ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮಗಾಂಧಿ ಗ್ರಾಮ ಪಂಚಾಯಿತಿ ಎಂದು ನಾಮಕರಣ: ಸಿಎಂ ಸಿದ್ದರಾಮಯ್ಯರಿಂದ ಘೋಷಣೆ

ರಾಜ್ಯದಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳನ್ನು ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ ಎಂದು ನಾಮಕರಣ ಮಾಡಲಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಮುಂದಿನ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ.

author-image
Chandramohan
Gram panchayat renamed as mahatma gandhi GP
Advertisment


ರಾಜ್ಯದ ಎಲ್ಲಾ ಗ್ರಾಪಂಗಳಿಗೆ ಮಹಾತ್ಮಗಾಂಧಿ ಗ್ರಾಮ ಪಂಚಾಯಿತಿ ಎಂದು ಹೆಸರಿಡಲಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದ ಪ್ರತಿಭಟನೆ ವೇಳೆ ಸಿಎಂ ಸಿದ್ದರಾಮಯ್ಯ ಈ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಆರು ಸಾವಿರ ಗ್ರಾಮ ಪಂಚಾಯತಿಗಳಿವೆ.  ರಾಷ್ಟ್ರಪಿತ  ಮಹಾತ್ಮಾ ಗಾಂಧಿ ಹೆಸರು ಇಡಲು ತೀರ್ಮಾನ ಮಾಡಲಾಗಿದೆ. 
ಮನರೇಗಾ  ಯೋಜನೆ ಇದ್ದಾಗ  ಒಂದು ಗ್ರಾಮ ಪಂಚಾಯತಿಗೆ ಒಂದು ಕೋಟಿ  ರೂಪಾಯಿ ಅನುದಾನ ಸಿಗುತ್ತಿತ್ತು.   ಆದರೆ ಇನ್ಮುಂದೆ ಸಿಗುವುದಿಲ್ಲ .  ಕಾಯ್ದೆ ಜಾರಿಗೆ 40% ರಾಜ್ಯ ಸರ್ಕಾರ ಹಾಗೂ ಕೇಂದ್ರ 60% ಅನುದಾನ ನೀಡಬೇಕಾಗಿದೆ .  ಕೇಂದ್ರದ ನೀತಿಯಿಂದಾಗಿ ಅನೇಕ ರಾಜ್ಯಗಳು ಕಷ್ಟದಲ್ಲಿವೆ .  ಹೀಗಾಗಿ ಇಡೀ ದೇಶದಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆಯಲಿದೆ .  ವಿಬಿ ಜಿ ರಾವ್ ಜಿ ರದ್ದು ಮಾಡಿ ಮನರೇಗಾ ಪುನಸ್ಥಾಪನೆ ಮಾಡುವವರೆಗೆ ಹೋರಾಟ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 
ವಿಬಿ ರಾಮ್ ಜಿ ಕಾಯಿದೆ ಜಾರಿಯ  ಹಿಂದೆ ಆರ್‌ಎಸ್ಎಸ್ ಇದೆ. ಬಡವರು ಬಲಯುತವಾಗಬಾರದು ಎಂಬುವುದು ಆರ್‌ಎಸ್ಎಸ್  ಉದ್ದೇಶವಾಗಿದೆ.  ಸಮಾಜದಲ್ಲಿ ಅಸಮಾನತೆ ಇರಬೇಕೆಂಬುದು ಆರ್‌ಎಸ್ಎಸ್ ಹುನ್ನಾರ.  ಮಹಾತ್ಮಾ ಗಾಂಧಿಯನ್ನು ನರೇಂದ್ರ ಮೋದಿ ಸರ್ಕಾರ ಮತ್ತೊಮ್ಮೆ ಹತ್ಯೆ ಮಾಡಿದೆ.  ಇನ್ನೂ ನಾವು ಬಿಡಬೇಕಾ, ಬಿಜೆಪಿ ಪ್ರತಿದಿನ ಸುಳ್ಳು ಹೇಳುತ್ತಿದೆ. ಮನರೇಗಾ ರದ್ದು ವಿಚಾರವಾಗಿ ನಾವು ವಿಶೇಷ ಅಧಿವೇಶನ ಕರೆದಿದ್ದೇವೆ.  ನಾವು ಚರ್ಚೆ ಹಾಗೂ ನಿರ್ಣಯ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಪ್ರತಿ ಗ್ರಾಮ ಪಂಚಾಯತಿಗೆ ಮಹಾತ್ಮಾ ಗಾಂಧಿ ಹೆಸರು ಅನ್ನು ಇಡಲಾಗುವುದು.  ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 
 ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ  ಪ್ರತಿಭಟನೆ ಮುಗಿಸಿ ರಾಜಭವನದತ್ತ ಕಾಂಗ್ರೆಸ್ ನಾಯಕರು ಹೊರಟಿದ್ದಾರೆ.  ಫ್ರೀಡಂಪಾರ್ಕ್ ನಿಂದ ಬಸ್ ನಲ್ಲಿ ಸಿಎಂ,‌ ಡಿಸಿಎಂ, ಉಸ್ತುವಾರಿ ಸುರ್ಜೇವಾಲಾ ಸೇರಿದಂತೆ ಹಲವರು ಹೊರಟಿದ್ದಾರೆ.  ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರವನ್ನು ಕಾಂಗ್ರೆಸ್ ನಾಯಕರು ಸಲ್ಲಿಸುವರು. ಮನರೇಗಾ ಮರು ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಮನವಿ ಸಲ್ಲಿಸುವರು. 

Gram panchayat renamed as mahatma gandhi GP (1)


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH Gram panchayat renamed as MAHATMA GANDHI GP MAHATMA GANDHI GRAM PANCHAYAT
Advertisment