/newsfirstlive-kannada/media/media_files/2025/12/16/cm-siddaramaiah-in-session-2025-12-16-14-23-14.jpg)
ನಾನೇ ಐದು ವರ್ಷ ಸಿಎಂ ಎಂದ ಸಿದ್ದರಾಮಯ್ಯ
ವಿಧಾನಸಭೆಯಲ್ಲಿ ಇಂದು ಸಿಎಂ ಕುರ್ಚಿ ವಿಚಾರ ಪ್ರಸ್ತಾಪವಾಗಿದೆ. ಪದೇ ಪದೇ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಸದಸ್ಯರು ಕಾಲೆಳೆದಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಈಗಲೂ ನಾನೇ ಸಿಎಂ, ಮುಂದೆಯೂ ನಾನೇ ಸಿಎಂ ಎಂದು ಗುಡುಗಿದ್ದಾರೆ.
ಆಗ ಐದು ವರ್ಷ ನೀವೇ ಇರ್ತೀರಾ ಎಂದು ಆರ್. ಅಶೋಕ್ ಪ್ರಶ್ನಿಸಿದ್ದಾರೆ. ಜನ ಅಶೀರ್ವಾದ ಮಾಡಿದ್ದಾರೆ, ಐದು ವರ್ಷ ನಾನೇ ಇರುತ್ತೇನೆ ಎಂದು ಸಿಎಂ ಹೇಳಿದ್ದಾರೆ. . 140 ಜನ ಶಾಸಕರು ನಮ್ಮ ಪರ ಇದ್ದಾರೆ. ಐದು ವರ್ಷ ನಾವೇ ಇರುತ್ತೇವೆ. 2028ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಮುಂದೆಯೂ ನಿಮಗೆ ಜನ ಅವಕಾಶ ಕೊಡಲ್ಲ ಎಂದು ಅಶೋಕ್ ಮಾತಿಗೆ ಸಿಎಂ ಸಿದ್ದರಾಮಯ್ಯ ಕೌಂಟರ್ ಕೊಟ್ಟಿದ್ದಾರೆ.
ಈ ವೇಳೆ ಗೃಹ ಸಚಿವ ಪರಮೇಶ್ವರ್ ಮಧ್ಯಪ್ರವೇಶ ಮಾಡಿದ್ದಾರೆ. 140 ಶಾಸಕರು ಸಪೋರ್ಟ್ ಮಾಡಿದ್ದಾರೆ. ಅದಕ್ಕೆ ಐದು ವರ್ಷ ನಾನೇ ಅಂತಿದ್ದಾರಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ. ಪರಮೇಶ್ವರ್ ಮಾತ್ರ ನಿಮ್ಮ ಪರ ಇದ್ದಾರೆ ನೋಡಿ ಎಂದು ಆರ್. ಅಶೋಕ್ ಹೇಳಿದ್ದಾರೆ.
ನಾವು ಬಹಳ ಸ್ಪಷ್ಟವಾಗಿದ್ದೇವೆ, ನಮ್ಮಲ್ಲಿ ಹೈಕಮಾಂಡ್ ಇದೆ. ತೀರ್ಮಾನ ಮಾಡುತ್ತೆ. ನಮಗೆ 2013 ರಲ್ಲೂ ಜನ ಆಶೀರ್ವಾದ ಮಾಡಿದ್ರು, ಈಗಲೂ ನಮಗೆ ಜನ ಆಶೀರ್ವಾದ ಮಾಡಿದ್ದಾರೆ. ನಿಮಗೆ ಯಾವಾಗಲೂ ಆಶೀರ್ವಾದ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ನಾನು ಅನ್ನೋದು ನಾವು ಅಂತೀದ್ದೀರ ಎಂದು ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಕುಟುಕಿದ್ದಾರೆ. ನಾನು ಅನ್ನೋದು ಏಕವಚನ, ನಾವು ಅನ್ನೋದು ಬಹುವಚನ ಪ್ರಯೋಗ ಎಂದು ಸುರೇಶ್ ಕುಮಾರ್ ಸಿಎಂ ಸಿದ್ದರಾಮಯ್ಯ ಅವರಿಗೆ ವಚನ ಪಾಠ ಮಾಡಿದ್ದಾರೆ. ಅದಕ್ಕೆ ನಾನು, ನಾವು ಅಂತ ಹೇಳ್ತಿರೋದು ಎಂದು ಸಿದ್ದರಾಮಯ್ಯ ಅವರು ಸುರೇಶ್ ಕುಮಾರ್ ಮಾತಿಗೆ ತಿರುಗೇಟು ನೀಡಿದ್ದಾರೆ.
ಈ ವೇಳೆ ಬಿಜೆಪಿ ಸಚೇತಕ ಸುನೀಲ್ ಕುಮಾರ್ ಮಧ್ಯ ಪ್ರವೇಶ ಮಾಡಿದ್ದಾರೆ ನಾನು ಅನ್ನೋದು ಈಗ ನಾವು ಅಂತ ಬರ್ತಿದೆ. ಅಲ್ಲೇ ಇರೋದು ನೋಡಿ ಟ್ವಿಸ್ಟ್ ಎಂದು ಲೇವಡಿ ಮಾಡಿದ್ದಾರೆ. ನಾನೊಂದು ಪುಸ್ತಕ ಬರೆಯಬೇಕು ಅಂದುಕೊಂಡಿದ್ದೇನೆ. ನಮ್ಮಲ್ಲಿ ಚಾಣಕ್ಯ ತಂತ್ರ ಅಂತ ಪುಸ್ತಕ ಇದೆ. ನಾನು ಸಿದ್ದರಾಮಯ್ಯ ತಂತ್ರಗಾರಿಕೆ ಅಂತ ಬರೆಯೋಣ ಅಂತಿದ್ದೇನೆ ಎಂದು ಸದನದಲ್ಲಿ ಸಿಎಂ ತಂತ್ರ ಕುರಿತು ಅಶೋಕ್ ಕುಟುಕಿದ್ದಾರೆ.
ಪ್ರತಿಪಕ್ಷಗಳಿಂದ ಸಿಎಂ ಕುರ್ಚಿ ಬಗ್ಗೆ ಪ್ರಸ್ತಾಪ ಮಾಡಿದರೂ ತುಟಿಬಿಚ್ಚದೇ ಡಿಕೆಶಿ ಮೌನವಾಗಿದ್ದರು . ಸಿಎಂ ಗಾದಿ ವಿಷಯ ಪ್ರಸ್ತಾಪಿಸಿ ಸಿದ್ದರಾಮಯ್ಯ ಅವರ ಕಾಲೆಳೆಯುವ ಪ್ರಯತ್ನವನ್ನು ಆರ್. ಅಶೋಕ್ ಮಾಡಿದ್ದಾರೆ. ಈ ವೇಳೆ ಸಿಎಂ ಬೆನ್ನಿಗೆ ನಿಂತ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ . ವಿಧಾನಸಭೆಯಲ್ಲಿ ಸಿಎಂ ಕುರ್ಚಿ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದರೂ, ಡಿಸಿಎಂ ಡಿ.ಕೆ.ಶಿವಕುಮಾರ್ ಸದನದ ಕೊನೆಯ ಸಾಲಿನಲ್ಲಿ ನಯನಾ ಮೋಟಮ್ಮ ಬಳಿ ಮಾತನ್ನಾಡುತ್ತಿದ್ದರು.
ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೆಂಬಂತೆ ಡಿಕೆಶಿ ಕುಳಿತಿದ್ದರು.
/filters:format(webp)/newsfirstlive-kannada/media/post_attachments/wp-content/uploads/2024/12/SIDDU-SESSION.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us