/newsfirstlive-kannada/media/media_files/2025/10/23/param-mbp-and-priyanaka-2025-10-23-13-12-10.jpg)
ಯತೀಂದ್ರ ಹೇಳಿಕೆಗೆ ಸಚಿವರುಗಳ ವಿಭಿನ್ನ ಪ್ರತಿಕ್ರಿಯೆ, ವ್ಯಾಖ್ಯಾನ
ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ನಿನ್ನೆ ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಉತ್ತರಾಧಿಕಾರಿ ಬಗ್ಗೆ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ರಾಜಕೀಯವಾಗಿ ಕೊನೆಗಾಲದಲ್ಲಿದ್ದಾರೆ ಎಂಬ ಅರ್ಥದಲ್ಲಿ ಯತೀಂದ್ರ ಹೇಳಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರಷ್ಟೇ ಸೈದ್ದಾಂತಿಕ ಬದ್ದತೆ, ವೈಚಾರಿಕತೆ ಸತೀಶ್ ಜಾರಕಿಹೊಳಿ ಅವರಿಗೆ ಇದೆ. ಅವರಿಗೆ ನಾಯಕತ್ವವನ್ನು ನೀಡಿ, ಮುನ್ನೆಡಸುವ ಶಕ್ತಿ, ಸಾಮರ್ಥ್ಯ ಇದೆ ಎಂದು ಹೇಳಿರುವ ಹೇಳಿಕೆಯು ಸಿದ್ದರಾಮಯ್ಯಗೆ ಸತೀಶ್ ಜಾರಕಿಹೊಳಿ ರಾಜಕೀಯ ಉತ್ತರಾಧಿಕಾರಿಯಾಗಲು ಬೆಂಬಲ ನೀಡಿದಂತೆ ಆಗಿದೆ. ಹೀಗಾಗಿ ಸಿದ್ದರಾಮಯ್ಯ ನಂತರ ಅವರ ಬೆಂಬಲ ಸತೀಶ್ ಜಾರಕಿಹೊಳಿ ಅವರಿಗೆ ಸಿಗುತ್ತಿದೆಯೇ ಎಂಬ ಚರ್ಚೆ ಕೂಡ ರಾಜ್ಯ ರಾಜಕೀಯ ವಲಯದಲ್ಲಿ ಶುರುವಾಗಿದೆ.
/filters:format(webp)/newsfirstlive-kannada/media/media_files/2025/10/22/yathindra-siddaramaiah-1-2025-10-22-16-48-49.jpg)
ಹೀಗಾಗಿ ಇಂದು ಬೇರೆ ಬೇರೆ ಕಾಂಗ್ರೆಸ್ ನಾಯಕರು, ಸಚಿವರುಗಳು ಯತೀಂದ್ರ ಹೇಳಿಕೆಗೆ ರಿಯಾಕ್ಟ್ ಮಾಡುತ್ತಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಯತೀಂದ್ರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ, ಸರ್ಕಾರದ ಸಚಿವರುಗಳು ವ್ಯಾಖ್ಯಾನ ಮಾಡುತ್ತಿದ್ದಾರೆ.
ಯತೀಂದ್ರ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್, ಕೈಗಾರಿಕಾ ಖಾತೆ ಸಚಿವ ಎಂ.ಬಿ.ಪಾಟೀಲ್, ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
/filters:format(webp)/newsfirstlive-kannada/media/media_files/2025/09/27/cm_siddu_parameshwar-2025-09-27-08-40-38.jpg)
ನಾಯಕತ್ವದ ಲೆಕ್ಕದಲ್ಲಿ ಯತೀಂದ್ರ ಮಾತಾಡಿಲ್ಲ ಅಂತ ನನಗೆ ಅನ್ನಿಸುತ್ತೆ. ಸಮಾಜದ ಬದ್ಧತೆ, ಪಕ್ಷದ ಬದ್ಧತೆ ಹಿನ್ನೆಲೆಯಲ್ಲಿ ಮಾತಾಡಿದ್ದಾರೆ . ಹಿಂದೆ ಅವರು ಅಹಿಂದ ಸಂಘಟನೆಯಲ್ಲಿದ್ದರು, ಅವರಿಗೆ ಆ ಬದ್ಧತೆ ಇದೆ ಅಂತ ಹೇಳಿರಬಹುದು, ಅದರಲ್ಲಿ ತಪ್ಪೇನಿಲ್ಲ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಸಿಎಂ ಸ್ಥಾನದ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಿದೆಯೇ ಎಂದು ಪ್ರಶ್ನಿಸಿದಾಗ, ಈ ಥರ ಚರ್ಚೆ ಏನೂ ನಡೆಯುತ್ತಿಲ್ಲ. ಎಲ್ಲರೂ ಇದರ ಬಗ್ಗೆ ನೂರು ಸ್ಪಷ್ಟನೆ ಕೊಟ್ಟಿದ್ದಾರೆ. ಸಿಎಂ ರೇಸ್ ಸೇರಿದಂತೆ ಯಾವುದಾದರೂ ರೇಸ್ ಇರಲಿ, ಹೈಕಮಾಂಡ್ ನಿರ್ಧಾರವೇ ಅಂತಿಮ . ಆ ಸಂದರ್ಭ ಬಂದಾಗ ಸಿಎಲ್‌ಪಿ ಸಭೆ ಕರೆಯುತ್ತಾರೆ, ಶಾಸಕರ ಅಭಿಪ್ರಾಯ ಪಡೆಯುತ್ತಾರೆ . ವೀಕ್ಷಕರು ಹೈಕಮಾಂಡ್ ಗೆ ವರದಿ ಕೊಟ್ಟು ನಂತರ ಘೋಷಣೆ ಆಗುತ್ತೆ, ಇದು ಪದ್ಧತಿ . ಇದನ್ನು ಶಾರ್ಟ್ ಕಟ್ ಹೇಗೆ ಮಾಡ್ತಾರೆ ಹೇಳಿ ? ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ನಾನು, ಸತೀಶ್, ಮಹಾದೇವಪ್ಪ ಕಾಫಿಗೆ ಸೇರಿದ್ದೇವು ಅಷ್ಟೇ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಕೂಡ ಪ್ರತಿಕ್ರಿಯಿಸಿದ್ದಾರೆ. ಸೈದ್ದಾಂತಿಕವಾಗಿ ಕೆಲವರು ನಮ್ಮ ಪಕ್ಷದಲ್ಲಿದ್ದಾರೆ . ಸತೀಶ್ ಜಾರಕಿಹೊಳಿ ಸೈದ್ದಾಂತಿಕವಾಗಿದ್ದಾರೆ . ಮೂಢನಂಬಿಕೆ ನಿವಾರಿಸಲು ಸಂಘಟನೆ ಮಾಡಿಕೊಂಡು ಕೆಲಸ ಮಾಡಿದ್ದಾರೆ . ಯತೀಂದ್ರನವರು ಹೇಳಿರುವುದರಲ್ಲಿ ತಪ್ಪೇನಿದೆ ? ಸಂವಿಧಾನ ಪರವಾಗಿ ಮೂಢನಂಬಿಕೆ ವಿರುದ್ಧ ಅವರು ಹೋರಾಟ ನಡೆಸುತ್ತಿದ್ದಾರೆ . ಅವರು ಕಾಂಗ್ರೆಸ್ ಪರ ಇದ್ದಾರೆ ಎಂದರೆ ತಪ್ಪೇನಿದೆ ? ಐಡಿಯಾಲಜಿ ಪ್ರಕಾರ ಯಾರಾದರೂ ವಾರಸುದಾರರು ಇರಬೇಕಲ್ಲವಾ . ಐಡಿಯಾಲಜಿಯನ್ನ ಅಧಿಕಾರ ಅನುಭವಿಸಿರೋರೆ ಮುಂದುವರೆಸಬೇಕು . ಸೈದ್ದಾಂತಿಕವಾಗಿ ಇವರು ಬದ್ಧರಿದ್ದಾರೆ ಎಂದರೆ ತಪ್ಪೇನಿದೆ? . ಯಾರಾದರೂ ಒಬ್ಬರು ಮುಂದುವರೆಸಲೇ ಬೇಕಲ್ಲವೇ? ತತ್ವ ಸಿದ್ದಾಂತವನ್ನ ಅವರಾಗಲಿ ನಾವಾಗಲಿ ಬೆಳೆಸಬೇಕು . ಸ್ವಾಭಿಮಾನದ ಬದುಕನ್ನ ಎಲ್ಲರಿಗೂ ಕೊಡಬೇಕು . ಅದರ ಬದ್ದತೆ ನಮ್ಮಮೇಲಿದೆ .
ಮೊದಲಿನಿಂದಲೂ ಡಿಕೆಶಿ ಸಾಹೇಬ್ರು ಭಕ್ತರಿದ್ದಾರೆ . ಈಗ ನೀವು ಪೋಕಸ್ ಮಾಡ್ತಿದ್ದೀರಿ ಅಷ್ಟೇ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/08/05/poddar-plumbing-company-mb-patil-2025-08-05-09-59-30.jpg)
ಇನ್ನೂ ಯತೀಂದ್ರ ಹೇಳಿಕೆಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕೂಡ ಪ್ರತಿಕ್ರಿಯಿಸಿದ್ದಾರೆ. ಯತೀಂದ್ರ ಯಾವ ಅರ್ಥದಲ್ಲಿ ಹೇಳಿದ್ದಾರೋ ಗಮನಿಸಬೇಕು . ಸಿದ್ದರಾಮಯ್ಯನವ್ರದ್ದು ಇದು ಕೊನೆಯ ಚುನಾವಣೆ ಆಗಿರಬಹುದು . ಮುಂದೆಯೂ ಅವರ ನಾಯಕತ್ವ ಅಗತ್ಯವಿದೆ . ಸಿದ್ದರಾಮಯ್ಯ ಅವರನ್ನು ಬಿಟ್ಟು ಮಾಡೋಕೆ ಆಗಲ್ಲ . ತುಮಕೂರಿಗೆ ಯತೀಂದ್ರ ಹೋಗಿದಿದ್ರೆ ಅಲ್ಲಿ ಪರಮೇಶ್ವರ್ ಬಗ್ಗೆ ಹೇಳ್ತಿದ್ರು . ಇದಕ್ಕೆಲ್ಲಾ ಸುಣ್ಣ ಬಣ್ಣ ಹಚ್ಚೋದು ಬೇಡ . ಸತೀಶ್ ಜಾರಕಿಹೊಳಿ ಪ್ರಮುಖ ನಾಯಕರು . ಸಿಎಂ ಆಗುವ ಎಲ್ಲ ಅರ್ಹತೆ ಸತೀಶ್ ಜಾರಕಿಹೊಳಿಗೆ ಇದೆ . ಆದರೆ, ನಮ್ಮಲ್ಲಿ ಈಗ ಸಿಎಂ ಕುರ್ಚಿ ಖಾಲಿ ಇಲ್ಲ. ಡಿ.ಕೆ ಶಿವಕುಮಾರ್, ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಅಂತಿಮ ಅಲ್ಲ . ಹೈಕಮಾಂಡ್ ತೀರ್ಮಾನವೇ ಅಂತಿಮ. ಸತೀಶ್ ಜಾರಕಿಹೊಳಿ ಸಮರ್ಥರಿದ್ದಾರೆ, ಸಂಘಟನಾ ಚತುರರು. 2028ಕ್ಕೆ ಸಿಎಂ ಆಗ್ತೇನೆ ಎಂದ್ರೆ ತಪ್ಪೇನಿದೆ ? . ನಾವು 2028ಕ್ಕೆ 150 ಸ್ಥಾನ ಗೆಲ್ಲುತ್ತೇವೆ . ಬಿಜೆಪಿಯವರ ಯೋಚನೆಗಳು ಯೋಜನೆಗಳಾಗಿಯೇ ಉಳಿಯುತ್ತವೆ . ಡೆಡ್ ಲೈನ್, ಡೆಡ್ ಲೈನ್ ಹಾಗೇ ಇರುತ್ತೆ ಎಂದು ಕೈಗಾರಿಕಾ ಖಾತೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಹೈಕಮಾಂಡ್ ಏಕಾಏಕಿ ತೀರ್ಮಾನ ಮಾಡಿದ್ರೂ ಯಾರು ಪ್ರಶ್ನೆ ಮಾಡೋಕೆ ಆಗೋದಿಲ್ಲ . ಶಾಸಕರ ಅಭಿಪ್ರಾಯವೂ ಮುಖ್ಯವೇ ಹೌದು . ಹೈಕಮಾಂಡ್ ಶಾಸಕರ ಅಭಿಪ್ರಾಯವನ್ನೂ ಕೇಳುತ್ತೆ . ಯಾವಾಗ ಏನು ಸೂಕ್ತವೋ ಅದನ್ನು ಹೈಕಮಾಂಡ್ ಮಾಡುತ್ತೆ ಎಂದು ಕೈಗಾರಿಕಾ ಖಾತೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us