2025-26 ನೇ ಸಾಲಿನಲ್ಲಿ ರಾಜ್ಯ ಸರ್ಕಾರವು 1,16,170 ಕೋಟಿ ರೂಪಾಯಿ ಸಾಲ ಪಡೆದಿತ್ತು. 
ಇದರಿಂದಾಗಿ ಕರ್ನಾಟಕ ರಾಜ್ಯದ ಒಟ್ಟು ಸಾಲವು 8,24,389 ಕೋಟಿ ರೂಪಾಯಿಗೆ ಏರಿಕೆಯಾಗಿದೆ. 

Advertisment

ಇನ್ನೂ 2026-27 ನೇ ಸಾಲಿನಲ್ಲಿ ಬಜೆಟ್ ಗಾತ್ರವಾದ 4.48 ಲಕ್ಷ ಕೋಟಿ ರೂಪಾಯಿ ಹಣವನ್ನು ಯಾವ್ಯಾವುದಕ್ಕೆ ವೆಚ್ಚ ಮಾಡಲಾಗುತ್ತೆ ಎಂದು ಬಜೆಟ್ ನಲ್ಲಿ ಉಲ್ಲೇಖಿಸಲಾಗಿದೆ. 
ಬಂಡವಾಳ ವೆಚ್ಚ-  71,924 ಕೋಟಿ ರೂಪಾಯಿ
ಕೇಂದ್ರ ಸರ್ಕಾರದ ಸಾಲ ಮರು ಪಾವತಿ-2,700 ಕೋಟಿ ರೂಪಾಯಿ
ಮಾರ್ಕೆಟ್ ಸಾಲ ಮರುಪಾವತಿಗೆ- 29,007 ಕೋಟಿ ರೂಪಾಯಿ
ಎಲ್‌ಐಸಿ, ಎನ್‌ಎಸ್‌ಎಸ್‌ಎಫ್‌, ಎನ್‌ಸಿಡಿಸಿ ಸಾಲ ಮರುಪಾವತಿ- 3,609 ಕೋಟಿ ರೂ.
ಲೋನ್ ಮತ್ತು ಅಡ್ವಾನ್ಸ್ ವಿತರಣೆ- 2,757 ಕೋಟಿ ರೂಪಾಯಿ
  ಒಟ್ಟಾರೆ---1,09,998 ಕೋಟಿ ರೂಪಾಯಿ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SIDDU BUDGET 2026 Siddaramaiah 17th budget Karnataka Budget 2026 budget 2026 Karnataka state budget
Advertisment
Advertisment
Advertisment