/newsfirstlive-kannada/media/media_files/2025/11/14/bihar-election-result-2025-11-14-08-06-35.jpg)
ಬಿಹಾರ ವಿಧಾನಸಭೆಯ 2025ರ ಚುನಾವಣಾ ಫಲಿತಾಂಶವನ್ನು 2020ರ ಚುನಾವಣಾ ಫಲಿತಾಂಶದೊಂದಿಗೆ ಹೋಲಿಸಿ ನೋಡಲಾಗುತ್ತಿದೆ. ಹೋಲಿಸಿ ನೋಡಿದಾಗ ಯಾವ ಪಕ್ಷಕ್ಕೆ ಎಷ್ಟು ಸೀಟು ಪ್ಲಸ್ ಆಗಿದೆ ಮತ್ತು ಯಾವ ಪಕ್ಷಕ್ಕೆ ಎಷ್ಟು ಸೀಟು ಮೈನಸ್ ಆಗಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಅದರ ವಿವರ ಇಲ್ಲಿದೆ ಓದಿ.
ಬಿಹಾರದಲ್ಲಿ ಬಿಜೆಪಿಗೆ 96 ಕ್ಷೇತ್ರಗಳಲ್ಲಿ ಮುನ್ನಡೆ, ಕಳೆದ ಭಾರಿಗಿಂತ 22 ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಸಿಕ್ಕಿದೆ.
ಜೆಡಿಯುಗೆ 84 ಕ್ಷೇತ್ರಗಳಲ್ಲಿ ಮುನ್ನಡೆ, ಕಳೆದ ಭಾರಿಗಿಂತ 41 ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಸಿಕ್ಕಿದೆ.
ಆರ್.ಜೆ.ಡಿ.ಗೆ 25 ಕ್ಷೇತ್ರಗಳಲ್ಲಿ ಮುನ್ನಡೆ, ಕಳೆದ ಭಾರಿಗೆ ಹೋಲಿಸಿದರೇ, 50 ಕ್ಷೇತ್ರ ಮೈನಸ್ ಆಗಿದೆ.
ಕಾಂಗ್ರೆಸ್ ಪಕ್ಷಕ್ಕೆ 2 ಕ್ಷೇತ್ರದಲ್ಲಿ ಮುನ್ನಡೆ, ಕಳೆದ ಭಾರಿಗೆ ಹೋಲಿಸಿದರೇ, 17 ಕ್ಷೇತ್ರ ಮೈನಸ್ ಆಗಿದೆ.
ಎಲ್‌ಜೆಪಿ ಪಕ್ಷಕ್ಕೆ 19 ಕ್ಷೇತ್ರದಲ್ಲಿ ಮುನ್ನಡೆ, ಕಳೆದ ಭಾರಿಗೆ ಹೋಲಿಸಿದರೇ, 18 ಕ್ಕೂ ಹೆಚ್ಚಿನ ಕ್ಷೇತ್ರ ಮುನ್ನಡೆ ಸಿಕ್ಕಿದೆ.
ಎಂಐಎಂ ಪಕ್ಷಕ್ಕೆ 6 ಕ್ಷೇತ್ರದಲ್ಲಿ ಮುನ್ನಡೆ, ಕಳೆದ ಭಾರಿಗೆ ಹೋಲಿಸಿದರೇ, 1 ಹೆಚ್ಚಿನ ಕ್ಷೇತ್ರದಲ್ಲಿ ಮುನ್ನಡೆ ಸಿಕ್ಕಿದೆ.
ಹಿಂದೂಸ್ತಾನ್ ಅವಾಮ್ ಮೋರ್ಚಾ ಪಕ್ಷಕ್ಕೆ 5 ಕ್ಷೇತ್ರದಲ್ಲಿ ಮುನ್ನಡೆ, ಕಳೆದ ಭಾರಿಗೆ ಹೋಲಿಸಿದರೇ, 1 ಹೆಚ್ಚಿನ ಕ್ಷೇತ್ರದಲ್ಲಿ ಮುನ್ನಡೆ ಸಿಕ್ಕಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us