/newsfirstlive-kannada/media/media_files/2025/10/10/maria-corina-machado02-2025-10-10-15-20-49.jpg)
8 ತಿಂಗಳಲ್ಲಿ 8 ಯುದ್ಧ ನಿಲ್ಲಿಸಿದ್ದೇನೆ.. ಮಾತು ಕೇಳ್ಬೇಕು ಕೇಳ್ಬೇಕು.. ಪುಂಗಿ ಊದಿದ್ದೆ ಊದಿದ್ದು.. ನನಗೆ ನೊಬೆಲ್ ಬೇಕಂದರೆ ಬೇಕು ಅಂತ ಜಾತ್ರೆಯಲ್ಲಿ ಮಕ್ಕಳು ರೀತಿ ಈ ಟ್ರಂಪ್​​​ ಹೋದಲೆಲ್ಲ ಹಠ ಮಾಡಿದ್ದೆ ಮಾಡಿದ್ದು.. ಆದ್ರೆ, ಅಮೆರಿಕ ಅಧ್ಯಕ್ಷನಿಗೆ ನೊಬೆಲ್ ಸಮಿತಿ ಶಾಕ್ ನೀಡಿದೆ.. ವೆನೆಜುವೆಲಾದ ಮರಿಯಾ ಕೊರಿನಾ ಮಚಾಡೊಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದ್ದು, ಟ್ರಂಪ್ ಕನಸು ಭಗ್ನ ಮಾಡಿದೆ..
ಭಾರತ-ಪಾಕಿಸ್ತಾನ​, ಇರಾನ್​​​​​-ಇಸ್ರೇಲ್​​, ಹಮಾಸ್-ಇಸ್ರೇಲ್​​​, ಒಂದಾ ಎರಡಾ.. 8 ತಿಂಗಳಲ್ಲಿ 8 ಯುದ್ಧ ನಿಲ್ಲಿಸಿದ್ದೇನೆ.. ನನಗೆ ನೊಬೆಲ್​ ಶಾಂತಿ ಪ್ರಶಸ್ತಿ ಕೊಡ್ಲೇಬೇಕು ಅಂತ ಹಾತೋರೆಯುತ್ತಿದ್ದ ಟ್ರಂಪ್​ಗೆ ನಿರಾಸೆಯಾಗಿದೆ.
ಟ್ರಂಪ್​ ಆಸೆಗೆ ತಿರಸ್ಕಾರ.. ಮರಿಯಾಗೆ ‘ನೊಬೆಲ್​’ ಪುರಸ್ಕಾರ!
ಟ್ರಂಪ್ ಕನಸು ನುಚ್ಚುನೂರು.. ಅಪಹಾಸ್ಯಕ್ಕಿಡಾದ ಪ್ರೆಸಿಡೆಂಟ್​​
2025ರ ನೊಬೆಲ್​ ಶಾಂತಿ ಪ್ರಶಸ್ತಿ ಪ್ರಕಟವಾಗಿದೆ. ವೆನುಜುವೆಲಾದ ಅಪ್ರತಿಮ ಹೋರಾಟಗಾರ್ತಿ ಮರಿಯಾ ಕೊರಿನಾ ಮಚಾಡೊಗೆ ನೊಬೆಲ್​​ ಪ್ರಶಸ್ತಿ ಲಭಿಸಿದೆ. ಈ ಮೂಲಕ ನೊಬೆಲ್​​ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ, ಕಂಡ ಕಂಡೆಯಲ್ಲ ಹೋಗಿ ನೊಬಲ್​​ ಪೀಸ್​ ಪ್ರೈಜ್​ ಪ್ಲೀಸ್​​​ ಅಂತ ಬಾಯ್ಬಡ್ಕೊಂತಿದ್ದ ಟ್ರಂಪ್​ಗೆ ಮುಖಭಂಗವಾಗಿದೆ..
ಇದರಿಂದಾಗಿ ಅಮೆರಿಕಾದ ಶ್ವೇತ ಭವನವು, ನೊಬೆಲ್ ಆಯ್ಕೆ ಸಮಿತಿಯು ಶಾಂತಿಗಿಂತ ರಾಜಕೀಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಡೋನಾಲ್ಡ್ ಟ್ರಂಪ್ ರನ್ನು ಆಯ್ಕೆ ಮಾಡದೇ ಇರೋದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಿಡಿಕಾರಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ನೊಬೆಲ್ ಶಾಂತಿ ಪ್ರಶಸ್ತಿಯ ಆಯ್ಕೆ ಸಮಿತಿಯು ನಾವು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗಲ್ಲ. ಮಾಡಿರುವ ಕೆಲಸ ನೋಡಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. ಕೆಲಸ ಮತ್ತು ಅಲ್ಪ್ರೆಡ್ ನೊಬೆಲ್ ಇಚ್ಛೆಯಂತೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಜೋರ್ಗನ್ ವೆಟ್ನಿ ಫ್ರೈಡನೆಸ್ ಹೇಳಿದ್ದಾರೆ.
ಪ್ರತಿ ವರ್ಷ ನಮಗೆ ಸಾವಿರಾರು ಪತ್ರಗಳು ಬರುತ್ತಾವೆ. ಆದರೇ, ನಿಜವಾಗಿ ಶಾಂತಿಗಾಗಿ ಕೆಲಸ ಮಾಡಿದವರಿಗೆ ಗೌರವ ಸಿಗುತ್ತೆ ಎಂದು ಜೋರ್ಗನ್ ವೆಟ್ನಿ ಪ್ರೈಡನೆಸ್ ಹೇಳಿದ್ದಾರೆ.
ನೊಬೆಲ್ ಶಾಂತಿ ಪ್ರಶಸ್ತಿ ಸಿಗದ್ದಕ್ಕೆ ಡೋನಾಲ್ಡ್ ಟ್ರಂಪ್ ಹೇಳಿದ್ದೇನು?
ಇನ್ನೂ ಡೋನಾಲ್ಡ್ ಟ್ರಂಪ್ ಕೂಡ ಮರಿಯಾ ಕೊರಿನಾ ಮಚಾಡೋಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮರಿಯಾ ಕೊರಿನಾ ಮಚಾಡೋ ತಮಗೆ ಪೋನ್ ಕಾಲ್ ಮಾಡಿದ್ದರು. ನನ್ನ ಗೌರವಾರ್ಥ ಪ್ರಶಸ್ತಿ ಸ್ವೀಕರಿಸುವುದಾಗಿ ಹೇಳಿದ್ದಾರೆ. ಮರಿಯಾ ಕೊರಿನಾ ಮಚಾಡೋ ಕೂಡ ನಾನು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹ ವ್ಯಕ್ತಿ ಎಂದು ಹೇಳಿದ್ದಾರೆ. ಹಾಗಾದರೇ, ನೊಬೆಲ್ ಶಾಂತಿ ಪ್ರಶಸ್ತಿಯನ್ನು ನನಗೆ ಕೊಡಿ ಎಂದು ನಾನು ಕೇಳಲಿಲ್ಲ. ಮರಿಯಾ ಕೊರಿನಾ ಮಚಾಡೋ ಒಳ್ಳೆಯ ವ್ಯಕ್ತಿ ಎಂದು ಡೋನಾಲ್ಡ್ ಟ್ರಂಪ್ ಕೊಂಡಾಡಿದ್ದಾರೆ.
ಇನ್ನೂ 2025ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು 2024ರ ಕೆಲಸಕ್ಕಾಗಿ ಕೊಡಲಾಗುತ್ತಿದೆ. ನಾನು 2024 ರಲ್ಲಿ ಅಮೆರಿಕಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹೀಗಾಗಿ ಡೋನಾಲ್ಡ್ ಟ್ರಂಪ್ ಹಾಗೂ ಬೆಂಬಲಿಗರು ಕೂಡ ಮುಂದಿನ ವರ್ಷ 2025ರಲ್ಲಿ ಜಗತ್ತಿನಲ್ಲಿ ಶಾಂತಿ ಸ್ಥಾಪನೆಗಾಗಿ ಡೋನಾಲ್ಡ್ ಟ್ರಂಪ್ ಮಾಡಿದ ಕೆಲಸಗಳಿಗಾಗಿ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
2ನೇ ಬಾರಿಗೆ ಅಮೆರಿಕಾದ ಅಧ್ಯಕ್ಷಾಗಿ ಚುಕ್ಕಾಣಿ ಹಿಡಿದಿರುವ ಡೊನಾಲ್ಡ್ ಟ್ರಂಪ್, ಜಗತ್ತಿನ ಎಲ್ಲಾ ಯುದ್ಧಗಳನ್ನ ನಿಲ್ಲಿಸಿದ್ದೇನೆ, ನಾನು ಶಾಂತಿಪ್ರಿಯ, ನೊಬೆಲ್ ಶಾಂತಿ ಪ್ರಶಸ್ತಿಗೆ ನಾನೇ ಸೂಕ್ತ ವ್ಯಕ್ತಿ ಅಂತ ಹೇಳುತ್ತಿದ್ರು, ಇನ್ನು, ಭಾರತ ಮತ್ತು ಪಾಕ್​ ನಡುವೆ, ಕದನವಿರಾಮ ಮಾಡಿದ್ದೆ ನಾನು ಅಂತ ಬಾಯಿಪಾಠ್​ ​ ಮಾಡಿಕೊಂಡು ಊರೆಲ್ಲಾ ಹೇಳಿದ್ದನೇ ಹೇಳ್ಕೊಂಡು ಬರುತ್ತಿದ್ರು.. ಆದ್ರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿ, ಟ್ರಂಪ್​ ಹೆಸರನ್ನ ಕೈಬಿಟ್ಟು ಹೋರಾಟಗಾರ್ತಿ ಮಾರಿಯಾ ಮಚಾಡೊಗೆ ಪ್ರಶಸ್ತಿ ಘೋಷಣೆ ಮಾಡಿದೆ..
ಮಾರಿಯಾ ಮಚಾಡೊಗೆ ನೋಬೆಲ್​​!
ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಮರಿಯಾ
ಲ್ಯಾಟಿನ್ ಅಮೆರಿಕಾದಲ್ಲಿ ನಾಗರಿಕ ಹಕ್ಕಿಗಳ ಹೋರಾಟದ ಶಕ್ತಿ
ಸರ್ವಾಧಿಕಾರಿ ನಿಕೋಲಸ್ ಮಡುರೊ ವಿರುದ್ಧ ಮೆಟ್ಟಿ ನಿಂತವರು
ಬೆದರಿಕೆ, ಬಂಧನ & ರಾಜಕೀಯ ಕಿರುಕುಳಕ್ಕೆ ಮಾರಿಯಾ ಸೆಡ್ಡು
ವೆನೆಜುವೆಲಾದಲ್ಲಿ ಶಾಂತಿ ಸ್ಥಾಪನೆ, ಲಕ್ಷಾಂತರ ಜನರಿಗೆ ಸ್ಫೂರ್ತಿ
ಪ್ರಸ್ತುತ ವೆನೆಜುವೆಲಾದ ರಾಜಕಾರಣಿ, ಕೈಗಾರಿಕಾ ಎಂಜಿನಿಯರ್
ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಮರಿಯಾ ಕೊರಿನಾ ಮಚಾಡೊ, ಲ್ಯಾಟಿನ್ ಅಮೆರಿಕಾದಲ್ಲಿ ನಾಗರಿಕ ಹಕ್ಕಿನ ಹೋರಾಟದ ಪ್ರಮುಖ ಶಕ್ತಿ.. ದಶಕಗಳಿಂದ ಸರ್ವಾಧಿಕಾರಿ ನಿಕೋಲಸ್ ಮಡುರೊ ಆಡಳಿತ ಧಿಕ್ಕರಿಸಿ, ಬೆದರಿಕೆ, ಬಂಧನ ಮತ್ತು ರಾಜಕೀಯ ಕಿರುಕುಳವನ್ನ ಮೆಟ್ಟಿ ನಿಂತವರು.. ವೆನೆಜುವೆಲಾದಲ್ಲಿ ಶಾಂತಿ ಸ್ಥಾಪನೆಗೆ ಪ್ರಮುಖ ಕೊಡುಗೆ ನೀಡಿದ್ದು, ಲಕ್ಷಾಂತರ ಜನರಿಗೆ ಸ್ಫೂರ್ತಿ ಆಗಿದ್ದಾರೆ.. ಪ್ರಸ್ತುತ ವೆನೆಜುವೆಲಾದ ರಾಜಕಾರಣಿ ಮತ್ತು ಕೈಗಾರಿಕಾ ಎಂಜಿನಿಯರ್ ಅಷ್ಟೇ ಅಲ್ಲ, ವೆನೆಜುವೆಲಾದ ವಿಪಕ್ಷದ ಪ್ರಮುಖ ನಾಯಕಿಯಾಗಿದ್ದಾರೆ..
ಸದ್ಯ ಮಚಾಡೋಗೆ ನೊಬೆಲ್ ಶಾಂತಿ ದೊರೆತಿದ್ದು, ಜಗತ್ತು ಸಂಭ್ರಮಿಸಿದೆ. ಆದ್ರೆ, ಟ್ರಂಪ್‌ರನ್ನ ಬೇಸರದಲ್ಲಿ ಮುಳುಗಿಸಿದೆ..
ಟ್ರಂಪ್​ಗೆ ನೋ ನೊಬೆಲ್​​​​.. ವೈಟ್​​​ಹೌಸ್​​ ಕಿಡಿಕಿಡಿ
ನೊಬೆಲ್​ ಶಾಂತಿ ಪ್ರಶಸ್ತಿಗಾಗಿ ಸಾಕಷ್ಟು ಲಾಭಿ ಮಾಡಿದ್ದ ಟ್ರಂಪ್​ಗೆ ನೊಬೆಲ್​​ ಸಮಿತಿ ಟ್ರಂಪ್​​ಗೆ ಶಾಕ್​ ಕೊಟ್ಟಿದೆ.. ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಅವರನ್ನು ಕಡೆಗಣಿಸಿದಕ್ಕೆ ವೈಟ್​ ಹೌಸ್​​ ನೊಬೆಲ್ ಸಮಿತಿ ವಿರುದ್ಧ ಕಿಡಿಕಾರಿದೆ.. ನೊಬೆಲ್ ಸಮಿತಿಯು ಶಾಂತಿಗಿಂತ ರಾಜಕೀಯವನ್ನು ಹೆಚ್ಚು ಇಷ್ಟ ಪಡುತ್ತಿದೆ ಅಂತಾ ಕೆಂಡಕಾರಿದೆ..
ಮತ್ತೊಂದೆಡೆ, 2025ರ ಸಾಲಿನ ಆಯ್ಕೆಯಲ್ಲಿ ಡೊನಾಲ್ಡ್​​ ಟ್ರಂಪ್ ಹೆಸರು ಪರಿಗಣನೆಯಾಗಿರಲಿಲ್ಲ ಹೀಗಾಗಿ ನೊಬೆಲ್​ ಪ್ರಶಸ್ತಿ ಸಿಗಲಿಲ್ಲ ಅಂತ ಹೇಳಲಾಗ್ತಿದೆ.. ಅದೇನೇ ಇದ್ರೂ, ಮಾಜಿ ಅಧ್ಯಕ್ಷ ​ ಒಬಾಮರಂತೆ ನೊಬೆಲ್​ ಶಾಂತಿ ಪ್ರಶಸ್ತಿ ಪಡೆಯಬೇಕೆಂಬ ಟ್ರಂಪ್​​ ಕನಸು ಭಗ್ನಗೊಂಡಿದೆ.. ಇತ್ತ, ಟ್ರಂಪ್​​​ ಕನಸಿಗೆ ರಷ್ಯಾದ ಪುಟಿನ್​​ ಸೇರಿ ಜಾಗತಿಕ ನಾಯಕರು ಗೇಲಿಯ ವಸ್ತುವಾಗಿಸಿದ್ದಾರೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.