ಬಜೆಟ್ ಸಿದ್ದತೆ ಕುರಿತು ಹೈಕಮ್ಯಾಂಡ್ ಜೊತೆ ಚರ್ಚೆಗೆ ದೆಹಲಿಗೆ ಸಿಎಂ ಸಿದ್ದು : ಅಸ್ಸಾಂಗೆ ಡಿಕೆಶಿ ವೀಕ್ಷಕ

ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಸಿದ್ದತೆ ಆರಂಭಿಸುವ ಮೊದಲು ಕಾಂಗ್ರೆಸ್ ಹೈಕಮ್ಯಾಂಡ್ ಜೊತೆಗೆ ಚರ್ಚೆ ನಡೆಸಲು ದೆಹಲಿಗೆ ಹೋಗುತ್ತಿದ್ದಾರೆ. ಮುಂದಿನ ವಾರ ಸಿಎಂ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸುವರು. ಇತ್ತ ಡಿಕೆಶಿ ಅವರನ್ನು ಅಸ್ಸಾಂ ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್ ವೀಕ್ಷಕರಾಗಿ ನೇಮಿಸಲಾಗಿದೆ.

author-image
Chandramohan
Siddaramaiah and DK Shivakumar (3)

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ

Advertisment
  • ಮುಂದಿನ ವಾರ ದೆಹಲಿಗೆ ತೆರಳುವ ಸಿಎಂ ಸಿದ್ದರಾಮಯ್ಯ
  • ಬಜೆಟ್ ಸಿದ್ದತೆಗೂ ಮುನ್ನ ಹೈಕಮ್ಯಾಂಡ್ ಜೊತೆ ಚರ್ಚೆ
  • ಅಸ್ಸಾಂ ಅಸೆಂಬ್ಲಿ ಚುನಾವಣಾ ವೀಕ್ಷಕರಾಗಿ ಡಿಕೆಶಿ ನೇಮಕ

ಮುಂದಿನ ವಾರ CM ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸುವರು. ಬಜೆಟ್ ಸಿದ್ಧತೆ ಕುರಿತಂತೆ ಹೈಕಮಾಂಡ್ ಜೊತೆ ಚರ್ಚೆ ನಡೆಸುವ ಉದ್ದೇಶದಿಂದ ದೆಹಲಿಗೆ ಪ್ರಯಾಣ ಬೆಳೆಸುವರು.  ವರಿಷ್ಠರ ಅನುಮತಿ ಪಡೆದು ಮುಂದಿನ ಹೆಜ್ಜೆಗೆ ಸಜ್ಜಾಗಲಿದ್ದಾರೆ.  ದಾಖಲೆಯ 17ನೇ  ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಕಾತರರಾಗಿದ್ದಾರೆ .  ಪೂರ್ಣಾವಧಿ ವಿಚಾರದಲ್ಲೂ ಹೈಕಮಾಂಡ್​ನತ್ತ ಬೊಟ್ಟು ಮಾಡುತ್ತಿದ್ದಾರೆ.  ಈ ಮೂಲಕ   ರಾಜ್ಯ ನಾಯಕರಿಗೂ ಸಂದೇಶ ರವಾನೆಗೆ ಸಿಎಂ ಪ್ಲಾನ್ ಮಾಡಿದ್ದಾರೆ.  

ಸಿದ್ದರಾಮಯ್ಯ ಪಕ್ಷದ ಶಿಸ್ತಿನ ಸಿಪಾಯಿ ಎಂಬ ಇಮೇಜ್ ಮುಂದುವರಿಕೆಗೂ ಪ್ಲಾನ್ ಮಾಡಿದ್ದಾರೆ. ಸದ್ಯಕ್ಕೆ ಬಜೆಟ್ ಸಿದ್ಧತೆ ವಿಚಾರದಲ್ಲಿ ಸಿದ್ದರಾಮಯ್ಯ ಚಿತ್ತ ಹೈಕಮಾಂಡ್​ನತ್ತ ನೆಟ್ಟಿದೆ. 
ಕರ್ನಾಟಕದ ಸಿಎಂ ಸ್ಥಾನ ಕೊಡದೇ ಇದ್ದರೂ ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಭಾರಿ ಭರವಸೆಯನ್ನು ಕಾಂಗ್ರೆಸ್ ಹೈಕಮ್ಯಾಂಡ್  ಇಟ್ಟಿದೆ.   ಅಸ್ಸಾಂ ರಾಜ್ಯದ ಚುನಾವಣೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅಸ್ಸಾಂನ ಕಾಂಗ್ರೆಸ್ ಪಕ್ಷದ ಪರಿವೀಕ್ಷಕರಾಗಿ ಡಿಸಿಎಂ ಡಿಕೆ ಶಿವಕುಮಾರ್ ನೇಮಕ ಮಾಡಲಾಗಿದೆ.  ಇದಕ್ಕೆ ಮುಖ್ಯ ಕಾರಣ ಅಸ್ಸಾಂ ಸಿಎಂ ಹೇಮಂತ್ ಬಿಸ್ವಾ ಶರ್ಮಾರಿಂದ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ನಡೆಯುತ್ತಿರುವ   ವಾಗ್ದಾಳಿ.
 ಕಾಂಗ್ರೆಸ್ ನಲ್ಲೇ ಇದ್ದು ನಂತರ ಬಿಜೆಪಿಗೆ ಹೋಗಿ ಸದ್ಯ ದೇಶದಲ್ಲೇ ರಾಹುಲ್ ಗಾಂಧಿಯನ್ನ ಅತಿ ಹೆಚ್ಚು ಟೀಕಿಸಿರೋ ಸಿಎಂ ಅಂದ್ರೆ ಅದು ಹಿಮಂತ್‌ ಬಿಸ್ವಾ ಶರ್ಮಾ. ರಾಹುಲ್ ಗಾಂಧಿಯನ್ನ ಜೋಕರ್, ಕಾರ್ಟೂನ್‌, ಭವಿಷ್ಯವಿಲ್ಲದ ನಾಯಕ ಎಂದೆಲ್ಲ ಟೀಕೆ ಮಾಡಿದ್ದಾರೆ.   ಅಸ್ಸಾಂ ಮಾತ್ರವಲ್ಲದೇ ಈಶಾನ್ಯದ ಉಳಿದ  ರಾಜ್ಯಗಳಲ್ಲಿ ಬಿಜೆಪಿಗೆ ಭದ್ರ ಬುನಾದಿಯನ್ನು ಹಿಮಂತ್ ಬಿಸ್ವಾ ಶರ್ಮಾ ಹಾಕಿದ್ದಾರೆ. 

 ಈ ಹಿನ್ನಲೆಯಲ್ಲಿ  ಅವರನ್ನ ಕಟ್ಟಿ ಹಾಕುವುದಕ್ಕೆ  ರಾಜ್ಯದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ರನ್ನು  ಆಯ್ಕೆ ಮಾಡಿಕೊಳ್ಳಲಾಗಿದೆ.  ಡಿಕೆಶಿ ಜೊತೆಗೆ ಮಾಜಿ ಸಿಎಂ ಭೂಪೇಷ್ ಭಗೇಲ್ ರನ್ನು ಕೂಡ ನೇಮಕ ಮಾಡಲಾಗಿದೆ.
ಇದಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್,  ನನಗೆ ಬೇರೆ ಆಯ್ಕೆ ಇಲ್ಲ, ಪಕ್ಷ ಏನು ಹೇಳುತ್ತದೋ ಅದನ್ನ ನಾನು ಮಾಡಬೇಕಾಗುತ್ತದೆ. ಎಐಸಿಸಿ ಯಿಂದ ಪ್ರೆಸ್ ರಿಲೀಸ್ ಮಾಡಿದ್ದಾರೆ. ನಮಗೆ ಪಕ್ಷದ ಜವಾಬ್ದಾರಿ ಕೊಟ್ಟಿದ್ದಾರೆ. ಈ ಹಿಂದೆಯೂ ಕೂಡ ನನಗೆ ಜವಾಬ್ದಾರಿ ಕೊಟ್ಟಿದ್ದರು. ಈಗಲೂ ಪಕ್ಷದ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ಅಲ್ಲಿಗೆ ಹೋಗುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ. 
ಕೆಪಿಸಿಸಿ ಕಚೇರಿ ಬಳಿ ಮುಂದಿನ ಮುಖ್ಯಮಂತ್ರಿ  ಡಿಕೆಶಿ ಎಂದು  ಘೋಷಣೆ ಕೂಗಲಾಗಿದೆ.  ಡಿಕೆಶಿ ಆಗಮಿಸುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ  ಡಿಕೆಶಿ ಎಂದು ಘೋಷಣೆಯನ್ನು ಕಾರ್ಯಕರ್ತರು  ಕೂಗಿದ್ದಾರೆ.   ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿದೆ.  

VIDEO: ಬಿಜೆಪಿ-ಜೆಡಿಎಸ್‌ಗೆ ವೋಟ್‌ ಹಾಕಿದ್ರೆ ‘ಗ್ಯಾರಂಟಿ’ ಯೋಜನೆಗಳು ರದ್ದು? ಕಾರ್ಯಕರ್ತರ ಜೊತೆ ಡಿಕೆಶಿ ಶಾಕಿಂಗ್ ಮಾತು

ಕೆಪಿಸಿಸಿ ಕಚೇರಿಯಲ್ಲಿ ಬೆಂಗಳೂರಿನ ಚಾಮರಾಜಪೇಟೆಯ ಜೆಡಿಎಸ್ ನಾಯಕ ಗೋವಿಂದರಾಜ್ ಹಾಗೂ ಅವರ ಪತ್ನಿ ಮಾಜಿ ಕಾರ್ಪೋರೇಟರ್ ಗೌರಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಗೋವಿಂದರಾಜು ಹಾಗೂ ಗೌರಮ್ಮ ಈ ಹಿಂದೆ ಆರ್‌ಟಿಐ ಕಾರ್ಯಕರ್ತ ಲಿಂಗರಾಜ ಹತ್ಯೆ ಕೇಸ್ ಆರೋಪಿಗಳಾಗಿದ್ದರು. 2022 ರಲ್ಲಿ ಈ ಕೊಲೆ ಕೇಸ್ ನಲ್ಲಿ ಖುಲಾಸೆಯಾಗಿದ್ದಾರೆ. ಈಗ ಅಧಿಕೃತವಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. 



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

CM SIDDARAMAIAH
Advertisment