ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಜೊತೆ ಮಾತನಾಡಲ್ಲ ಎಂದ ಸಿಎಂ : ಬಳ್ಳಾರಿ ಘಟನೆ ಬಗ್ಗೆ ಸಿಎಂಗೆ ಕೋಪ

ಬಳ್ಳಾರಿ ಘಟನೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಕೋಪಗೊಂಡಿದ್ದಾರೆ. ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಜೊತೆ ಮಾತನಾಡಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಈ ಘಟನೆ ಬೇಕಿರಲಿಲ್ಲ. ಜನಾರ್ಧನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟುವುದು ತಪ್ಪು ಎಂದು ಸಿಎಂ ಸಿದ್ದರಾಮಯ್ಯ , ನೇರವಾಗಿ ಜಮೀರ್ ಜೊತೆ ಹೇಳಿದ್ದಾರೆ.

author-image
Chandramohan
CM SIDDU ANGRY ON MLA BHARAT REDDY

ಸಿಎಂ ಜೊತೆ ಜಮೀರ್ ಮಾತುಕತೆ

Advertisment
  • ಸಿಎಂ ಜೊತೆ ಜಮೀರ್ ಮಾತುಕತೆ
  • ಈ ವೇಳೆ ನಾರಾ ಭರತ್ ರೆಡ್ಡಿ ಜೊತೆ ಮಾತನಾಡಲು ಸಿಎಂ ನಕಾರ
  • ನಾರಾ ಭರತ್ ರೆಡ್ಡಿ ಜೊತೆ ಮಾತನಾಡಿಸಲು ಜಮೀರ್ ಯತ್ನ

ಬಳ್ಳಾರಿ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕೋಪ ಮಾಡಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಇಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.  ಸಚಿವ ಜಮೀರ್ ಅಹಮ್ಮದ್ ರಿಂದ ಮಾಹಿತಿ ಪಡೆಯುವಾಗ ಸಿಎಂ ಸಿದ್ದರಾಮಯ್ಯ ಕೋಪ ಮಾಡಿಕೊಂಡಿದ್ದರು.  ಇದೆಲ್ಲಾ ಬೇಕಿತ್ತಾ ಅಂತ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ. 

ಜನಾರ್ಧನ ರೆಡ್ಡಿ  ಮನೆ ಮುಂದೆ ಬ್ಯಾನರ್ ಕಟ್ಟುವುದು ತಪ್ಪು.   ನಾನು ಭರತ್ ರೆಡ್ಡಿ ಜೊತೆ ಮಾತನಾಡುವುದಿಲ್ಲ  ಎಂದು ಸಿಎಂ ಸಿದ್ದರಾಮಯ್ಯ ಕೋಪ ಮಾಡಿಕೊಂಡಿದ್ದಾರೆ.

ಬಳ್ಳಾರಿ ಕಾಂಗ್ರೆಸ್ ಶಾಸಕ  ನಾರಾ ಭರತ್ ರೆಡ್ಡಿ ಜೊತೆ ದೂರವಾಣಿ ಕರೆ ಮಾಡಿ ಮಾತನ್ನಾಡಿಸಲು ಜಮೀರ್ ಯತ್ನಿಸಿದ್ದಾರೆ.  ಆದರೂ ಶಾಸಕ ಭರತ್ ರೆಡ್ಡಿ ಜೊತೆ ಮಾತನ್ನಾಡಲು ಸಿಎಂ ಸಿದ್ದರಾಮಯ್ಯ ಒಪ್ಪಿಲ್ಲ. 
ಬಳಿಕ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ, ಕಂಪ್ಲಿ ಶಾಸಕ ಗಣೇಶ್ ಜೊತೆ ಸಿಎಂ ಮಾತನಾಡಿದ್ದಾರೆ. 
ಇನ್ನೂ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಬಳ್ಳಾರಿ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 
ತನಿಖೆ ಮಾಡುವುದಕ್ಕೆ ಹೇಳಿದ್ದೇನೆ.  ಯಾರ ಗನ್ ನಿಂದ ಬುಲೆಟ್ ಬಂದಿದೆ ಅನ್ನೋದು ಗೊತ್ತಾಗಬೇಕಲ್ವಾ..? ಬಿಜೆಪಿಯವರ ಗನ್?  ಕಾಂಗ್ರೆಸ್ ಗನ್  ನಿಂದ ಬಂದಿದ್ಯಾ ಅನ್ನೋದು ಗೊತ್ತಾಗಬೇಕು. ಅದಕ್ಕೋಸ್ಕರ ತನಿಖೆ ಮಾಡಲು ಹೇಳಿದ್ದೇನೆ.  ಖಾಸಗಿ ಬುಲೆಟ್ ಎಂಬುದಾಗಿ ಎಸ್ಪಿ ಮಾಹಿತಿ ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ,  ಅವರ ಸೆಕ್ಯುರಿಟಿಗಾಗಿ ಗನ್ ಇಟ್ಟುಕೊಂಡಿದ್ದಾರೆ.  ಏರ್ ನಲ್ಲಿ ಗನ್ ಫೈರ್ ಮಾಡಿದ್ದಾರೆ. ಅದಕ್ಕೆ ಫೈರಿಂಗ್ ಮಾಡಿರೋದು ಮನುಷ್ಯನಿಗೆ ತಗುಲಿದೆ.   ರಾಜಶೇಖರ್ ಸತ್ತು ಹೋಗಿದ್ದಾರೆ.  ಯಾರ ಗನ್ ನಿಂದ ಬಂದಿದೆ ಅನ್ನೋದು ಗೊತ್ತಾಗಬೇಕಲ್ವಾ ?.  ಅದಕ್ಕೆ ತನಿಖೆ ಮಾಡಿ ಹೇಳಿ ವರದಿ ಕೊಡಿ ಎಂದು ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಳ್ಳಾರಿ ಜೈಲಿಗೆ ದರ್ಶನ್​ ಶಿಫ್ಟಿಂಗ್​​ ಯಾಕೆ? ಈ ಸೆರೆಮನೆಯಲ್ಲಿರೋ ಆ ಐದು ರಹಸ್ಯಗಳೇನು?




 
ಇನ್ನೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಜಮೀರ್ ಅಹಮದ್ ಖಾನ್, ಸಿಎಂ ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.  ಈ ಬಗ್ಗೆ ಸಿಎಂ ಕೂಡ ಕೋಪ ಮಾಡಿಕೊಂಡಿದ್ರು. ಈ ಗಲಾಟೆ ಬೇಕಿರಲಿಲ್ಲ ಅಂತಾ ಹೇಳಿದ್ರು, ಸಿಟ್ಟಾಗಿದ್ರು. ನಾನು ರಾತ್ರಿ ಬಳ್ಳಾರಿಗೆ ಹೋಗುತ್ತೇನೆ.  ಸಂಜೆ ಸಿಎಂ ಜೊತೆ ಬೆಂಗಳೂರಿನ  ಕೋಗಿಲು ಲೇಔಟ್  ಸಂಬಂಧ ಸಭೆ ಇದೆ.  ಇದು ಮುಗಿದ ಬಳಿಕ ಬಳ್ಳಾರಿಗೆ ಹೋಗುತ್ತೇನೆ.  ಯಾವ ತಪ್ಪಿತಸ್ಥರನ್ನ ಬಿಡೋದಿಲ್ಲ, ಯಾರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳುತ್ತೇವೆ. ಸಣ್ಣ ವಿಚಾರ ಹೋಗಿ ದೊಡ್ಡದಾಗಿದೆ.  ಇಲ್ಲಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ . ಅವರು ಅನುಕಂಪ ಪಡೆಯಲು ಹಾಗೇ ಮಾತಾಡ್ತಿದ್ದಾರೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

CM SIDDARAMAIAH
Advertisment