/newsfirstlive-kannada/media/media_files/2026/03/06/cm-siddu-tables-budget-2026-03-06-20-05-57.jpg)
ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ನಾನೇ ಹೆಚ್ಚು ಬಜೆಟ್ ಮಂಡನೆ ಮಾಡಿದ್ದೇನೆ. ಕಾಂಗ್ರೆಸ್ ಹೈಕಮ್ಯಾಂಡ್ ಅವಕಾಶ ಕೊಟ್ಟರೇ, ಇನ್ನೂ ಎರಡು ಬಜೆಟ್ ಮಂಡನೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದ್ದಾರೆ. ನಮಗೆ ಯಾವಾಗಲೂ ವಿಶ್ವಾಸ ಇರುತ್ತೆ. ಹೈಕಮ್ಯಾಂಡ್ ಅಧಿಕಾರ ಬಿಡಿ ಅಂದರೇ, ಬಿಡುತ್ತೇನೆ. ಇಲ್ಲ ಅಂದರೇ, ಇಲ್ಲ. ಹೈಕಮ್ಯಾಂಡ್ ಮೇಲೆ ವಿಶ್ವಾಸ ಇಡಬೇಕಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅಧಿಕಾರ ಹಂಚಿಕೆ ಗೊಂದಲ ಯಾವಾಗ ಬಗೆಹರಿಯುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಎಲ್ಲವೂ ಹೈಕಮ್ಯಾಂಡ್ ನಿರ್ಧಾರ ಎಂದಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಹೆಚ್ಚಿನ ಸಾಲ ಮಾಡಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಮೋದಿ ಎಷ್ಟು ಸಾಲ ಮಾಡಿದ್ದಾರೆ ಗೊತ್ತಾ? ಸಾಲ ಮಾಡದೆ ಅಭಿವೃದ್ಧಿ ಮಾಡಲು ಆಗಲ್ಲ. ಸಾಲ ಕೂಡ ಹಣಕಾಸಿನ ಮಿತಿಯಲ್ಲಿದೆ. ರಾಜ್ಯ ಸರ್ಕಾರದ ಸಾಲದ ಜಿಡಿಪಿಯ ಶೇ.25 ರೊಳಗೆ ಇರಬೇಕು. ನಾವು ಶೇ.24 ರಷ್ಟು ಸಾಲ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರದ ಸಾಲ ಎಷ್ಟಿದೆ ಅಂತ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗೆ ಗೊತ್ತಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮೋದಿ ಬಂದಮೇಲೆ 11 ವರ್ಷದಲ್ಲಿ ಕೇಂದ್ರ ಸರ್ಕಾರವು 165 ಲಕ್ಷ ಕೋಟಿ ಸಾಲ ಮಾಡಿದೆ. ಶೇ.55.6 ರಷ್ಟು ಸಾಲವನ್ನು ಮೋದಿ ಮಾಡಿದ್ದಾರೆ. ನಾವು ಆರ್ಥಿಕ ಶಿಸ್ತಿನ ಮಿತಿಯಲ್ಲಿ ಸಾಲ ಮಾಡಿ ಅಭಿವೃದ್ಧಿಗೆ ಹಣ ಕೊಡುತ್ತಿದ್ದೇವೆ. ಬಿಜೆಪಿ ನಾಯಕರು ಆರ್ಥಿಕ ನೀತಿ ಪುಸ್ತಕ ಓದಬೇಕು. ನಾವು ಸಾಲ ಮಾಡಿದ್ದೇವೆ ಆದರೇ, ಅದು ಆರ್ಥಿಕ ಶಿಸ್ತು ಮಿತಿಯಲ್ಲಿದೆ. ಬಜೆಟ್ ಒಂದು ವರ್ಗಕ್ಕೆ ಸೀಮಿತವಾಗಿಲ್ಲ . ಸಾಮಾಜಿಕ ನ್ಯಾಯದಡಿ ಬಜೆಟ್ ಮಂಡನೆ ಮಾಡಿದ್ದೇವೆ. ಬಜೆಟ್ ಇಡೀ ರಾಜ್ಯದ ಅಭಿವೃದ್ಧಿಯ ಬಜೆಟ್ ಆಗಿದೆ. ಕೇಂದ್ರ ಸರ್ಕಾರ ನಮಗೆ ಕೊಡುವ ದುಡ್ಡು ಕೊಟ್ಟಿಲ್ಲ. ಅದರಿಂದ ನಮಗೆ ಹೊರೆ ಆಗಿದೆ. ಕೇಂದ್ರದಿಂದ ರಾಜ್ಯಕ್ಕೆ ಹೊರೆ ಹೆಚ್ಚುತ್ತಿದೆ. ಕೇಂದ್ರದ ವಿಬಿ ರಾಮ್ ಜೀ ಯೋಜನೆಯಿಂದಲೂ ರಾಜ್ಯ ಸರ್ಕಾರಕ್ಕೆ ಹೊರೆಯಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2026/01/02/cm-siddu-angry-on-mla-bharat-reddy-2026-01-02-14-27-11.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us