/newsfirstlive-kannada/media/media_files/2025/10/28/knr-and-hc-mahadevappa-2025-10-28-12-16-40.jpg)
ಸಚಿವ ಮಹದೇವಪ್ಪ, ಮಾಜಿ ಸಚಿವ ಕೆ.ಎನ್.ರಾಜಣ್ಣ
ಕಾಂಗ್ರೆಸ್ ಗೆ ಸಿದ್ದರಾಮಯ್ಯ ಅನಿವಾರ್ಯ ಎಂಬ ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ವಿಚಾರಕ್ಕೆ ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ. ಯಾರು ಯಾರಿಗೂ ಅನಿವಾರ್ಯ ಅಲ್ಲ ಎಂದು ಮಹದೇವಪ್ಪ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯರಿಗೆ ಆಪ್ತರಾಗಿದ್ದು, ಸಿದ್ದು ಬೆಂಬಲಿಗರೇ ಆಗಿರುವ ಮಹದೇವಪ್ಪ ಹೀಗೆ ಯಾರೂ ಯಾರಿಗೂ ಅನಿವಾರ್ಯ ಅಲ್ಲ ಎಂದಿರುವುದು ಅಚ್ಚರಿಗೂ ಕಾರಣವಾಗಿದೆ.
ಕೆ.ಎನ್. ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಗೆ ಸಿದ್ದರಾಮಯ್ಯ ಅನಿವಾರ್ಯ ಅಲ್ಲ ಎಂದು ಮಹದೇವಪ್ಪ ಹೇಳಿದಂತಾಗಿದೆ. ಕಾಂಗ್ರೆಸ್ ಗೆ ಸಿದ್ದರಾಮಯ್ಯ ಅನಿವಾರ್ಯ ಎಂಬ ಹೇಳಿಕೆಗೆ ಕೆಎನ್‌ಆರ್ ಹಾಗೂ ಮಹದೇವಪ್ಪ ಭಿನ್ನ ಹೇಳಿಕೆ ನೀಡಿದ್ದಾರೆ. ಕೆ.ಎನ್.ರಾಜಣ್ಣ ಹಾಗೂ ಮಹದೇವಪ್ಪ ಇಬ್ಬರೂ ಸಿದ್ದರಾಮಯ್ಯ ಬೆಂಬಲಿಗರು. ಆದರೇ, ಈಗ ಮಹದೇವಪ್ಪ ಮಾತ್ರ ಸಿದ್ದರಾಮಯ್ಯ ಏನೂ ಕಾಂಗ್ರೆಸ್ ಗೆ ಅನಿವಾರ್ಯ ಅಲ್ಲ ಎಂದು ಹೇಳಿದ್ದು, ಸಿಎಂ ಕುರ್ಚಿಯಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸುವ ಬೆಳವಣಿಗೆ ನಡೆಯುತ್ತಿರುವ ಮುನ್ಸೂಚನೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ರಾಜಕೀಯಕ್ಕೆ ನಿವೃತ್ತಿ ಇಲ್ವಲಾ ? ಕೊನೆವರೆಗೂ ಜನರ ಪರವಾಗಿ ಕೆಲಸ ಮಾಡಬೇಕಾಗುತ್ತದೆ . ಯಾರು ಯಾರಿಗೂ ಅನಿವಾರ್ಯ ಅಲ್ಲ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ಪ್ರಜಾಪ್ರಭುತ್ವದ ಆಧಾರ ಸಂಸ್ಥೆ ಮಾಧ್ಯಮ . ಎಲ್ಲರು ಸೇರಿನೇ ಸಂಸ್ಥೆ ಕಟ್ಟೋದು . ಇವರಿದ್ದರೇ ಆಗುತ್ತೆ ಆಗಲ್ಲ ಅಂತ ಇರಲ್ಲ . ಇವೆಲ್ಲ ಅಂಧಾಭಿಮಾನದ ವಿಚಾರ . ಹೊಗಳುಭಟ್ಟತನ ಸರ್ವಾಧಿಕಾರ ಸೃಷ್ಟಿ ಮಾಡುತ್ತದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2024/05/SIDDU_MAHADEVAPPA_NEW.jpg)
ಮಂತ್ರಿಮಂಡಲ ರಚನೆ, ಸಿಎಂ ಮುಂದುವರೆಯುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು . ಸಿಎಂ ಪವರ್ ಶೇರ್ ಮಾಡಿಕೊಳ್ಳುತ್ತೇವೆ ಅಂದಿದ್ದಾರಾ ? ಹೈಕಮಾಂಡ್ ಹೇಳಿದ್ರೆ ಐದು ವರ್ಷ ನಾನೇ ಇರುತ್ತೇನೆ ಎಂದಿದ್ದಾರೆ, ಇದರಲ್ಲಿ ತಪ್ಪೇನು ? ಏನು ಆಗಬೇಕು ಆಗಬಾರದು ಅಂತ ಹೇಳೋದೆ ಹೈಕಮಾಂಡ್ . ಉಳಿದಂತೆ ಎಲ್ಲವೂ ಅಂತೆ ಕಂತೆಗಳು ಚರ್ಚೆ ಅಷ್ಟೇ . ಅದಕ್ಕೆ ಉತ್ತರ ಇಲ್ಲವೇ ಇಲ್ಲ, ನಾನೂ ಸಮರ್ಥನೂ ಅಲ್ಲ . ಅಧಿಕಾರ ಒಪ್ಪಂದ ಆಗಿದ್ರೆ ಯಾವತ್ತೋ ಏನೊ ಆಗಿಬಿಡೋದು . ಇದಕ್ಕೆ ರೆಕ್ಕೆ ಪುಕ್ಕ ಏನೂ ಇಲ್ಲ, ಹೈಕಮಾಂಡ್ ನವರು ಬಿಹಾರ ಚುನಾವಣೆ ಬ್ಯುಸಿಯಲ್ಲಿದ್ದಾರೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಸಿಎಂ ಮಾಡುವಲ್ಲಿ ದಲಿತ ಅದು ಇದು ಇಲ್ಲ . ಯಾರಾರು ಸಮರ್ಥರು ಇದ್ದಾರೋ ಅವರು ಆಗುತ್ತಾರೆ . ಆಡಳಿತದ ಅನುಭವ ಇದ್ದವರಿಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ . ಸಮದಾಯ ಸಹಜವಾಗಿ ಒತ್ತಾಯ ಮಾಡುತ್ತದೆ . ಎಲ್ಲರೂ ನಮಗೂ ಅವಕಾಶ ಸಿಗಲಿ ಎನ್ನುವುದರಲ್ಲಿ ತಪ್ಪಿಲ್ಲ . ಬೇರೆ ಬೇರೆ ರಾಜ್ಯದಲ್ಲಿ ದಲಿತರಿಗೆ ಕಾಂಗ್ರೆಸ್ ಪಾರ್ಟಿ ಸಿಎಂ ಮಾಡಿದೆ. ರಾಹುಲ್ ಗಾಂಧಿ ಬದ್ದತೆ ಇರುವ ಲೀಡರ್ . ಮಲ್ಲಿಕಾರ್ಜುನ ಖರ್ಗೆ ಅನುಭವಿ ರಾಜಕಾರಣಿ . ಸಂದರ್ಭ ಬಂದಾಗ ಪಾರ್ಟಿ ತೀರ್ಮಾನ ಮಾಡುತ್ತದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us