ಕಳೆದ ಲೋಕಸಭೆ ಎಲೆಕ್ಷನ್ನಲ್ಲಿ ನಾವು 16 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ನಮ್ಮ ಇಂಟರ್ನಲ್ ಸರ್ವೇ ಹೇಳಿತ್ತು. ನಾವು ಗೆದ್ದಿರೋದು ಕೇವಲ 9 ಸ್ಥಾನ ಮಾತ್ರ. ರಾಹುಲ್ ಗಾಂಧಿ ಅವರು ದಾಖಲೆ ಇಟ್ಟುಕೊಂಡು ಎಲ್ಲ ಹೇಳಿದ್ದಾರೆ. ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗದ ದಾಖಲೆಗಳನ್ನು ನಾವು ಪ್ರಸ್ತಾಪ ಮಾಡಿರೋದು. ಒಂದು ರೂಮ್ನಲ್ಲಿ 80 ಜನ ವಾಸ ಮಾಡೋಕೆ ಆಗುತ್ತಾ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.
ಆ ರೂಮ್ನಲ್ಲಿ 80 ಜನ ಇದ್ದರು ಅವರು ವೋಟ್ ಹಾಕಿದ್ದಾರೆ. ಈ ಬಗ್ಗೆ ಸರ್ಚ್ ಮಾಡುತ್ತಿದ್ದೇವು. ಇದನ್ನು ಮಾಡೋವಷ್ಟರಲ್ಲಿ ಇದೆಲ್ಲಾ ಆಗಿದೆ. ಎಲೆಕ್ಷನ್ಗಳಲ್ಲಿ ಇವಿಎಂ, ವೋಟರ್ ಲಿಸ್ಟ್ನಲ್ಲಿ ಮ್ಯಾನುಪ್ಲೆಷನ್ ನಡೆಯುತ್ತಿದೆ. ರಾಹುಲ್ ಗಾಂಧಿ ಹೇಳಿರೋದೆಲ್ಲ ನನಗೆ ನಿಜ ಅನಿಸುತ್ತದೆ. ಸತ್ತವರೆಲ್ಲಾ ವೋಟ್ ಹಾಕಿದ್ರೆ ಅದಕ್ಕೆ ಚುನಾವಣಾ ಆಯೋಗ ಜವಾಬ್ದಾರಿ ತಾನೇ?. ಸತ್ತವರನ್ನೆಲ್ಲಾ ವೋಟ್ ಮಾಡೋಕೆ ಯಾಕೆ ಬಿಟ್ಟರು? ಎಂದು ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ