Advertisment

ನವೆಂಬರ್ 15ರಿಂದ 20ರೊಳಗೆ ಸಿಎಂ, ಡಿಕೆಶಿ ಭವಿಷ್ಯ ನಿರ್ಧಾರ! : ನವಂಬರ್‌ 15ರಂದು ಸಿಎಂ ದೆಹಲಿಗೆ ಹೈವೋಲ್ಟೇಜ್‌ ಭೇಟಿ

ನವಂಬರ್ 15 ರಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ದೆಹಲಿ ಭೇಟಿಯ ವೇಳೆ ಕಾಂಗ್ರೆಸ್ ಹೈಕಮ್ಯಾಂಡ್ ಅನೇಕ ಮಹತ್ವದ ತೀರ್ಮಾನ ಕೈಗೊಳ್ಳಲಿದೆ. ಈ ಭೇಟಿಯ ವೇಳೆಯೇ ಸಿಎಂ, ಡಿಸಿಎಂ , ಸಚಿವರ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ.

author-image
Chandramohan
cm siddu and mb patil

ನವಂಬರ್ 15 ರಂದು ದೆಹಲಿಗೆ ಭೇಟಿ ನೀಡುವ ಸಿಎಂ ಅಂಡ್ ಟೀಮ್‌

Advertisment

ರಾಜ್ಯ ರಾಜಕೀಯದಲ್ಲಿ ಈಗ ಕ್ರಾಂತಿಯದ್ದೇ ಸದ್ದು..ಆ ಸದ್ದು ನವಂಬರ್​​ನಲ್ಲಿ ಇನ್ನೇನು ಜೋರಾಗ್ಬೇಕು ಅನ್ನೋ ಹೊತ್ತಲ್ಲೇ ಡಾಕ್ಟರ್ ಯತೀಂದ್ರ ಕೊಟ್ಟ ಡೋಸ್​ ಕಾಂಗ್ರೆಸ್​ನೊಳಗಿನದ್ದೇ ಇನ್ನೊಂದು ಪಾಳಯವನ್ನ ಶೇಕ್​ ಮಾಡಿಬಿಟ್ಟಿದೆ..ಇಬ್ಬರ ನಡುವೆ ಮಾತ್ರ ನಡೀತಿದ್ದ ಸಿಎಂ ಕುರ್ಚಿಯ ಮ್ಯೂಸಿಕಲ್​ ಚೇರ್​ಗೆ ಬೆಳಗಾವಿಯ ಸಾಹುಕಾರನ ಅಧಿಕೃತ ಎಂಟ್ರಿಯಾಗಿದೆ..ಬೆಳಗಾವಿ ಬ್ರಹ್ಮಾಸ್ತ್ರ ಪ್ರಯೋಗವಾಗ್ತಿದ್ದಂತೆ, ಅತ್ತ ದೆಹಲಿಯಲ್ಲೂ ದಾಳ ಉರುಳಿಸಲು ಸಿದ್ದು ರೆಡಿಯಾಗ್ತಿದ್ದಾರೆ..ಹಾಗಾದ್ರೆ, ಸಿಎಂ ಕುರ್ಚಿಗಾಗಿ ಸಿದ್ದು-ಡಿಕೆಶಿ  ಎರಡೂ ಬಣಗಳಲ್ಲೂ ನಡೀತಿರೋ ಆಟ ಹೇಗಿದೆ? ಈ ರಿಪೋರ್ಟ್ ಓದಿ. 

Advertisment

ದೀಪಾವಳಿ ಮುಗಿದು ಇನ್ನೂ 3 ದಿನ ಕೂಡ ಆಗಿಲ್ಲ..ಅಷ್ಟರಲ್ಲಾಗಲೇ ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿಡಿಸಿರೋ ಬಾಂಬ್​ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ..ತಮ್ಮ ತಂದೆ ಸಿದ್ದರಾಮಯ್ಯನವರು ರಾಜಕಾರಣದ ಕೊನೆಗಾಲದಲ್ಲಿದ್ದಾರೆ, ಅವರ ಬಳಿಕ ಸಿದ್ದರಾಮಯ್ಯನವರ ಸೈದ್ಧಾಂತಿಕ ಉತ್ತರಾಧಿಕಾರಿಯಾಗಲು, ಸಚಿವ ಸತೀಶ್​ ಜಾರಕಿಹೊಳಿಯವರು  ಅರ್ಹರು ಅಂತಾ ಹೇಳಿದ್ದು, ಎಲ್ಲರ ಹುಬ್ಬೇರಿಸಿದೆ..ಹಾಗಾದ್ರೆ, ಸಿದ್ದರಾಮಯ್ಯನವರ ಬಳಿಕ ಮುಂದೆ ಸಿಎಂ ಅಂತಾ ಆದ್ರೆ ಅದು ಜಾರಕಿಹೊಳಿಯವರಾ? ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೋದಿಲ್ವಾ ಎಂಬ ಪ್ರಶ್ನೆಗಳನ್ನ ಹಲವರು ಕೇಳ್ತಿದ್ದಾರೆ..ಬಟ್, ಈಗ ತುಂಬಾ ಕುತೂಹಲ ಮೂಡಿಸಿರೋದು ಅಂದ್ರೆ, ಡಿಸಿಎಂ ಡಿಕೆಶಿಕುಮಾರ್​ರವರ ನಡೆ ಮುಂದಿನ ದಿನಗಳಲ್ಲಿ ಹೇಗಿರುತ್ತೆ ಅನ್ನೋದು..ಮುಖ್ಯಮಂತ್ರಿಗಳ ಪುತ್ರನೇ ಉತ್ತರಾಧಿಕಾರಿಯ ಸ್ಟೇಟ್​​ಮೆಂಟ್​ ಕೊಟ್ಟಿರೋದ್ರಿಂದ ಸಹಜವಾಗಿಯೇ, ಈ ಹೇಳಿಕೆ ರಾಜ್ಯ ರಾಜಕಾರಣದ ಕುರ್ಚಿ ಕದನದ್ಲಿ ದೊಡ್ಡ ತಿರುವನ್ನೇ ಕೊಟ್ಟಿದೆ..ಮುಖ್ಯಮಂತ್ರಿ ರೇಸ್​ನಲ್ಲಿ ಮುಂಚೂಣಿಯಲ್ಲಿರುವ ಡಿಕೆ ಶಿವಕುಮಾರ್ ಅಕ್ಷರಶಃ ಕ್ರುದ್ಧಗೊಂಡಿದ್ದಾರೆ..

"ಯಾರ್ ಹತ್ರ ಮಾತಾಡ್ಬೇಕೋ ಅವರ ಹತ್ರ ಮಾತಾಡ್ತೀನಿ"
ಈಗ ನಾನ್​ ಮಾತಾಡಲ್ಲ ಅಂತಾ ಡಿಸಿಎಂ ಡಿಕೆ ಬೇಸರ! 
ಸಿಎಂ ಕುರ್ಚಿ ಸಂಬಂಧ ಈ ಹಿಂದೆ ನಡೆದಿರೋ ಕೆಲವು ಘಟನೆಗಳನ್ನ ನೀವು ಸೂಕ್ಷ್ಮವಾಗಿ ಗಮನಿಸಿರಬಹುದು...ಡಿಕೆ ಶಿವಕುಮಾರ್ ಬಣದ ಶಾಸಕರು ಡಿಕೆ  ಶಿವಕುಮಾರ್​ ಸಿಎಂ ಅಗ್ಬೇಕು ಅಂತಾ ಹೇಳ್ತಿದ್ದಂತೆ, ಕೆಪಿಸಿಸಿಯಿಂದ ಅವ್ರಿಗೆ ನೋಟೀಸ್ ನೀಡಿ ಬಾಯಿ ಮುಚ್ಚಿಸಲಾಗ್ತಿತ್ತು...ಆದ್ರೆ, ಈಗ ಡಿಕೆ ಶಿವಕುಮಾರ್ ಬಣದ ಶಾಸಕರು ಕೇಳ್ತಿರೋ ಪ್ರಶ್ನೆ ಏನಂದ್ರೆ, ನಾಯಕತ್ವ ವಿಚಾರವಾಗಿ ಮಾಡನಾಡುವ ಹಾಗಿಲ್ಲ ಅಂತಾ ಹೈಕಮಾಂಡ್​​ನಿಂಧ ಕಟ್ಟಪ್ಪಣೆ ಇದ್ರೂ ಯತೀಂದ್ರ ಮಾತನಾಡಿದ್ದಾರೆ..ಸುಮ್ಮನೆ ಗೊಂದಲ ಸೃಷ್ಟಿಸುತ್ತಿದ್ದಾರೆ, ಅವರಿಗೆ ನೋಟಿಸ್​ ಕೊಡೋದಿಲ್ವಾ ಅನ್ನೋ ಪ್ರಶ್ನೆ ಮುಂದಿಟ್ಟಿದ್ದಾರೆ..ಸಿಕ್ಕಿರೋ ಮಾಹಿತಿ ಪ್ರಕಾರ ಯತೀಂದ್ರ ಹೇಳಿಕೆಗೆ ಡಿಸಿಎಂ ಡಿ.ಕೆ‌.ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಅಂತಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣ್​ದೀಪ್​ ಸುರ್ಜೇವಾಲಾ ಬಳಿಯೂ ಯತೀಂದ್ರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರಂತೆ..ಡಿಸಿಎಂ ಡಿಕೆಶಿವಕುಮಾರ್​​ರವರ ಬೇಸರ, ಅವರು ಕೊಟ್ಟ ರಿಯಾಕ್ಷನ್​ನಲ್ಲೇ ಚೆನ್ನಾಗಿ ಕಾಣುತ್ತೆ. 
ಈಗ ನಾನು ಮಾತನಾಡೋದಕ್ಕೆ ಹೋಗೋದಿಲ್ಲ..ನಾನ್​ ಯಾರ್ ಹತ್ರ ಮಾತಾಡ್ಬೇಕೋ ಅವರ ಹತ್ರ ಮಾತಾಡ್ತೀನಿ ಅಂತಾ ಹೇಳಿರೋ ಡಿಕೆ ಶಿವಕುಮಾರ್​​ರವರ ಮುಖದಲ್ಲಿ ಬೇಸರ ಸಹಜವಾಗಿಯೇ ಕಾಣ್ತಿದೆ..ಇನ್ನು, ಸಿಕ್ಕಿರೋ ಮಾಹಿತಿ ಪ್ರಕಾರ ಯತೀಂದ್ರ ಹೇಳಿಕೆ ಬಗ್ಗೆ ಹೈಕಮಾಂಡ್​​ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ವರದಿ ಸಲ್ಲಿಸಲ್ಲಿದ್ದಾರಂತೆ..ಈ ಮೂಲಕ ಹೈಕಮಾಂಡ್​ ಮಟ್ಟದಲ್ಲೂ ಯತೀಂದ್ರ ಹಾಕಿದ ಬಾಂಬ್​ ಸದ್ದು ಮಾಡೋದು ಶತಸಿದ್ಧ.. 

ಯತೀಂದ್ರ ಬಾಂಬ್​ ಬೆನ್ನಲ್ಲೇ ‘ಕುರ್ಚಿ’ ಕದನದ ಕ್ಲೈಮ್ಯಾಕ್ಸ್ ಫಿಕ್ಸ್​! 
ನವೆಂಬರ್ 15ರಿಂದ 20ರೊಳಗೆ ಸಿಎಂ, ಡಿಕೆಶಿ ಭವಿಷ್ಯ ನಿರ್ಧಾರ! 
ಯತೀಂದ್ರ ಹೇಳಿಕೆ ದೊಡ್ಡ ಸಂಚಲನ ಸೃಷ್ಟಿಸೋದಕ್ಕೆ ಪ್ರಮುಖ ಕಾರಣ ಅಂದ್ರೆ ಅದು ಟೈಮ್​..ಸರ್ಕಾರ ಎರಡೂವರೆವರ್ಷ ಪೂರೈಸ್ತಿರೋ ಈ ಸಮಯದಲ್ಲಿ, ಅದ್ರಲ್ಲೂ ತೆರೆಮರೆಯಲ್ಲಿ ಸಿದ್ದು-ಡಿಕೆಶಿ ಮಧ್ಯೆ ಅಧಿಕಾರ ಹಂಚಿಕೆಯ ಗುದ್ದಾಟ ನಡೆಯೋ ಹೊತ್ತಲ್ಲಿ, ಯತೀಂದ್ರ ಸತೀಶ್​‘ ಜಾರಕಿಹೊಳಿಯವ್ರಿಗೆ ಬಹುಪರಾಕ್​ ಯಾಕ್​ ಹೇಳಿದ್ರು ಅನ್ನೋದು ಸಹಜವಾಗಿ ಕಾಡುವ ಪ್ರಶ್ನೆ.ಇದನ್ನ ನೋಡ್ತಿದ್ರೆ, ಸಿದ್ದರಾಮಯ್ಯ ನವಂಬರ್​​ ಮುಗೀತಿದ್ದಂತೆ ಸಿಎಂ ಕುರ್ಚಿಯಿಂದ ಕೆಳಗಿಳೀತಾರಾ ಅನ್ನೋ ಇನ್ನೊಂದು ಪ್ರಶ್ನೆ ಹುಟ್ಟದೇ ಇರೋದಿಲ್ಲ..ಸಿದ್ದು ಕೆಳಗಿಳೀತಾರೋ ಇಲ್ವೋ, ಅದಿನ್ನೂ ಕ್ಲ್ಯಾರಿಟಿ ಇಲ್ಲ..ಆದ್ರೆ, ಸಿಎಂ, ಡಿಕೆಶಿ ಮಧ್ಯೆ ನಡೀತಿರೋ ಕುರ್ಚಿ ಫೈಟ್​​ಗೆ ಮುಹೂರ್ತವಂತೂ ಫಿಕ್ಸ್​ ಆಗಿರೋ ಬಿಗ್​ ಎಕ್ಸ್​​ಕ್ಲೂಸಿವ್​ ಸುದ್ದಿ ನ್ಯೂಸ್​​ಫಸ್ಟ್​​ಗೆ ಸಿಕ್ಕಿದೆ...ಹಾದ್ರೆ, ನವಂಬರ್​ 15ರಿಂದ 20ರೊಳಗೆ  ನಡೆಯೋ ಆ ಕುರ್ಚಿ ಕದನದ ಕ್ಲೈಮ್ಯಾಕ್ಸ್​ ಹೇಗ್​ ನಡೆಯುತ್ತೆ? ಸಿದ್ದರಾಮಯ್ಯ-ಡಿಕೆಶಿ ಎರಡೂ ಬಣಗಳಲ್ಲೂ ಚಟುವಟಿಕೆಗಳು ಗರಿಗೆದರಿದ್ದು, ಏನೆಲ್ಲಾ ನಡೆಯುತ್ತೆ‘? ಈಗ ವಿವರಿಸುತ್ತೇವೆ.

ನವೆಂಬರ್​ 15ರಂದು ದೆಹಲಿಯತ್ತ ಸಿಎಂ ಸಿದ್ದು ದೌಡು!
12ರಿಂದ 15 ಹೊಸ ಸಚಿವರ ಪಟ್ಟಿಯೊಂದಿಗೆ ಪ್ರಯಾಣ
 ನ್ಯೂಸ್ ಫಸ್ಟ್ ಗೆ    ಸಿಕ್ಕಿರೋ ಮಾಹಿತಿ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನವಂಬರ್ 15ನೇ ತಾರೀಖು ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರಂತೆ..ನವಂಬರ್​ 15ರಿಂದ 20ನೇ ತಾರೀಖಿನ ಒಳಗೆ ಸಿಎಂ ದೆಹಲಿಗೆ  ಭೇಟಿ ಕೊಟ್ಟಿದ್ದಾದ್ರೂ ಯಾವ ಕಾರಣಕ್ಕೆ ಅನ್ನೋ ಕ್ಲ್ಯಾರಿಟಿ ಸಿಕ್ಕಿಬಿಡುತ್ತೆ..ಸಂಪುಟ ವಿಸ್ತರಣೆಯೋ ಅಥವಾ ಪುನರ್​ ರಚನೆಯೋ ಇಲ್ಲ ಸಿಎಂ ಸ್ಥಾನದ ಬದಲಾವಣೆಯೋ ಅನ್ನೋದು ಗೊತ್ತಾಗಿಬಿಡುತ್ತೆ..ದೆಹಲಿಗೆ ತೆರಳಲಿರುವ  ಸಿಎಂ ಅಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಕಪಿಲ್​ ಸಿಬಲ್​ರವರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ..ಇದೇ ವೇಳೆ ಹೈಮಾಂಡ್​ ನಾಯಕರನ್ನೂ ಭೇಟಿ ಮಾಡಲಿದ್ದಾರೆ..

Advertisment

ಇನ್ನು, ನವಂಬರ್​ 15ನೇ ತಾರೀಖು ದೆಹಲಿಗೆ ತೆರಳಲಿರುವ ಸಿಎಂ ಬರೀಗೈಯಲ್ಲಿ ಪ್ರಯಾಣ ಮಾಡೋದಿಲ್ಲ..ತಮ್ಮ ಕೈಯಲ್ಲಿ 12ರಿಂದ 15 ಹೊಸ ಸಚಿವರ ಪಟ್ಟಿಯನ್ನ ತಗೊಂಡ್​ ಹೋಗ್ತಿದ್ದಾರೆ..ಹೈಕಮಾಂಡ್​​​ ಬಳಿಯಿಂದ ಸಂಪುಟ ವಿಸ್ತರಣೆ ಅಥವಾ ಪುನರ್​​ರಚನೆಗೆ ಗ್ರೀನ್​ಸಿಗ್ನಲ್ ತೆಗೆದುಕೊಳ್ಳಲಿದ್ದಾರೆ..ಈ ಟೈಮಲ್ಲಿ ಸಿದ್ದು ಸಂಪುಟದಲ್ಲಿ ಈಗಿರೋ ಸಚಿವರನ್ನ ಯಾರನ್ನ ಬಿಡಬೇಕು ಅನ್ನೋ ತೀರ್ಮಾನ ಕೂಡ ಆಗಲಿದೆ ಅಂತಾನೇ ಹೇಳಲಾಗ್ತಿದೆ..ಯಾರನ್ನ ಉಳಿಸಿಕೊಳ್ಳಬೇಕು, ಯಾರನ್ನ ಕೈಬಿಡಬೇಕು, ಯಾರನ್ನ ಹೊಸದಾಗಿ ಸೇರ್ಪಡೆ ಮಾಡ್ಕೋಬೇಕು ಅನ್ನೋದನ್ನ ಸಿಎಂ ಹೈಕಮಾಂಡ್​ ವಿವೇಚನೆಗೆ ಬಿಡಲಿದ್ದಾರೆ..ಆದ್ರೆ, ಸಿಕ್ಕಿರೋ ಮಾಹಿತಿ ಪ್ರಕಾರ ಇದೇ ಟೈಮಲ್ಲಿ ಕೆ.ಎನ್​ ರಾಜಣ್ಣರನ್ನ ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಹೈಕಮಾಂಡ್​ ಮನವೊಲಿಸಲಿದ್ದಾರೆ...

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್​ ಜಾರಕಿಹೊಳಿ ಹೆಸರು ಶಿಫಾರಸು?
ಸಿಎಂ ಸಿದ್ದರಾಮಯ್ಯ ಸಂಪುಟ ವಿಸ್ತರಣೆಗೋ ಅಥವಾ ಪುನರ್​ರಚನೆ ವಿಚಾರ ಒಂದಕ್ಕೇನೇ ದೆಹಲಿಗೆ ಹೋಗ್ತಿಲ್ಲ..ಇದೇ ಟೈಮಲ್ಲಿ ಇನ್ನೂ ಒಂದು ದಾಳ ಉರುಳಿಸುವ ಸಾಧ್ಯತೆಗಳು ದಟ್ಟವಾಗಿದೆ..ಸದ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​ ಗಟ್ಟಿಯಾಗಿ ಕೂತ್ಕೊಂಡಿದ್ದಾರೆ.. ಅಧ್ಯಕ್ಷ ಸ್ಥಾನ ಬದಲಾವಣೆಗೆ ಆಗಾಗ ಸಿದ್ದರಾಮಯ್ಯನವರ ಬಣದ ನಾಯಕರಿಂದ ಕೂಗುಗಳು ಕೇಳಿ ಬರ್ತಾನೆ ಇರೋದು ನಿಮಗೆಲ್ಲಾ ಗೊತ್ತಿರೋ ವಿಚಾರ.ಹಾಗೊಂದು ವೇಳೆ ಹೈಕಮಾಂಡ್​ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಮಾಡಿದ್ರೆ, ಆ ಸ್ಥಾನಕ್ಕೆ ಸತೀಶ್​ ಜಾರಕಿಹೊಳಿಯವರ ಹೆಸರನ್ನ ಸಿದ್ದರಾಮಯ್ಯನವರು ಶಿಫಾರಸು ಮಾಡುವ ಸಾಧ್ಯತೆಗಳಿವೆ.. ಇನ್ನು, ಇವೆಲ್ಲಾ ಬೆಳವಣಿಗೆಗಳು ನಡೆಯೋ ಟೈಮಲ್ಲಿ ಸಿಎಂ ಜೊತೆಗೆ ಹಿರಿಯ ಸಚಿವರೂ ದೆಹಲಿಗೆ ದೌಡಾಯಿಸಲಿದ್ದಾರೆ ಅನ್ನೋದು ಸಿಕ್ಕಿರೋ ಮಾಹಿತಿ..ಇದು ಸಿದ್ದು ಬಣದಲ್ಲಿ ಸದ್ಯ ನಡೀತಿರೋ ಬೆಳಗಣಿಗೆಗಳಾಗಿದ್ರೆ, ಅತ್ತ ಡಿಕೆಶಿ ಬಣದಲ್ಲೂ ಸಾಕಷ್ಟು ಚಟುವಟಿಕೆಗಳು ಗರಿಗೆದರಿವೆ

ನವೆಂಬರ್ 15ರ ಬಳಿಕ ಡಿಕೆಶಿ ಕೂಡ ದೆಹಲಿಗೆ ತೆರಳೋ ಸಾಧ್ಯತೆ!
ಈಗಾಗಲೇ ಶಾಸಕರು, ಸಚಿವರ ಬೆಂಬಲ ಕೇಳ್ತಿರುವ ಡಿಕೆಶಿ!
ಒಂದು ಕಡೆ ಸಿಎಂ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್​ ಎದುರು ಸಂಪುಟ ಪುನರ್​​ರಚನೆಯ ದಾಳ ಉರುಳಿಸಿದ್ರೆ..ಈಕಡೆ ಡಿಕೆ ಶಿವಕುಮಾರ್​ ಕೂಡ, ತಮ್ಮದೇ ಸ್ಟೈಲ್​ನಲ್ಲಿ ಗದ್ದುಗೆ ಹಿಡಿಯುವ ಪ್ರಯತ್ನ ಮುಂದುವರಿಸಿದ್ದಾರೆ..ನವಂಬರ್​ ಹತ್ತಿರವಾಗ್ತಿದ್ದಂತೆ ಡಿಕೆಶಿ ಕಾಂಗ್ರೆಸ್ ಶಾಸಕರು ಸಚಿವರನ್ನ ತಮ್ಮ  ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ತಮ್ಮ ಬಲ ಹೆಚ್ಚಿಸಿಕೊಳ್ಳಲು ಶಾಸಕರು, ಸಚಿವರಿಗೆ ವಿಶ್ವಾಸದ ಕರೆ ಮಾಡ್ತಿದ್ದಾರೆ..ಅಲ್ಲದೇ ಹಲವರ ಮುಖಾಮುಖಿಯಾಗಿ ಸಮಸ್ಯೆ ಆಲಿಸುತ್ತಿದ್ದಾರೆ..ಬಟ್, ಡಿಸಿಎಂ ವಿಶ್ವಾಸಕ್ಕೆ ಮುಂದಾದರೂ ಹಲವರು ಸ್ಪಷ್ಟ ಅಭಿಪ್ರಾಯವನ್ನ ತಿಳಿಸ್ತಿಲ್ಲ..ಇನ್ನು, ನವೆಂಬರ್ 15ನೇ ತಾರೀಖಿನ ಬಳಿಕ ಡಿಕೆ ಶಿವಕುಮಾರ್ ಕೂಡ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಅಲ್ಲಿ ಖರ್ಗೆ, ಸಿದ್ದರಾಮಯ್ಯ ಹಾಗೂ ವೇಣುಗೋಪಾಲ್, ಸುರ್ಜೇವಾಲ ಜೊತೆ ಸಭೆ ನಡೆಸಲಿದ್ದು, ಸಿಎಂ ಕುರ್ಚಿ ಕದನಕ್ಕೆ ಸಂಪೂರ್ಣ ತೆರೆ ಬೀಳುವ ದಿನಗಳು ಹತ್ತಿರವಾಗ್ತಿದೆ ಅಂತಾ ಕಾಂಗ್ರೆಸ್​​ನಲ್ಲಿ ನಡೀತಿರೋ ಬೆಳವಣಿಗೆಗಳು ಸುಳಿವು ಕೊಡ್ತಿವೆ..

Advertisment

5 ದಿನಗಳು..ಬರೀ ಐದೇ  ದಿನಗಳಲ್ಲಿ ಸಿಎಂ ಕುರ್ಚಿ ಕದನದ ಕಂಪ್ಲೀಟ್​ ಪಿಕ್ಚರ್ ಹೊರಬೀಳಲಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

CM CHAIR FIGHTING IN CONGRESS
Advertisment
Advertisment
Advertisment