/newsfirstlive-kannada/media/media_files/2025/11/07/sugar-cane-farmers-cm-meeting-successful-2025-11-07-18-08-15.jpg)
ಕಬ್ಬು ಬೆಳೆಗೆ ಬೆಂಬಲ ಬೆಲೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ರೈತರು ನಡೆಸಿದ್ದ ಹೋರಾಟಕ್ಕೆ ಭಾಗಶಃ ಫಲ ಸಿಕ್ಕಿದೆ. ಪ್ರತಿ ಟನ್ ಕಬ್ಬುಗೆ 3,300 ರೂಪಾಯಿ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಸಿಎಂ ನಡುವಿನ ಸಭೆಯಲ್ಲಿ ನಿರ್ಧಾರವಾಗಿದೆ.
ಇಂದು ಸರಣಿ ಸಭೆ ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್‌ನ ಸಚಿವರುಗಳು ಈ ತೀರ್ಮಾನ ಪ್ರಕಟಿಸಿದ್ದಾರೆ. ಇಂದು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ 2 ಸುತ್ತಿನ ಸಭೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಿದ್ದಾರೆ.
ಕಬ್ಬಿನ 11.25 ರಿಕವರಿಗೆ ಪ್ರತಿ ಟನ್‌ಗೆ 3250 ರೂಪಾಯಿಯನ್ನು ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಲಿವೆ. ಇದಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 50 ರೂಪಾಯಿ ಪಾವತಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಅಂತಿಮವಾಗಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್‌ಗೆ 3,300 ರೂಪಾಯಿ ಹಣ ಸಿಗಲಿದೆ.
ಆದರೇ, ರೈತರು ಪ್ರತಿ ಟನ್‌ಗೆ 3,500 ರೂಪಾಯಿ ಬೆಲೆ ನೀಡಬೇಕೆಂದು ಆಗ್ರಹಿಸಿ ಕಳೆದ 8 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಹೀಗಾಗಿ ಈಗ ರೈತರು ತಮ್ಮ ಬೇಡಿಕೆಗಿಂತ ಪ್ರತಿ ಟನ್ ಗೆ 200 ರೂಪಾಯಿ ಕಡಿಮೆ ನೀಡಿದರೇ, ಒಪ್ಪಿಕೊಳ್ಳುತ್ತಾರಾ ಎಂಬ ಕುತೂಹಲ ಇದೆ.
ಇದಕ್ಕೆ ಇನ್ನೂ ಕೆಲವೇ ನಿಮಿಷಗಳಲ್ಲಿ ರೈತರ ಪ್ರತಿಕ್ರಿಯೆ ಏನು ಎಂಬುದು ಗೊತ್ತಾಗಲಿದೆ.
ಈ ಹಿಂದೆಯೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು, ಪ್ರತಿ ಟನ್‌ಗೆ 3,200 ರೂಪಾಯಿ ಬೆಲೆ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರನ್ನು ಮನವೊಲಿಸಿದ್ದರು. ಆದರೇ, ಈಗ ದಿನವೀಡೀ ಸಭೆ ನಡೆಸಿದ ಬಳಿಕ ಪ್ರತಿ ಟನ್ ಗೆ 100 ರೂಪಾಯಿ ಹೆಚ್ಚಿಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
/filters:format(webp)/newsfirstlive-kannada/media/media_files/2025/11/07/sugar-cane-farmers-cm-meeting-successful02-2025-11-07-18-17-01.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us